
ಸಿಂಧನೂರು.ನ.೦೭- ನಗರದ ಗಂಗಾವತಿ ರಸ್ತೆಯಲ್ಲಿ ವಿಭಾಜಕಗಳು (ಡಿವೈಡರ್) ಕೆಲವೊಂದು ಕಡೆ ದಾರಿ ಬಿಟ್ಟಿದ್ದು, ಇನ್ನೂ ಕೆಲವು ಕಡೆ ದಾರಿ ಬಿಟ್ಟಿಲ್ಲ ಇದು ಅನಾಹುತ ಗಳಿಗೆ ಕಾರಣವಾಗುತ್ತದೆ ಇದನ್ನು ಅರಿತು ಸಾರ್ವಜನಿಕರ ಅವಶ್ಯಕತೆ ತಕ್ಕಂತೆ ವ್ಯವಸ್ಥೆ ಮಾಡಿಕೊಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಸಿಂಧನೂರು ನಗರದ ದಿನಗಳೆದಂತೆ ಬೆಳೆಯುತ್ತಿದ್ದು, ವಾಹನ ದಟ್ಟಣೆ ಏರುತ್ತಿದ್ದು ಜೇವರ್ಗಿಯಿಂದ ಚಾಮರಾಜನಗರ ನಗರದ ರಾಷ್ಟ್ರೀಯ ಹೆದ್ದಾರಿ ೧೫೦ ಎ ರಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ರಸ್ತೆ ವಿಭಜಕಗಳನ್ನು (ಸಿಮೆಂಟ್ ಗೊಡೆ) ನಿರ್ಮಿಸಿದ್ದು ಇವುಗಳಲ್ಲಿ ರಸ್ತೆ ಮದ್ಯ ಹೆಚ್ಚಿನ ಕಡೆ ದಾರಿ ಬಿಟ್ಟು ಕೊಟ್ಟಿದ್ದು ,ಉದ್ದೇಶ ಒಳ್ಳೆಯದು ಆದರೆ ಕೆಲವೊಂದು ಅಪಘಾತಗಳು ಸಂಭವಿಸಿವೆ. ಇದನ್ನು ಅರಿತು ಪಾದಚಾರಿಗಳು ,ದ್ವಿಚಕ್ರ ವಾಹನ ಸೇರಿದಂತೆ ಅವಶ್ಯಕತೆ ತಕ್ಕಂತೆ ವಿಭಾಜಕಗಳಲ್ಲಿ ದಾರಿ ಮಾಡಿಕೊಡುವ, ಅವಶ್ಯಕತೆ ಇಲ್ಲದಿದ್ದಲ್ಲಿ ಅವುಗಳನ್ನು ಬಂದ್ ಮಾಡಬೇಕು ಎಂದು ಮನವಿಯನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ತಾಲುಕ ಅಧ್ಯಕ್ಷ ಗಂಗಣ್ಣ ಡಿಶ್, ಜಿಲ್ಲಾ ಉಪಾಧ್ಯಕ್ಷ ಎಸ್.ದೇವೇಂದ್ರ ಗೌಡ, ಜಿಲ್ಲಾ ಸಂಚಾಲಕ ರಾಮಕೃಷ್ಣ ಭಜಂತ್ರಿ, ಕಾಳಪ್ಪ ಮೇಸ್ತ್ರಿ, ವಿರೇಶ ಮಲ್ಕಾಪುರ, ಸೂರಿ ಆರ್‌ಎಕ್ಸ್, ಚಂದ್ರು ಜನತಾ ಕಾಲೋನಿ, ಸವರಾಜ ಟೇಲರ್, ಭಾಷಾಸಾಬ, ಲಕ್ಷ್ಮೀ ಪತ್ತಾರ ಸೇರಿದಂತೆ ಅನೇಕರು ಮನವಿ ಸಲ್ಲಿಸಿ ಒತ್ತಾಯಿಸಿದರು.