ನಗರಗಳು ಅಸಂಖ್ಯಾತ ಜನರ ಒಡಲು

ಕಲಬುರಗಿ,ಅ.31: ನಗರಗಳು ಮೂಲಭೂತ ಸೌಕರ್ಯಗಳಿಂದ ಕೂಡಿರುವುದರಿಂದ ಪ್ರಸ್ತುತವಾಗಿ ಹೆಚ್ಚಿನ ಜನರು ನಗರಗಳತ್ತ ಮುಖ ಮಾಡುತ್ತಿದ್ದಾರೆ. ಶಿಕ್ಷಣ, ಆರೋಗ್ಯ ಸೇರಿದಂತೆ ಮುಂತಾದ ಸೌಲಭ್ಯಗಳು ದೊರೆಯುತ್ತವೆ. ನಗರಗಳಲ್ಲಿ ವಿವಿಧ ಉದ್ಯಮಗಳು, ಕೈಗಾರಿಕೆಗಳು, ವ್ಯಾಪಾರ-ವಹಿವಾಟುಗಳು ಜರುಗುವುರಿಂದ ಸಾಕಷ್ಟು ಉದ್ಯೋಗಾವಕಾಶಗಳು ದೊರೆಯುತ್ತವೆ.ನಗರಗಳು ಅಸಂಖ್ಯಾತ ಜನರಿಗೆ ಉದ್ಯೋಗವನ್ನು ನೀಡುವ ಮೂಲಕ ಒಡಲಾಗಿ ಕೆಲಸ ಮಾಡುತ್ತಿವೆ ಎಂದು ಅರ್ಥಶಾಸ್ತ್ರ ಉಪನ್ಯಾಸಕ ಎಚ್.ಬಿ.ಪಾಟೀಲ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಜೆ.ಆರ್ ನಗರದಲ್ಲಿರುವ ಶ್ರೇಯಸ್ ಟ್ಯೂಟೋರಿಯಲ್ಸ್ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ‘ವಿಶ್ವ ನಗರಗಳ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಬಡತನ, ನಿರುದ್ಯೋಗ ನಿವಾರಣೆಯಲ್ಲಿ ನಗರಗಳ ಪಾತ್ರ ಪ್ರಮುಖವಾಗಿದೆ. ಸರ್ಕಾರಕ್ಕೆ ಸಾಕಷ್ಟು ಆದಾಯ ಒದಗಿಸಿಕೊಡುತ್ತವೆ. ಆರ್ಥಿಕ ಭದ್ರತೆಯನ್ನು ನೀಡುತ್ತವೆ. ಸಾರಿಗೆ, ಶಿಕ್ಷಣ, ಆಧುನಿಕತೆ ನಗರಗಳಲ್ಲಿ ಕಂಡುಬರುತ್ತವೆ. ನಗರಗಳನ್ನು ಯೋಜನಾಬದ್ಧವಾಗಿ ನಿರ್ಮಿಸುವುದು ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಅಸ್ಲಾಂ ಶೇಖ್, ಶಿವಯೋಗಪ್ಪ ಬಿರಾದಾರ, ಅಶ್ವಿನಿ ನಾಕಮನ್, ಲಕ್ಷ್ಮೀ ತಾರಾಪುರ, ಪ್ರವೀಣಕುಮಾರ ಕಾರಬಾರಿ, ಸೋಹೆಲ್ ಶೇಖ್, ಪಾಯಲ್ ಹಿಬಾರೆ, ಸಾನಿಯಾ ಶೇಖ್, ಪ್ರಿಯಾಂಕಾ ದೋಟಿಕೊಳ್ಳ, ಐಶ್ವರ್ಯ ಬಿರಾದಾರ ಸೇರಿದಂತೆ ಮತ್ತಿತರರಿದ್ದರು.