ನಕ್ಷತ್ರ ಆಮೆ ಮಾರಾಟ ಯತ್ನ: ಮೂವರ ಸೆರೆ

ಮಡಿಕೇರಿ, ನ.೨೨- ಅಳಿವಿನಂಚಿನಲ್ಲಿರುವ ನಕ್ಷತ್ರ ಆಮೆಯನ್ನು ಮಾರಾಟ ಮಾಡಲು ಕಾರಿನಲ್ಲಿ ಬಂದಿದ್ದ ನಾಲ್ವರು ಆರೋಪಿಗಳನ್ನು ಆಮೆ ಸಮೇತ ಬಂಧಿಸುವಲ್ಲಿ ವೀರಾಜಪೇಟೆ ತಾಲ್ಲೂಕು ಸಿ.ಐ.ಡಿ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ಆಂಧ್ರಪ್ರದೇಶ ರಾಜ್ಯದ ಕರ್ನೂಲ್ ಜಿಲ್ಲೆಯ ಲಕ್ಷ್ಮಣ, ರಾಮಪೋಗು, ನಾಗೇಶ ಮತ್ತು ತೆಲಂಗಾಣ ರಾಜ್ಯದ ಮೆಬೂಬ್ ನಗರ ಜಿಲ್ಲೆಯ ತೆಲುಗು ತಿಮ್ಮಪ್ಪ ಎಂಬುವವರು ವಿನಾಶದಂಚಿನಲ್ಲಿರುವ ಅಪರೂಪದ ನಕ್ಷತ್ರ ಆಮೆಯನ್ನು ರೂ. 1.50 ಲಕ್ಷಕ್ಕೆ ಮಾರಾಟ ಮಾಡಲು ಯತ್ನಿಸಿದ್ದರು. ತಲಕಾವೇರಿಯಲ್ಲಿ ಕೇರಳ ಯುವಕರ ಪುಂಡಾಟ; 10 ಮಂದಿ ಬಂಧನ ನವೆಂಬರ್ 20 ರಂದು ಸಂಜೆ 4 ಗಂಟೆಗೆ ಬೆಂಗಳೂರಿನಿಂದ ಗೋಣಿಕೊಪ್ಪಕ್ಕೆ ಕೆ.ಎ 02-ಎಎಫ್-5742 ಮಹೇಂದ್ರ ವೇರಿಟೋ ಕಾರಿನಲ್ಲಿ ಬಂದಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಮಡಿಕೇರಿ ಸಿ.ಐ.ಡಿ ಪೋಲೀಸ್ ಅರಣ್ಯ ಘಟಕದ ಪೋಲೀಸ್ ಅಧೀಕ್ಷಕರಾದ ಸುರೇಶ್ ಬಾಬುರವರ ಮಾರ್ಗದರ್ಶನದಲ್ಲಿ ದಾಳಿ ನಡೆಸಲಾಯಿತು. ಈ ತಂಡದಲ್ಲಿ ವೀರಾಜಪೇಟೆ ಸಿ.ಐ.ಡಿ ಪೋಲೀಸ್ ಅರಣ್ಯ ಸಂಚಾರಿ ದಳದ ಆರಕ್ಷಕ ಉಪನಿರೀಕ್ಷಕಿ ವೀಣಾ ನಾಯಕ್, ಸಿಬ್ಬಂದಿಗಳಾದ ಕೆ.ಬಿ ಸೋಮಣ್ಣ, ಟಿ.ಪಿ ಮಂಜುನಾಥ್, ಎಂ.ಬಿ ಗಣೇಶ್, ಪಿ.ಬಿ ಮೊಣ್ಣಪ್ಪ, ಸಿ.ಎಂ ರೇವಪ್ಪ ಇವರುಗಳು ಗೋಣಿಕೊಪ್ಪ-ಮೈಸೂರು ರಸ್ತೆಯ ಆರ್.ಎಂ.ಸಿ ಯಾರ್ಡ್ ಬಳಿ ದಾಳಿ ನಡೆಸಿ ನಕ್ಷತ್ರ ಆಮೆ ಸಮೇತ ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶನಿವಾರದಂದು ಆರೋಪಿಗಳನ್ನು ವೀರಾಜಪೇಟೆ ಸಿವಿಲ್ ನ್ಯಾಯಾಧೀಶ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.