ನಗನೂರಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಕೆಂಭಾವಿ:ನ.1:ವಾಲ್ಮೀಕಿ ಅವರು ರಚಿಸಿದ ರಾಮಾಯಣ ಮಹಾಕಾವ್ಯ ಇಡೀ ವಿಶ್ವಕ್ಕೆ ಭಾರತ ನೀಡಿದ ಬಹುದೊಡ್ಡ ಸಾಹಿತ್ಯ ಕೊಡುಗೆಯಾಗಿದೆ. ವಾಲ್ಮೀಕಿ ರಾಮಾಯಣ ದೇಶ ಭಾಷೆಗೆ ಸೀಮಿತಗೊಳ್ಳದೆ ಜಾಗತಿಕವಾಗಿ ಆರಾಧಿಸಲ್ಪಟ್ಟಿದೆ ಎಂದು ಸಮಾಜದ ಮುಖಂಡ ಹಳ್ಳೆಪ್ಪ ಹವಲ್ದಾರ ಹೇಳಿದರು.

ಪಟ್ಟಣ ಸಮೀಪದ ನಗನೂರ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಯಿಸಿ ಅವರು ಮಾತನಾಡಿದರು. ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳುವುದು ಸೇರಿದಂತೆ ಉತ್ತಮ ಸಮಾಜ ನಿರ್ಮಾಣದ ಮಹತ್ವದ ಸಂಗತಿಗಳನ್ನು ರಾಮಾಯಣ ಮಹಾಕಾವ್ಯದಿಂದ ನಾವು ಕಲಿಯಬಹುದಾಗಿದೆ. ಸಮುದಾಯದ ಬಾಂಧವರು ಪ್ರತಿಯೊಬ್ಬರೂ ಶಿಕ್ಷಣ ಪಡೆದು ಮುಂದೆ ಬರಬೇಕು ಎಂದು ಕಿವಿ ಮಾತು ಹೇಳಿದರು.

ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಅಧ್ಯಕ್ಷ ಕೃಷ್ಣಪ್ಪ ಹವಲ್ದಾರ ಮಾತನಾಡಿ, ಭಾರತೀಯ ಸಂಸ್ಕøತಿ ಹಾಗೂ ಜೀವನ ಪದ್ದತಿಯನ್ನು ಪ್ರತಿ ಬಿಂಬಿಸುವ ರಾಮಾಯಣ ಮಹಾಕಾವ್ಯ ರಚನೆ ಮೂಲಕ ಜಗತ್ತಿನ ಗಮನ ಸೆಳೆದ ಮಹರ್ಷಿ ವಾಲ್ಮೀಕಿ ಅವರ ಸಂದೇಶಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶರಣಬಸವೇಶ್ವರ ದಾಸೋಹ ಮಠದ ಪೀಠಾಧಿಪತಿ ಶರಣಪ್ಪ ಶರಣ ದೇವರಮನಿ, ವೀರಯ್ಯಸ್ವಾಮಿ ಸ್ಥಾವರಮಠ, ಕೃಷ್ಣಪ್ಪ ಹವಲ್ದಾರ, ಶ್ರೀಮಂತ ತಿಪ್ಪಶೆಟ್ಟಿ, ಬಲವಂತರಡ್ಡಿ ದೇಸಾಯಿ, ಗುರಲಿಂಗ ದೇಸಾಯಿ, ನಾಗಣ್ಣ ಖಾನಾಪುರ, ದೇವಪ್ಪ ಹವಲ್ದಾರ, ತಿಪ್ಪಣ್ಣ ನಾಯ್ಕೋಡಿ, ಈಸಪ್ಪ ಹವಲ್ದಾರ, ಭೀಮಣ್ಣ ಹೆಳವರ, ರಾಜು ಉಪ್ಪಾರ, ಹುಲಗಪ್ಪ ಹವಲ್ದಾರ, ತಿರುಪತಿ ಗುರಿಕಾರ, ಮಲ್ಲಣ್ಣ ನಾಯ್ಕೋಡಿ, ಸದಾಶಿವಪ್ಪ ಚನ್ನೂರ ಸೇರಿದಂತೆ ಇತರರಿದ್ದರು.