ನಕ್ಸಲರಿಂದ ಸುಧಾರಿತ ಸ್ಪೋಟ: 5 ಸಿಆರ್ ಪಿಎಫ್ ಗೆ ಗಾಯ

ಸಿಂಗ್‌ಭೂಮ್, ಜ.11- ಜಾರ್ಖಂಡ್‌ನ ಚೈಬಾಸಾದಲ್ಲಿ ಸುಧಾರಿತ ಸ್ಪೋಟಕ ಸ್ಫೋಟಿಸಿದ ಹಿನ್ನೆಲೆಯಲ್ಲಿ 5 ಮಂದಿ ಕೇಂದ್ರೀಯ ಗಡಿ ಭದ್ರತಾ ಪಡೆ ಸಿಬ್ಬಂದಿ- ಸಿಆರ್‌ಪಿಎಫ್ ಸಿಬ್ಬಂದಿ ಗಾಯಗೊಂಡಿದ್ದಾರೆ

ಚೈಬಾಸಾ ಪಟ್ಟಣದಲ್ಲಿ ನಕ್ಸಲರ ಶೋಧ ಮತ್ತು ಎನ್‌ಕೌಂಟರ್ ಸಮಯದಲ್ಲಿ ಸುಧಾರಿತ ಸ್ಫೋಟಕ ಸಾಧನ ಸ್ಫೋಟದಲ್ಲಿ ಐವರು ಕೇಂದ್ರೀಯ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ.

ಗಾಯಗೊಂಡ ಸಿಆರ್ ಪಿಎಫ್ ಸಿಬ್ಬಂದಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಗಾಯಗೊಂಡ ಮಂದಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.

ನಕ್ಸಲರ ಶೋದಕ್ಕೆ ಸ್ಥಳದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ. ಜಾರ್ಖಾಂಡ್ ನಲ್ಲಿ ನಕ್ಸಲರ ಅಟ್ಟಹಾಸ ಆಗಾಗ ಹೆಚ್ಚುತ್ತಿದ್ದು ಮಾವೋವಾದಿಗಳು ಮತ್ತು ಭದ್ರತಾ ಪಡೆಗಳ ನಡುವೆ ಆಗಾಗ ಗುಂಡಿನ ಚಕಮಕಿ ನಡೆಯುತ್ತಲೇ ಇದೆ.

ನಕ್ಸಲರು ಅಡಗಿದ ಮಾಹಿತಿ ಆದರಿಸಿ ಭದ್ರತಾ ಪಡೆಗಳು ಅವರ ಮೇಲೆ ಗುಂಡಿನ ದಾಳಿ‌ನಡೆಸಿದ ವೇಳೆ ಈ ಘಟನೆ ನಡೆದಿದೆ.