ನಗರಕ್ಕೆ ಪ್ರಜಾಧ್ವನಿ ಯಾತ್ರೆ ತಂಡ:ನೀರಲಕೇರಿ

ಧಾರವಾಡ,ಮಾ3: ಇಂದು ಸಂಜೆ 4 ಗಂಟೆಗೆ ಧಾರವಾಡದ ಕಲಾಭವನದ ಕಡಪ ಮೈದಾನದಲ್ಲಿ ಕಾಂಗ್ರೆಸ್ ಪಕ್ಷದ ಪ್ರಜಾ ಧ್ವನಿ ಯಾತ್ರೆ ತಂಡ ಆಗಮಿಸಲಿದೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರರಾದ ಪಿ.ಎಚ್.ನೀರಲಕೇರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಪಶ್ಚಿಮ 74 ವಿಧಾನಸಭಾ ಕ್ಷೇತ್ರದ ಪ್ರಜಾದ್ವನಿ ಸಮಾವೇಶ ಜರುಗಲಿದ್ದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಈ ಪ್ರಜಾದ್ವನಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ರಾಜ್ಯ ಜನವಿರೋಧಿ ಸರ್ಕಾರ ಇಂದು ಬೆಲೆ ಏರಿಕೆ ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆಗಳು ಇಂತಹ ವ್ಯಾಪಕ ಸಮಸ್ಯೆಗಳನ್ನು ಎದುರಿಸುತ್ತಿದ್ದು ರಾಜ್ಯದ ಜನರು ಸಂಪೂರ್ಣ ಸರ್ಕಾರದ ವಿರುದ್ಧ ನಿಂತಿದ್ದಾರೆ ಎಂದರು.
ಸತತವಾಗಿ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ ಅಡಿಗೆಗೆ ಬಳಸುವ ಎಣ್ಣೆ ಹಾಗೂ ದಿನಸಿ ಪದಾರ್ಥಗಳ ಬೆಲೆ ಗಗನಕೇರಿದ್ದು ಅಡುಗೆ ಇಂಧನ ಭಾರಿ ಏರಿಕೆಯಾಗಿದೆ .ಇಂಥ ಪರಿಸ್ಥಿತಿಯಲ್ಲಿ ಮಧ್ಯಮ ವರ್ಗದವರು ಬಡವರು ಬದುಕುವುದು ಕಷ್ಟವಾಗಿದೆ ಎಂದರು.
ಕಾಂಗ್ರೆಸ್ ಪಕ್ಷಕ್ಕೆ ಬಡವರ ಬಗ್ಗೆ ಈ ನಾಡಿನ ಬಗ್ಗೆ ಈ ನೆಲದ ಬಗ್ಗೆ ಕಾನೂನಿನ ಬಗ್ಗೆ ಅಪಾರವಾದಂತಹ ಗೌರವಿದ್ದು ಮುಂಬರುವ ದಿನಗಳಲ್ಲಿ ಈ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತೆಸೆದು ಕಾಂಗ್ರೆಸ್ ಪಕ್ಷವನ್ನು ಮತ್ತೊಮ್ಮೆ ರಾಜ್ಯದಲ್ಲಿ ಪ್ರತಿಷ್ಠಾಪಿಸುವ ಸಂಕಲ್ಪ ಮಾಡಿರುವ ಈ ರಾಜ್ಯದ ಜನತೆಗೆ ಶಕ್ತಿ ತುಂಬಲು ನಿಮ್ಮೊಂದಿಗೆ ನಾವಿದ್ದೇವೆ ಎನ್ನುವ ಮೂಲಕ ಇಡೀ ನಾಡಿನ ಉದ್ದಗಲಕ್ಕು ಪ್ರಯಾಣಿಸುತ್ತಿರುವ ಕಾಂಗ್ರೆಸ್ ಪಕ್ಷದ ನಾಯಕರು ಇಂದು ಸಂಜೆ 4 ಘಂಟೆಗೆ ಕಲಾಭವನ ಆವರಣದ ಕಡಪಾ ಮೈದಾನದಲ್ಲಿ ಹುಬ್ಬಳ್ಳಿ ಧಾರವಾಡ ಪಶ್ಚಿಮ 74 ವಿಧಾನಸಭಾ ಕ್ಷೇತ್ರದ ಪ್ರಜಾ ಧ್ವನಿ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಿದ್ದಣ್ಣ ಕಂಬಾರ,ಸಂಗೊಳ್ಳಿರಾಯಣ್ಣ ಇನ್ನಿತರರು ಉಪಸ್ಥಿತರಿದ್ದರು.