ನಗರಕ್ಕೆ 4 ದಿನ ನೀರಿಲ್ಲ

ಕಲಬುರಗಿ,ನ.12-ನಗರಕ್ಕೆ ನೀರು ಸರಬರಾಜು ಮಾಡುವ ಭೀಮಾ ನದಿಯ ಶೋರಗುಂಬಜ್ ಮತ್ತು ಕೋಟನೂರ ಜಲಶುದ್ಧೀಕರಣ ಕೇಂದ್ರದಲ್ಲಿರುವ ನೆಲಮಟ್ಟದ ಜಲಸಂಗ್ರಹಗಾರಗಳನ್ನು ಸ್ವಚ್ಛಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ ಸರಡಗಿಯ ಪಂಪಿನ ಮನೆಯಲ್ಲಿರುವ 1200 ಮಿ.ಮೀ ವ್ಯಾಸದ ಕೊಳಗೆ ಮಾರ್ಗ, ಫರತಾಬಾದ ಹತ್ತಿರವಿರುವ 900 ಮಿ.ಮೀ. ವ್ಯಾಸದ ಕೊಳವೆ ಮಾರ್ಗ, ಹೈಕೋರ್ಟ ಹತ್ತಿರವಿರುವ 900 ಮಿ.ಮೀ. ವ್ಯಾಸದ ಕೊಳವೆ ಮಾರ್ಗ, ಆಳಂದ ರಸ್ತೆಯ ಶೆಟ್ಟಿ ಕಾಂಪ್ಲೆಕ್ಸ್ ಹತ್ತಿರ, ಸಂಗಮೇಶ್ವರ ಸಭಾಗೃಹ ಹತ್ತಿರ 600 ಮಿ.ಮೀ. ವ್ಯಾಸದ ಕೊಳವೆ ರ್ಮಾ ಮತ್ತು ರಿಂಗ್ ರೋಡ್ ಡಬರಾಬಾದ ಹತ್ತಿರವಿರುವ ಕೊಳವೆ ಮಾರ್ಗಗಳ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಆದ್ದರಿಂದ ನ.14 ರಿಂದ 17 ರವರೆಗೆ ನಗರಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೆಯುಡಬ್ಲ್ಯೂ ಎಸ್.ಎಂ.ಪಿ ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಕಾರಣ ನಗರದ ಸಾರ್ವಜನಿಕರು ಕೆಯುಐಡಿಎಫ್‍ಸಿ ಕೆಯುಡಬ್ಲ್ಯೂಎಂಪಿ ಹಾಗೂ ಎಲ್ ಆ್ಯಂಡ್ ಟಿ ಲಿಮಿಟೆಡ್ ಕಂಪನಿಯೊಂದಿಗೆ ಸಹಕರಿಸಬೇಕು ಎಂದು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.