ನಕ್ಸಲೀಯರ ಜತೆ ಗುಂಡಿನ ಕಾಳಗ: 8 ಮಂದಿ ಯೋಧರು ಹುತಾತ್ಮ

ಛತ್ತೀಸ್​ಗಢ, ಏ 3-ನಕ್ಸಲರು ಮತ್ತು ಯೋಧರ ನಡುವೆ ನಡೆದ ಗುಂಡಿನ ಕಾಳಗದಲ್ಲಿ‌ ಎಂಟು ಮಂದಿ ಸೈನಿಕರು ಹುತಾತ್ಮರಾಗಿರುವ ಘಟನೆ ಛತ್ತೀಸ್​ಗಢದ ಬಿಜಾಪುರ್​​ನಲ್ಲಿ ನಡೆದಿದೆ.

6 ಡಿಆರ್​​ಜಿ ಸಿಬ್ಬಂದಿ ಹಾಗೂ ಇಬ್ಬರು ಸಿಆರ್​​ಪಿಎಫ್​​ ಸಿಬ್ಬಂದಿ ಸೇರಿ ಒಟ್ಟು 6 ಮಂದಿ ಸೈನಿಕರು ಎನ್​ಕೌಂಟರ್​ನಲ್ಲಿ ಹುತಾತ್ಮ ರಾಗಿದ್ದಾರೆ.

ಸೈನಿಕರು ಹಾಗೂ ನಕ್ಸಲರ ನಡುವೆ ಈ ಗುಂಡಿನ ಚಕಮಕಿ ನಡೆದಿದೆ. ಇನ್ನೂ ಸಹ ಸ್ಥಳದಲ್ಲಿ ಗುಂಡಿನ ಕಾಳಗ​ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಬಿಜಾಪುರ್​ನಲ್ಲಿ ನಡೆಯುತ್ತಿರುವ ನಕ್ಸಲ್​ ವಿರೋಧಿ ಕಾರ್ಯಾಚರಣೆಯಲ್ಲಿ ಸುಮಾರು 400 ಮಂದಿ ಭಾರತೀಯ ಯೋಧರು ಬೀಡು ಬಿಟ್ಟಿದ್ದಾರೆ. ಎಸ್​ಟಿಎಫ್​​, ಡಿಆರ್​ಜಿ, ಸಿಆರ್​​ಪಿಎಫ್​​ ಮತ್ತು ಸಿಓಬಿಆರ್​​ಎ(ಕೋಬ್ರಾ) ಸಿಬ್ಬಂದಿ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.