ನಗನೂರ ಗ್ರಾಮದಲ್ಲಿ ವಿಶ್ವಕರ್ಮ ಪೂಜಾ ಮಹೋತ್ಸವ

ಕೆಂಭಾವಿ: ಅ.11:ವಿಶ್ವಕರ್ಮರು ಜಗತ್ತನ್ನೇ ನಿರ್ಮಿಸುತ್ತಾರೆ. ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಸದೃಢರಾಗಬೇಕಾದರೆ ಸಮುದಾಯ ಸಂಘಟನೆಯಾಗಬೇಕು ಎಂದು ಶಹಾಪುರ ಏಕದಂಡಗಿ ಮಠದ ಪೂಜ್ಯ ಕಾಳಹಸ್ತೇಂದ್ರ ಸ್ವಾಮಿಗಳು ಹೇಳಿದರು.
ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ವಿಶ್ವಕರ್ಮ ಸಮಾಜ ಸೇವಾ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವಕರ್ಮ ಪೂಜಾ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಡೀ ವಿಶ್ವದಲ್ಲೇ ನಾನಾ ಬಗೆಯ ಕಲೆಗಳನ್ನು ಸೃಷ್ಟಿಸಿ, ಧಾರ್ಮಿಕ ಮತ್ತು ಸಂಸ್ಕøತಿಕ ಪರಂಪರೆಯನ್ನು ಎತ್ತಿಹಿಡಿದು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕುತ್ತಿದ್ದಾರೆ. ಹೀಗಾಗಿ ವಿಶ್ವಕರ್ಮವು ಸಾಮಾಜಿಕವಾಗಿ ಸಂಘಟನೆಯಲ್ಲಿ ದಿಟ್ಟ ಹೆಜ್ಜೆ ಇಟ್ಟಾಗ ಮಾತ್ರ ನಾನಾ ಕ್ಷೇತ್ರಗಳಲ್ಲಿ ನಮ್ಮ ಸೇವೆ ಪ್ರದರ್ಶಿಸಬಹುದು. ಕೇವಲ ಆಚರಣೆ ಮಾಡಿದರೆ ಸಾಲದು. ಅವುಗಳನ್ನು ಕಾರ್ಯರೂಪಕ್ಕೆ ತರುವ ಕೆಲಸವಾಗಬೇಕು ಎಂದು ಹೇಳಿದರು.
ಶಹಾಪುರ ಏಕದಂಡಗಿ ಮಠದ ಪೂಜ್ಯ ಹಜೇಂದ್ರ ಸ್ವಾಮೀಜಿ ಮಾತನಾಡಿ, ವಿಶ್ವಕರ್ಮರು ಶ್ರಮಜೀವಿಗಳಾಗಿದ್ದು, ನಾನಾ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ಹೀಗಾಗಿ ಸಮಾಜದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಏಳಿಗೆ ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಲ್ಲಣ್ಣ ವಿಶ್ವಕರ್ಮ ವಹಿಸಿದ್ದರು. ಈ ಸಂದರ್ಭದಲ್ಲಿ ವಿಶ್ವಕರ್ಮ ಯುವ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಸೈದಾಪೂರ, ಮನೋಹರ ವಿಶ್ವಕರ್ಮ ಏವೂರ, ಗುರುನಾಥ ವಿಶ್ವಕರ್ಮ, ಶರಣು ವಡಿಗೇರಿ, ಶಾಂತಣ್ಣ, ನಾಗಣ್ಣ, ದೇವಣ್ಣ, ಬಸವರಾಜ, ವಿಶ್ವನಾಥ, ಹಜ್ಜಣ್ಣ ಚೆನ್ನೂರ, ಶ್ರೀಶೈಲ, ಪವನ, ಚಂದ್ರಶೇಖರ ಏವೂರ, ಗುರು ಮಲ್ಲಾ (ಬಿ), ಶಿವಣ್ಣ ಮಲ್ಲಾ (ಬಿ), ಮಲ್ಲೇಶಪ್ಪ ಏವೂರ, ಗಂಗಣ್ಣ ಮಲ್ಲಾ (ಬಿ), ಶಿವಣ್ಣ, ಸುನೀಲ್, ಚಂದ್ರಶೇಖರ, ಅರುಣ, ಸುಗಣ್ಣ ಸೇರಿದಂತೆ ಇತರರಿದ್ದರು.
ಶರಣಪ್ಪ ಪತ್ತಾರ, ಹೊನ್ನಪ್ಪ ಚೆನ್ನೂರ, ಅಣ್ಣಾರಾವ್ ಯಡ್ರಾಮಿ ಅವರಿಂದ ಸಂಗೀತಾ ಸೇವೆ ಜರುಗಿತು. ಪ್ರಭಾಕರ ವಿಶ್ವಕರ್ಮ ಸ್ವಾಗತಿಸಿದರು. ನಾಗಭೂಷಣ ಪತ್ತಾರ ನಿರೂಪಿಸಿ ವಂದಿಸಿದರು.