ನಗನೂರಲ್ಲಿ ಮಹಾನಾಯಕ ಧಾರಾವಾಹಿ ಬ್ಯಾನರ್ ಉದ್ಘಾಟನೆ

ಕೆಂಭಾವಿ:ಅ.28:ಡಾ. ಬಾಬಾ ಸಾಹೇಬ ಅಂಬೇಡ್ಕರ ಅವರು ತಮ್ಮಲ್ಲಿರುವ ಅಪಾರ ಜ್ಞಾನ ಹಾಗೂ ಬುದ್ಧಿ ಶಕ್ತಿಯಿಂದ ದೇಶಕ್ಕೆ ಸಂವಿಧಾನ ನೀಡಿ ಸರ್ವ ಸಮುದಾಯಗಳಿಗೆ ಸಮಾನ ಅವಕಾಶ ಒದಗಿಸಿದ್ದಾರೆ. ಹೀಗಾಗಿ ಭಾರತ ಜಗತ್ತಿನಲ್ಲಿಯೇ ಅತ್ಯಂತ ಮಾದರಿ ರಾಷ್ಟ್ರವೆಂಬ ಹೆಗ್ಗಳಿಕೆಗೆ ಕಾರಣವಾಗಿದೆ ಎಂದು ದಲಿತ ಮುಖಂಡ ಡಾ. ನಿಲಕಂಠ ಬಡಿಗೇರ ಹೇಳಿದರು.

ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ ಅವರ ಜೀವನ ಚರಿತ್ರೆ ಆಧಾರಿತ ಮಹಾನಾಯಕ ಧಾರವಾಹಿ ಪ್ರಸಾರದ ಬ್ಯಾನರ ಉದ್ಘಾಟನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರ ಅವರು ಬರೆದ ಸಂವಿಧಾನವನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ. ಇಡೀ ಜಗತ್ತು ಮೆಚ್ಚುವಂತೆ ಶ್ರೇಷ್ಠ ಸಂವಿಧಾನವನ್ನು ನೀಡಿದ್ದಾರೆ. ಅದರ ಫಲವಾಗಿ ನಾವೇಲ್ಲರೂ ನೆಮ್ಮದಿಯಿಂದ ಜೀವನ ಸಾಗುಸುತ್ತಿದ್ದೇವೆ. ಶಿಕ್ಷಣ, ಸಂಘಟನೆ, ಹೋರಾಟ ಎಂಬುದು ಅಂಬೇಡ್ಕರ ಅವರ ಮಾತುಗಳಾಗಿವೆ, ನಾವು ಅವುಗಳನ್ನು ಪಾಲಿಸಬೇಕು. ಪ್ರಬುದ್ಧ ಭಾರತದತ್ತ ಬುದ್ಧನ ಸಂದೇಶಗಳು ಇಂದಿಗೂ ಹೆಚ್ಚು ಪ್ರಸ್ತುತವಾಗಿವೆ. ಬುದ್ಧ ಹಾಗೂ ಡಾ. ಅಂಬೇಡ್ಕರರ ಚಿಂತನೆಗಳಿಂದ ನಮ್ಮ ದೇಶ ಸುರಕ್ಷಿತವಾಗಿದೆ. ಮೌಡ್ಯ ಸಂಪ್ರದಾಯ ಸನಾತನ ಧರ್ಮಗಳನ್ನು ದಿಕ್ಕರಿಸಿದ ಡಾ. ಅಂಬೇಡ್ಕರ ಅವರು ಭೌದ್ಧ ಧರ್ಮ ಸ್ವೀಕರಿಸಿದರು ಎಂದ ಅವರು, ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ ಪ್ರಸಾರವಾಗುವ ಮಹಾನಾಯಕ ಧಾರವಾಹಿಯನ್ನು ತಪ್ಪದೇ ನೋಡಬೇಕು ಎಂದು ಹೇಳಿದರು.

ಇದೇ ವೇಳೆ ಎಸ್‍ಎಸ್‍ಎಲ್‍ಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ಸರ್ಕಾರಿ ಹುದ್ದೆಗಳಿಗೆ ನೇಮಕರಾದ ನೌಕರರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಶರಣ ಬಸವೇಶ್ವರ ದಾಸೋಹ ಮಠದ ಪೀಠಾಧಿಪತಿ ಶರಣಪ್ಪ ಶರಣ ದೇವರಮನಿ, ಪೂಜ್ಯ ಬಂತೇಜಿ ಕರುಣಾನಂದ, ಮುಖಂಡರಾದ ಹಳ್ಳೆಪ್ಪ ಹವಲ್ದಾರ, ರಾಜುಗೌಡ ಗೂಗಲ್, ಮಲ್ಲಿಕಾರ್ಜುನ ಶಾಖಾನೂರ, ಮಂಜುನಾಥ ಗಂಗಾಕರ, ವಿಶ್ವನಾಥ ವಿಭೂತಿಹಳ್ಳಿ, ಶರಣು ಹಾದಿಮನಿ, ಉಮೇಶ ಗೌಡಗೇರಿ, ಜೈಭೀಮ್ ಕೊಂಬಿನ್, ಮಹಾಂತೇಶ ಬಡಿಗೇರ, ಮಲ್ಲಿಕಾರ್ಜುನ ಬೇಂದ್ರೆ, ಮೌನೇಶ್ ಪರಸನಹಳ್ಳಿ, ಸಂತೋಷ ಬೇವಿನಗಿಡ, ಸಂತೋಷ ಹಾದಿಮನಿ, ಯಲ್ಲಪ್ಪ ಡಾಂಗೆ ಸೇರಿದಂತೆ ಗೌತಮ ಬುದ್ಧ ನಗದರದ ಯುವಕರಿದ್ದರು.

ಕರಿಲಿಂಗ ನಾಟೇಕಾರ ಸ್ವಾಗತಿಸಿದರು, ಶಿವು ಹಾದಿಮನಿ ನಿರೂಪಿಸಿದರು, ಕಾರ್ತಿಕ ನಾಟೇಕಾರ ವಂದಿಸಿದರು.