ನಕ್ಸಲ್ ವಶದಲ್ಲಿದ್ದ ಯೋಧನ ಬಿಡುಗಡೆ

ರಾಯ್ ಪುರ,ಏ.8- ಮಾವೋವಾದಿ ನಕ್ಸಲರು ಮತ್ತು ಭದ್ರತಾ ಪಡೆಗಳ ಗುಂಡಿನ ಚಕಮಕಿಯಲ್ಲಿ ಒತ್ತೆಯಾಳಾಗಿರಿಸಿಕೊಂಡಿದ್ದ ಯೋಧನ್ನು ನಕ್ಸಲರು ಬಿಡುಗಡೆ ಮಾಡಿದ್ದಾರೆ.

ಏಪ್ರಿಲ್ 3ರಂದು ನಡೆದ ಗುಂಡಿನ ಚಕಮಕಿಯಲ್ಲಿ 22 ಯೋಧರು ಹುತಾತ್ಮ ರಾಗಿದ್ದರು. ಈ ವೇಳೆ ಕೋಬ್ರಾ ಪಡೆಯ ಯೋಧನನ್ನು ನಕ್ಸಲರು ತಮ್ಮ ವಶಕ್ಕೆ ಪಡೆದಿದ್ದರು.ಇಂದು ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ

ಬಿಡುಗಡೆಯಾಗಿರುವ ಕೋಬ್ರಾ ಪಡೆಯ ಯೋಧನ್ನನ್ನು ರಾಕೇಶ್ವರ್ ಸಿಂಗ್ ಮನ್ಹಾಸ್ ಎಂದು ಭದ್ರತಾ ಪಡೆಯ ಮೂಲಗಳು ತಿಳಿಸಿವೆ.

ರಾಕೇಶ್ವರ್ ಸಿಂಗ್ ಅವರು 210 ನೇ ಕೋಬ್ರಾ ಬಟಾಲಿಯನ್ ಕಮಾಂಡೋ ಆಗಿದ್ದಾರೆ.ಭದ್ರತಾ ಪಡೆಗಳು ಮತ್ತು ನಕ್ಸಲೀಯರ ನಡುವೆ ನಡೆದ ಗುಂಡಿನ ಚಕಮಕಿಯ ಬಳಿಕ ಯೋಧನನ್ನು ನಕ್ಸಲರು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು.

ಮಾವೋವಾದಿ ನಕ್ಸಲರ ವಶದಲ್ಲಿದ್ದ ರಾಕೇಶ್ವರ್ ಸಿಂಗ್ ಅವರನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿಸಲು ಎಲ್ಲ ರೀತಿಯ ಸಹಕಾರ ನೀಡುವಂತೆ ಯೋಧನ ಕುಟುಂಬ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿತ್ತು.

ಈ ನಡುವೆ ಮಾವೋವಾದಿ ನಕ್ಸಲರು ಯೋಧನ ಬಿಡುಗಡೆ ಮಾಡಬೇಕಾದರೆ ಸಂಧಾನಕಾರರನ್ನು ಕಳುಹಿಸುವಂತೆ ಪಟ್ಟು ಹಿಡಿದಿದ್ದರು.

ಇದರ ನಡುವೆಯೇ ನಕ್ಸಲರು ಇಂದು ಯೋಧನನ್ನು ಸುರಕ್ಷಿತವಾಗಿ ಬಿಡುಗಡೆ ಮಾಡಿದ್ದಾರೆ.