ನಗರದಲ್ಲಿ ಅಪ್ಪು 2 ವರ್ಷದ ಪುಣ್ಯಸ್ಮರಣೆ

ಸಂಜೆವಾಣಿ ವಾರ್ತೆ
ಚಾಮರಾಜನಗರ, ಅ.30:- ನಗರದ ಶ್ರೀವೆಂಕಟೇಶ್ವರ ಹಿಂದೂ ಮಿಲಿಟರಿ ಹೋಟಲ್, ವೆಂಕಟೇಶ್ವರ ಫ್ಯಾಷÀನ್ ವತಿಯಿಂದ ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಅವರ 2 ನೇ ವಷರ್À ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು.
ಪವರ್ ಸ್ಟಾರ್ ಪುನೀತ್‍ರಾಜ್ ಕುಮಾರ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷÁ್ಷರ್ಚನೆ ಮಾಡಿ ಅನ್ಮಸಂತರ್ಪಣೆ ಮಾಡಲಾಯಿತು
ಪುಷÁ್ಷರ್ಚನೆ ಮಾಡಿದ ಹೋಟಲ್ ಮಾಲೀಕ ಶ್ರೀನಿವಾಸ ಮಾತನಾಡಿ, ಬಾಲನಟನಾಗಿ ಚಿತ್ರರಂಗ ಪ್ರವೇಶಿಸಿ, ಪವರ್ ಸ್ಟಾರ್ ಆಗಿ ಕನ್ನಡಿಗರ ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಪ್ರೀತಿಯಅಪ್ಪು, ಡಾಕ್ಟರ್ ಪುನೀತ್‍ರಾಜಕುಮಾರ್‍ರವರ ಪುಣ್ಯಸ್ಮರಣೆಯಂದುಅವರಿಗೆ ಪ್ರೀತಿ ಪೂರ್ವಕ ನಮನಗಳು. ಅತಿ ಚಿಕ್ಕ ವಯಸ್ಸಿನಲ್ಲಿ ಅವರು ಮಾಡಿದ ಸಾಧನೆ, ಗಳಿಸಿದ ಜನಪ್ರಿಯತೆ, ಕೈಗೊಂಡಜನಸೇವೆಯನ್ನು ವರ್ಣಿಸಲು ಪದಗಳೇ ಸಾಲದು. ನಮ್ಮ ಪ್ರೀತಿಯಅಪ್ಪು ಮತ್ತೆ ಹುಟ್ಟಿ ಬರಲಿ ಎಂದರು.
ಕಾರ್ಯಕ್ರಮದಲ್ಲಿ ಲಕ್ಷ್ಮೀ, ವೆಂಕಟೇಶ್, ಬಾಲಾಜಿ, ಚೇತನ್, ಉಮೇಶ್, ಮಹೇಶ್ ಇತರರು ಹಾಜರಿದ್ದರು.