ನಗರದಲ್ಲಿನ 750 ಕ್ಕೂ ಹೆಚ್ಚು ಹಂದಿ ಸ್ಥಳಾಂತರ

ಕಲಬುರಗಿ:ಮಾ.31:ಕಲಬುರಗಿ ಮಹಾನಗರ ಪಾಲಿಕೆಯು ತಮಿಳುನಾಡಿನ ಮಧುರೈಯಿಂದ ಹಂದಿ ಹಿಡಿಯುವ ತಂಡವನ್ನು ಕರೆತಂದು ನಗರದ ಕೆಳಕಂಡ ಬಡಾವಣೆಗಳಲ್ಲಿ ಬುಧವಾರ ಕಾರ್ಯಾಚರಣೆ ನಡೆಸಿ 750ಕ್ಕೂ ಹೆಚ್ಚು ಹಂದಿಗಳನ್ನು ಸ್ಥಳಾಂತರಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ ಅವರು ತಿಳಿಸಿದ್ದಾರೆ.
ಒಟ್ಟು 15 ಜನರನ್ನೊಳಗೊಂಡ ಹಂದಿ ಹಿಡಿಯುವ ತಂಡವು ಕಲಬುರಗಿ ನಗರದ ಗೋಲ್ಲೂರ ಗಲ್ಲಿ, ಕೇಂದ್ರ ಬಸ್ ನಿಲ್ದಾಣ, ಕಣ್ಣಿ ತರಕಾರಿ ಮಾರ್ಕೇಟ್, ಚಾಳಿ (ಹಿರಾಪುರ ವೃತ್ತ) ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿರುವ ಒಟ್ಟು 725ಕ್ಕೂ ಹೆಚ್ಚು ಬೀದಿ ಹಂದಿಗಳನ್ನು ಹಿಡಿದು ತಮಿಳುನಾಡಿನ ಮಧುರೈ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಮುಂದಿನ ದಿನಗಳಲ್ಲಿಯುವ ಸಹ ಈ ತರಹದ ಕಾರ್ಯಕ್ರಮವನ್ನು ರೂಪಿಸಿ ನಗರದಿಂದ ಹಂದಿಗಳ ಹಾವಳಿಯನ್ನು ನಿಯಂತ್ರಸಲು ಕ್ರಮಕೈಗೊಳ್ಳಲಾಗುತ್ತದೆ.
ಕಲಬುರಗಿ ಮಹಾನಗರ ಪಾಲಿಕೆಯ ಹಿರಿಯ ಪಶು ವೈದ್ಯಾಧಿಕಾರಿ ಡಾ. ಮಹ್ಮದ್ ಸಖಾವತ ಹುಸೇನ, ನೈರ್ಮಲ್ಯ ನಿರೀಕ್ಷಕರಾದ ನಾಗರಾಜ, ಬಸವರಾಜ ಪಾಣೆಗಾಂವ, ದೀಪಕ, ಬಸವರಾಜ ತಂಬಾಕೆ ಹಾಗೂ ಮತ್ತಿತರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು.