ನಗರದಲ್ಲಿ ಅರ್ಥಪೂರ್ಣ ಹನುಮಜಯಂತಿ ಆಚರಣೆ

ಮೈಸೂರು:ಏ:27: ಹನುಮಜಯಂತಿ ಅಂಗ ವಾಗಿ “ಹನುಮಾನ್ ಚಾಲೀಸ ಪಠಿಸಿ, ಮಾಸ್ಕ್ ಧರಿಸಿ” ಸಂದೇಶ ರವಾನೆ
ಮೈಸೂರಿನ ವಿವೇಕಾನಂದನಗರದ ವೃತ್ತದಲ್ಲಿ ಶ್ರೀಹನುಮ ಜಯಂತಿಯ ಅಂಗವಾಗಿ ರಾಷ್ಟ್ರೀಯ ಹಿಂದೂ ಸಮಿತಿ ವತಿಯಿಂದ ಲಾಕ್ ಡೌನ್ ಸಂಧರ್ಭದಲ್ಲಿ ಸಾರ್ವಜನಿಕರು ಮನೆಯಲ್ಲೇ ಉಳಿದು ಕೊರೊನಾದಿಂದ ಜೀವ ಉಳಿಸಿಕೊಳ್ಳಲು “ಹನುಮಾನ್ ಚಾಲೀಸ ಪಠಿಸಿ, ಮಾಸ್ಕ್ ಧರಿಸಿ” ಧಾರ್ಮಿಕ ಆಚರಣೆಯನ್ನು ಸಾಮಾಜಿಕ ಸಂದೇಶದೊಂದಿಗೆ ಸಾರ್ವಜನಿಕರಿಗೆ ಉಚಿತವಾಗಿ ಹನುಮಾನ್ ಚಾಲೀಸ ಪುಸ್ತಕ ಮತ್ತು ಮಾಸ್ಕ್ ಸ್ಯಾನಿಟೈಜರ್ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷರಾದ ವಿಕಾಸ್ ಶಾಸ್ತ್ರಿ ಮಾತನಾಡಿ, ಸರ್ಕಾರದ ನಿಯಾಮಾನುಸಾರ ಕೊರೋನಾ ತಡೆಗಟ್ಟಿ ಜನಸಾಮನ್ಯರ ಜೀವ ಉಳಿಸಲು 15ದಿನಗಳ ಕಾಲ ಲಾಕ್ ಡೌನ್ ಪರಿಪಾಲಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿರುತ್ತದೆ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಿದೆ, ಧಾರ್ಮಿಕ ಕಾರ್ಯಕ್ರಮಗಳನ್ನು ಮನೆಯಲ್ಲೇ ಆಚರಿಸೋಣ ಹನುಮಾನ್ ಚಾಲೀಸ ಪಠಿಸೋಣ, ಕೋವಿಡ್19, 2ನೇ ಅಲೆಯಿಂದ ಹಿರಿಯನಾಗರೀಕರು ಮತ್ತು ಸಣ್ಣಮಕ್ಕಳ ಬಗ್ಗೆ ಹೆಚ್ಚು ಜಾಗೃತಿವಹಿಸಬೇಕು, ಕೋವಿಡ್ ಲಸಿಕೆ ಪಡೆದುಕೊಳ್ಳಲು ವಿವೇಕಾನಂದನಗರ ಅರವಿಂದನಗರ ಬಡಾವಣೆಯ ನಿವಾಸಿಗಳಿಗೆ ಕೊವಿಡ್ ಲಸಿಕೆ ಪಡೆಯಲು ಆಸ್ಪತ್ರೆಗೆ ತೆರಳಲು ಸಂಚಾರಿ ವ್ಯವಸ್ಥೆಗೆ ಸಹಾಯವಾಗುವಂತೆ ರಾಷ್ಟ್ರೀಯ ಹಿಂದೂ ಸಮಿತಿಯ ವತಿಯಿಂದ ಸಹಾಯವಾಣಿ ಯುವಕರ ತಂಡ ರಚಿಸಲಾಗಿದೆ ಇದರ ಉಪಯೋಗ ಪಡೆಯಲು ಹಿರಿಯ ನಾಗರೀಕರು 7406224633 ಸಂಪರ್ಕಿಸಬಹುದು ಎಂದರು.
ರಾಷ್ಟ್ರೀಯ ಹಿಂದೂ ಸಮಿತಿ ಅಧ್ಯಕ್ಷರಾದ ವಿಕಾಸ್ ಶಾಸ್ತ್ರಿ, ಪದಾಧಿಕಾರಿಗಳಾದ ಪ್ರದೀಪ್, ಗಗನ್, ತೇಜಸ್, ವರುಣ್, ವಿನಯ್, ಪ್ರವೀಣ್, ಚೇತನ್ ಇನ್ನಿತರರು ಇದ್ದರು