ನಕ್ಸಲರೊಂದಿಗೆ ಗುಂಡಿನ ಚಕಮಕಿ ೨೪ ಯೋಧರ ಮೃತದೇಹ ಪತ್ತೆ


ರಾಯ್‌ಪುರ,ಏ.೪- ಭದ್ರಾತಾ ಪಡೆಗಳು ಮತ್ತು ಮಾವೋವಾದಿ ನಕ್ಸಲರ ನಡುವೆ ಛತ್ತೀಸ್‌ಗಡದ ಬಸ್ತಾರ್ ವಲಯದಲ್ಲಿ ನಿನ್ನೆ ನಡೆದ ಏನ್ ಕೌಂಟರ್ ನಡೆದ ಸ್ಥಳದಲ್ಲಿ ಇಂದು ೨೪ ಭದ್ರತಾ ಪಡೆ ಸಿಬ್ಬಂಧಿಯ ಮೃತದೇಹ ಪತ್ತೆಯಾಗಿವೆ.
ನಕ್ಸಲರೊಂದಿಗೆ ನಿನ್ನೆ ನಡೆದ ಗುಂಡಿನ ಕಾಳಗದ ಸಮಯದಲ್ಲಿ ಐವರ ಯೋಧರು ಹುತಾತ್ಮರಾಗಿದ್ದರು. ೩೨ ಮಂದಿ ಗಾಯಗೊಂಡು ೨೪ ಕ್ಕೂ ಹೆಚ್ಚು ಮಂದಿ ಯೋಧರು ಕಾಣೆಯಾಗಿದ್ದರು.
ಕಾಣೆಯಾಗಿದ್ದ ಯೋಧರ ಪೈಕಿ ೨೪ ಮೃತದೇಹ ಪತ್ತೆಯಾಗಿದೆ. ಇನ್ನೂ ಹಲವು ಮಂದಿ ಯೋಧರ ಸುಳಿವು ಸಿಗಬೇಕಾಗಿದೆ.
ಬಿಜಾಪುರ ಮತ್ತು ಸುಕ್ಮಾ ಜಿಲ್ಲೆಯ ಗಡಿ ಭಾಗದ ತೆಹರಮ್ ಅರಣ್ಯದಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಈ ಘಟನೆ ನಡೆದಿದೆ, ಘಟನೆಯಲ್ಲಿ ಓರ್ವ ಶಂಕಿತ ನಕ್ಸಲೀಯನ್ನು ಕೂಡ ಹತ್ಯೆ ಮಾಡಲಾಗಿದೆ.
ನಾಪತ್ತೆಯಾಗಿರುವ ಯೋಧರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇನ್ನೂ ಮೂರು ಯೋಧರಿಗಾಗಿ ಪತ್ತೆ ಕಾರ್ಯ ಸಾಗಿದೆ ಎಂದು ಛತ್ತೀಸ್ ಘಡ ಪೊಲೀಸ್ ಮಹಾನಿರ್ದೇಶಕ ಡಿಎಂ ಅಶ್ವಥಿ ಹೇಳಿದ್ದಾರೆ.
ಇಂದು ಹುತಾತ್ಮರಾದ ೨೪ ಯೋಧರ ಮೃತದೇಹ ಪತ್ತೆ ಮಾಡಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ
ನಿನ್ನೆ ಮೃತಪಟ್ಟ ಯೋಧರ ಪೈಕಿ ೩ ಮಂದಿ ಜಿಲ್ಲಾ ಮೀಸಲು ಪಡೆ ಸಿಬ್ಬಂಧಿ, ಇಬ್ಬರು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಸಿಬ್ಬಂಧಿ ಮೃತಪಟ್ಟಿದ್ದರು ಎಂದು ಪ್ರಾಥಮಿಕ ಮಾಹಿತಿಯಲ್ಲಿ ತಿಳಿಸಲಾಗಿತ್ತು. ಆ ನಂತರ ಮೂರು ಮಂದಿ ಭದ್ರತಾ ಸಿಬ್ಬಂಧಿಯ ಮೃತ ದೇಹ ಪತ್ತೆಯಾಗಿದೆ.
ಗುಂಡಿನ ಚಕಮಕಿಯಲ್ಲಿ ಓರ್ವ ನಕ್ಸಲ್ ಅನ್ನು ಭದ್ರತಾ ಪಡೆ ಹತ್ಯೆ ಮಾಡಿದೆ ಎಂದು ಕೇಂದ್ರೀಯ ಮೀಸಲು ಪೊಲೀಸ್ ಪಡೆ-ಸಿಆರ್ ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಹತ್ತು ದಿನಗಳಿಂದ ಭದ್ರತಾ ಪಡೆ ಮಾವೋವಾದಿ ನಕ್ಸಲರ ಚಲನವಲನದ ಬಗ್ಗೆ ಮಾಹಿತಿ ಕಲೆಹಾಕಿ ನಿನ್ನೆ ದಾಳಿ ನಡೆಸಿತ್ತು.
೨೦೧೩ರ ನಂತರ ನಕ್ಸಲ್ ಕಾರ್ಯಾಚರಣೆಯಲ್ಲಿ ಅತಿ ಹೆಚ್ಚು ಮಂದಿ ಭದ್ರತಾ ಪಡೆ ಹುತಾತ್ಮರಾಗಿದ್ದಾರೆ. ನಾಪತ್ತೆಯಾಗಿರುವ ಭದ್ರತಾ ಪಡೆಯ ಸಿಬ್ಬಂಧಿಗಾಗಿ ಶೋಧ ಮುಂದುವರಿದಿದೆ ಎಂದು ಭದ್ರತಾ ಪಡೆಯ ಮೂಲಗಳು ತಿಳಿಸಿವೆ.