ನಗರದಲ್ಲಿ ಅಭೂತ ಪೂರ್ವ ಜಾನಪದ ಕಲಾಮೇಳ

ಕಲಬುರಗಿ:ಎ.23:ನಗರದ ಕಲಾಮಂಡಳದಲ್ಲಿ ರವಿವರ್ಮಾ ಕಲಾ ಸಾಹಿತ್ಯ ಸಾಂಸ್ಕøತಿಕ ಸೇವಾ ಸಂಸ್ಥೆ (ರಿ.) ಹಡಗಿಲ ಹಾರುತಿ ತಾ||ಜಿ|| ಕಲಬುರಗಿ. ಹಾಗೂ ಕನ್ನಡ ಸಂಸ್ಕøತಿ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಗ್ರಾಮೀಣ ಜಾನಪದ ಉತ್ಸವ-2021. ರಂದು ಅಭೂತ ಪೂರ್ವ ಏರ್ಪಡಸಲಾಗಿತ್ತು. ಈ ಜಾನಪದ ಉತ್ಸವ ಸಮಾರಂಭವನ್ನು ಖ್ಯಾತ ಮಕ್ಕಳ ಜಾನಪದ ಸಾಹಿತ್ಯಿಗಳಾದ ಎ.ಕೆ.ರಾಮೇಶ್ವರರವರು ಸಂಬಾಳ ಭಾರಿಸುವುದರೊಂದಿಗೆ, ಉದ್ಘಾಟನೇ ಚಾಲನೆ ನೀಡಿದರು. ಇದೆ ಸಂದರ್ಬದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣಿನಿಯ ಸಾಧನೆ ಮಾಡಿದ ಸಾದಕರಿಗೆ ಸೇವಾ ರತ್ನ ಪ್ರಶಸ್ತಿ ನೀಡಿ ಸತ್ಕರಸಲಾಯಿತ್ತು. ಅದೇ ರೀತಿ ಹಿರಿಯ ಕಲಾವಿದರಿಗೂ ಆತ್ಮಮಿಯ ಸನ್ಮಾನ ಮಾಡಿ ಗೌರವಸಲಾಯಿತ್ತು.

ಈ ಕಲಾ ಮೇಳವನ್ನು ಉದ್ಘಟಾಸಿ ಶ್ರೀ ಎ.ಕೆ.ರಾಮೇಶ್ವರ ಅವರು ಜಾನಪದ, ಕ¯,É ಸಾಹಿತ್ಯಾ, ಜನಾಂಗದ ಜೀವಾಳವಾಗಿದೆ. ಅವರು ಮಾತನಾಡಿದರೆ, ಹಸಿ ಗೋಡೆಗೆ ಅಳ್ಳ ಒಗೆದ್ದಂತೆ, ಅವರು ಕುಣಿದರೆ, ನಿಸರ್ಗವೆ, ಕುಣಿದುಕುಪ್ಪಳಸಿದ್ದಂತೆ, ಭಾಷವಾಗುತ್ತದೆ. ಇಂತಹ ಕಲೆ, ಸಾಹಿತ್ಯಾ ಬರದಿಂದ ಬದಲಾಗಿತ್ತಿರುವ ಇಂದಿನ ಸಮಾಜದ ಚಿತ್ರಣವನ್ನು ಮೈಗೊಡಿಸಿಕೊಂಡು ಬೆಳುದು ಬರಬೇಕು ಸಮಾಜ ನಿಂತ ನೀರಲ್ಲಾ, ಅದರಂತೆ ಕಲೆ,ಸಾಹಿತ್ಯವು ನಿಂತ ನೀರಲ್ಲಾ, ಅದು ನಿರಂತರವಾಗಿ ಹರಿದು ಬರಬೇಕು ಇಂದಿಗೂ ಜನಜೀವನವನ್ನು ತನ್ಮಯಗೊಳಿಸುತ್ತ ಬಂದ ಈ ಜನಪದ ಕಲೆ ಸಾಹಿತ್ಯಾ, ಮುಂದೆಯು ಹೊಸ ಹೊಸ ಆಯಾಮದೊಂದಿಗೆ ಬೆಳದು ಬರಬೇಕೆಂದು ಹೇಳುತ್ತಾ ಸಮಾಜ ಉನ್ನತಿಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು ಹಿರಿಯರಿಗೆ ಮಧ್ಯ ವಯಸ್ಸನವರಿಗೂ ಉದನ್ಮೂಖ ಸಾಧಕರಿಗೆ, ಪ್ರಶಸ್ತಿ ಪತ್ರ ನೆನಪಿನ ಕಾಣಿಕೆ ನೀಡಿ ಶಾಲುಹೊದಿಸಿ ಫಲ ತಾಂಬೂಲ ನೀಡಿ ಗೌರವಸಿದರು.

ಈ ಸಂದರ್ಬದಲ್ಲಿ ಡಾ|| ರಮೇಶ ಲಂಡನಕರ್ ರವರು ಮಾತನಾಡುತ್ತ ನಮ್ಮ ಭಾರತೀಯ ಸಂಸ್ಕøತಿ ಜಾನಪದ ಸಂಸ್ಕøತಿ, ಇಂದಿನ ಜಾಲತಾಣಗಳ ಪಾಶ್ಚಿಮತ್ಯ ಸಂಸ್ಕøತಿಗೆ ಒಳಗಾಗದೇ ಈ ನಮ್ಮ ನೆಲದ ಮೂಲ ಜನಪದ ಸಂಸ್ಕøತಿ ಉಳಿಸಬೇಕು ಬೆಳಯುವ ಸೀರಿ ಮೊಳಕೆಯಲ್ಲಿರುವಂತೆ.ನಮ್ಮ ಮಕ್ಕಳಿಗೆ ಚಿಕ್ಕಿಂದಿನಲ್ಲೇ ಹೇಳಿಕೊಡಬೇಕು, ಅಂದಾಗ ಮಾತ್ರ ಈ ನಮ್ಮ ಜನಪದ ಒಳ್ಳೆಯ ಸಂಸ್ಕಾರ ಉಳಿಯಲು ಸಾಧ್ಯವೆಂದು ಮಾತನಾಡಿದರು. ಸಾಧಕರ ಪರವಾಗಿ “ಭೀಮ ಸೇವಾ ರತ್ನ” ಪ್ರಶಸ್ತಿ ಪಡೆದ ಡಾ|| ಅಪ್ಪಗೆರೆ ಸೋಮಶೇಖರ, “ಮಾಧ್ಯಮ ಸೇವಾ ರತ್ನ” ಶ್ರೀ ಭಾವನಿಸಿಂಗ ಠಾಕೂರು ಅವರು ಡಾ|| ಎಸ್.ಎಸ್. ಗುಬ್ಬಿ, ಶ್ರೀ ಸಾಯಬಣ್ಣ ಹೋಳ್ಕರ ಅವರು ಕೃತಜ್ಞತೆಯ ಮಾತುಗಳನ್ನು ಆಡಿದರು.

ಶ್ರೀ ಧರ್ಮಣ್ಣ ಧನಿ, ಶ್ರೀಮತಿ ಪರ್ವಿನ ಸುಲ್ತಾನ ಶ್ರೀ ರಾಜಶೇಖರ ಹರಿಹರ ಖಜೂರಿ ಅವರು ಕವಿ ಸಾಹಿತಿಗಳನ್ನು ಗುರುತಿಸಿ ಗೌರವಿಸಿದ ರವಿವರ್ಮಾ ಕಲಾ ಸಾಹಿತ್ಯ ಸಾಂಸ್ಕøತಿಕ ಸಂಸ್ಥೆ ಕಾರ್ಯ ವೈಖರಿಯನ್ನು ಮೆಚ್ಚಕೊಂಡರು.

ಶ್ರೀ ಸಂತೋಷ ಕುಮಾರ ನವಲೆ, ಶ್ರೀ ಶಿವಕುಮಾರ ದೊಡ್ಡಮನಿ, ಕಲಾವಿದ ಎಲ್.ಕಲ್ಯಾಣಿ ಅವರು ಈ ಸಂಸ್ಥೆಯ ಬೆಳದವರಿಗೆ ನಾವು ಕಾರಿಣಿ ಭೂತನಾಗುತ್ತೇನೆಂದು ಕೈಂಕರಯವನ್ನು ವ್ಯಕ್ತಪಡಿಸಿದರು.

ನಂತರ ಶ್ರೀ ದಯಾನಂದ ಎಸ್.ದನ್ನೂರೆ ತಂಡದಿಂದ “ಹಂತಿ ಪದ” ಸುಖದೇವ ಕೋಳಿ ತಂಡದಿಂದ “ಮರಗಮ್ಮನ ಕುಣಿತ” ಶ್ರೀಮತಿ ತಾರಾಬಾಯಿ ತಂಡದಿಂದ “ಶೋಭಾನೆ ಪದ” ಹೀಗೆ ಸುಮಾರು ಹತ್ತು ವಿವಿಧ ಕಲಾ ತಂಡಗಳು ಭಾಗವಹಿಸಿ ಜಾನಪದ ಉತ್ಸವಕ್ಕೆ ಅಭೂತ ಪೂರ್ವ ಕಳೆ ತಂದುಕೊಟ್ಟಿವು.

ಕಲಾ ಮಹೋತ್ಸವದ ದಿವ್ಯ ಸಾನಿಧ್ಯವಹಿಸಿಕೊಂಡು ಪೂಜ್ಯ ಶ್ರೀ ಸಂಗಾನಂದ ಬಂತೇಜಿ ಅವರು ಆಶೀರ್ವಾದಿಸುತ್ತಾ ತಾವೇ ರಚಿಸಿದ “ಜೋಗಳ ಪದ ಹಾಡಿ ಸಮಾಜದ ಸಭಿಕರ ಗಮನ ಸೆಳದರು.

ಪ್ರಾರಂಭದಲ್ಲಿ ಶ್ರೀ ಎಚ್.ಎಸ್.ಬರಗಾಲಿ ಅವರು ಸಕಲರನ್ನು ಸ್ವಾಗತಿಸಿದರು, ಕಾರ್ಯದರ್ಶಿ ಶಿವಶಂಕರ ವಿ. ಪ್ರಾಸ್ತವಿಕವಾಗಿ ಮಾತನಾಡಿದರು ಈ ಸಭೆಯಲ್ಲಿ ಕಲಬುರಗಿ ಜಿಲ್ಲಾ ಜಾನಪದ ಹಂತಿಪದ ಅಧ್ಯಕ್ಷರಾದ ಎಂ.ಬಿ.ನಿಂಗಪ್ಪ ಆದರ್ಶ ಶಿಕ್ಷಕರಾದ ಶ್ರೀಮತಿ ಕಮಲದೇವಿ ಹೋಳ್ಕರ ಅವರು ಶ್ರೀ ಅಪ್ಪಸಾಬ ತೀರ್ಥ ಶ್ರೀ ಕಲಾವಿದರು ಉಪಸ್ಥಿತರಿದ್ದರು, ಕೊನೆಯದಾಗಗಿ ಶ್ರೀಮತಿ ಮಾಲಾ ಕಣ್ಣಿ ಕಾರ್ಯಕ್ರಮ ನಿರೂಪಿಸಿ ಒಂದಿಸಿದರು.

ನಂತರ ಉತ್ಸವದಲ್ಲಿ ಪಾಲಗೊಂಡ ಎಲ್ಲರಿಗೂ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.