ನಗರದಲ್ಲಿ
ತುಮಕೂರು ಜೋನ್ ಕ್ರಿಕೆಟ್ ಪಂದ್ಯಾವಳಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.13: ನಗರದ ವೀರಶೈವ ಮತ್ತು ಆರ್ ವೈ ಎಂ ಸಿ ಕಾಲೇಜು ಕ್ರಿಕೆಟ್ ಗ್ರೌಂಡ್ ನಲ್ಲಿ  ಬಿಸಿಸಿಐ ನಿಂದ ತುಮಕೂರು ಜೋನ್ ಮಟ್ಟದ 16 ವರ್ಷದೊಳಗಿನ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದೆ.
ಎರೆಡು ಮೈದಾನದಲ್ಲಿ ತುಮಕೂರು, ಬಳ್ಳಾರಿ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ತಂಡಗಳು ಭಾಗವಹಿಸಿವೆ.
ಪ್ರತಿ ತಂಡವು ಒಂದರ ಮೇಲೋಂದು ಪಂದ್ಯಗಳನ್ನು ಎದರಿಸಲಿವೆ. ಬಳ್ಳಾರಿ ತಂಡವು ನಿನ್ನೆ ದಾವಣಗೆರೆ ತಂಡದ ಮೇಲೆ ವಿಜಯ ಸಾಧಿಸಿದೆ. ಇಂದು ತುಮಕೂರು ಮತ್ತು ದಾವಣಗೆರೆ ಹಾಗು ಬಳ್ಳಾರಿ ಮತ್ತು ಚಿತ್ರದುರ್ಗ ತಂಡದ ನಡುವೆ 50 ಓವರ್ ಗಳ ಪಂದ್ಯಗಳು ನಡೆದಿದ್ದವು.
ಈ‌ ಪಂದ್ಯಗಳಲ್ಲಿ ಉತ್ತಮವಾಗಿ ಆಟವಾಡುವ ಆಟಗಾರರನ್ನು ಆಯ್ಕೆ ಮಾಡಿ ತುಮಕೂರು ಜೋನ್ ತಂಡವನ್ನು ಆಯ್ಕೆ ಮಾಡಲಿದೆಯಂತೆ.

Attachments area