ನಕ್ಷತ್ರ ಆಮೆಗಳನ್ನು ವಶ ನಾಲ್ವರು ಸೆರೆ

ಮಡಿಕೇರಿ,ನ.22-ನಗರದ ಆರ್‌ಎಂಸಿ ಯಾರ್ಡ್ ಬಳಿ ಕಾರ್ಯಾಚರಣೆ ನಡೆಸಿದ ವೇಳೆ ಅರಣ್ಯಾಧಿಕಾರಿಗಳು ಬೆಂಗಳೂರಿನಿಂದ ಗೋಣಿಕೊಪ್ಪಗೆ ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಅಪರೂಪದ ಜಾತಿಯ ನಕ್ಷತ್ರ ಆಮೆಗಳನ್ನು ವಶಕ್ಕೆ ಪಡಿಸಿಕೊಂಡು‌ ನಾಲ್ವರನ್ನು ಬಂಧಿಸಿದ್ದಾರೆ.
ಕರ್ನೂಲ್ ಜಿಲ್ಲೆಯ ಮಂಚಾಲ ಗ್ರಾಮದ ಟಿ ಲಕ್ಷ್ಮಣ್ದ ಮಂಡಲಂನ ಆರ್.ಲಕ್ಷ್ಮೀನಾರಾಯಣ, ತೆಲಂಗಾಣದ ಮೆಹಬೂಬ್ ನಗರ ಬಳಿಯ ಸಿಂಧನೂರ್ ಗ್ರಾಮದ ತೆಲುಗರ  ಇ ತಿಮ್ಮಪ್ಪ ಮತ್ತು ಬೆಂಗಳೂರಿನ ಎಸ್ ನಾಗೇಶ್ ಬಂಧಿತ ಆರೋಪಿಗಳಾಗಿದ್ದಾರೆ
ಅಳಿವಿನಂಚಿನಲ್ಲಿರುವ ಜೀವಿಯಾದ ನಕ್ಷತ್ರ ಆಮೆಯನ್ನು ಆಂಧ್ರಪ್ರದೇಶದಿಂದ ಕೊಡಗಿಗೆ ಅಕ್ರಮ ಸಾಗಾಟ ನಡೆಸಲಾಗುತ್ತಿತ್ತು.
ಆರೋಪಿಗಳನ್ನು ಪೊನ್ನಂಪೆಟೆ ಸಿವಿಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಅವರನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಡಲಾಗಿದೆ. ಮಡಿಕೇರಿ ಸಿಐಡಿ ಪೊಲೀಸ್ ಅರಣ್ಯ ಘಟಕ ಅಧೀಕ್ಷಕ ಸುರೇಶ್ ಬಾಬು ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.