ರಾಯ್ಪುರ, ಏ.26-ಛತ್ತೀಸ್ ಘಡ ಜಿಲ್ಲೆಯ ದಂತೆವಾಡ ಜಿಲ್ಲೆಯಲ್ಲಿ ನಕ್ಸಲೀಯರು ನಡೆಸಿದ ಮಾರಣ ಹೋಮಕ್ಕೆ ಹತ್ತು ಮಂದಿ ಪೊಲೀಸರು ಸೇರಿ ಓರ್ವ ನಾಗರಿಕ ಬಲಿಯಾಗಿದ್ದಾರೆ.
ಪೊಲೀಸರಿದ್ದ ವಾಹನವನ್ನು ನಕ್ಸಲರು ಸುಧಾರಿತ ಸ್ಪೋಟಕದಿಂದ ಸ್ಪೋಟಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಕ್ಸಲೀಯರು ಇರುವ ಬಗ್ಗೆ ಗುಪ್ತಚರ ಇಲಾಖೆ ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದಾಂತೆವಾಡದಲ್ಲಿ ನಕ್ಸಲ್ ನಿಗ್ರಹ ಪಡೆ ಕಾರ್ಯಾಚರಣೆ ನಡೆಸಿ ಹಿಂತಿರುಗುತ್ತಿದ್ದ ವೇಳೆ ನಕ್ಸಲರು ಈ ವಿಧ್ವಂಸಕ ಕೃತ್ಯ ನಡೆಸಿದ್ದಾರೆ.
ಸ್ಪೋಟದ ರಭಸಕ್ಕೆ ವಾಹನ ಸಂಪೂರ್ಣ ಛಿಧ್ರಗೊಂಡಿದೆ. ಮೃತದೇಹಗಳನ್ನು ಪ್ಲಾಸ್ಟಿಕ್ ಬೆಡ್ ಶೀಟ್ ನಲ್ಲಿ ವಶಕ್ಕೆ ಪಡೆಯಲಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ರಾಯ್ಪುರ ರಾಜಧಾನಿ 450 ಕಿ.ಮೀ. ದೂರದಲ್ಲಿ ಈ ವಿಧ್ವಂಸಕ ಕೃತ್ಯ ನಡೆದಿದೆ. ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಬಗೇಲಾ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಹುತಾತ್ಮ ಯೋಧರ ಆತ್ಮಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಅಮಿತ್ ಶಾ, ಕೇಂದ್ರ ಸರ್ಕಾರದಿಂದ ಅಗತ್ಯ ನೆರವು ಒದಗಿಸ ಲಾಗುವುದು ಎಂದು ಭರವಸೆ ನೀಡಿದ್ದಾರೆ.
ಪ್ರಧಾನಿ ಖಂಡನೆ
ಛತ್ತೀಸ್ ಘಡದಲ್ಲಿ ನಡೆದ ನಕ್ಸಲ್ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ.
ಘಟನೆಯಲ್ಲಿ ಹುತಾತ್ಮರಾದ ಪೊಲೀಸರಿಗೆ ನನ್ನ ಶ್ರದ್ಧಾಂಜಲಿ. ಅವರ ತ್ಯಾಗ ಬಲಿದಾನವನ್ನು ನಾವು ಸುಮ್ಮನೆ ಮರೆಯುವುದಿಲ್ಲ. ಮೃತರ ಕುಟಬಗಳು ಸಂತಾಪಗಳು ಎಂದು ಟ್ವೀಟ್ ಮಾಡಿದ್ದಾರೆ.