ನಕ್ಕುಂದಿ ಗ್ರಾ.ಪಂ. ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಆಯ್ಕೆ

ಮಾನ್ವಿ,ಆ.೦೭- ತಾಲೂಕಿನ ನಕ್ಕುಂದಿ ಗ್ರಾಮ ಪಂಚಾಯಿತಿಯ ೧೧ ಸದಸ್ಯ ಬಲ ಇರುವ ಪಂಚಾಯಿತಿಯ ಎರಡನೇ ಅವಧಿಯ ಅಧ್ಯಕ್ಷ ಸ್ಥಾನ ಪ.ಪಂಗಡ ಮಹಿಳೆ ಹಾಗೂ ಉಪಾಧ್ಯಕ್ಷರ ಸ್ಥಾನ ಸಾಮಾನ್ಯ ಮೀಸಲಾತಿ ಇದ್ದು ಅಧ್ಯಕ್ಷ ಸ್ಥಾನಕ್ಕೆ ಶಾರದಮ್ಮ ಹಾಗೂ ಉಪಾಧ್ಯಕ್ಷಸ್ಥಾನಕ್ಕೆ ಸಾಬಮ್ಮ ಮಾತ್ರ ನಾಮಪತ್ರಸಲ್ಲಿಸಿದರಿಂದ ಅಧ್ಯಕ್ಷರಾಗಿ ಶಾರದಮ್ಮ ಉಪಾಧ್ಯಕ್ಷರಾಗಿ ಸಾಬಮ್ಮ ಅವಿರೋಧವಾಗಿ ಆಯ್ಕೆಯಾಗಿರುವುದಾಗಿ ಚುನಾವಣಾಧಿಕಾರಿ ಶಶಿಕಾಂತ ಬಿ,ವಂದಾಳೆ ಘೋಷಿಸಿದರು
ಮುಖಂಡರಾದ ಶರಣಪ್ಪಗೌಡ ನಕ್ಕುಂದಿ, ವಿರೇಶ ಅಗಸಿಮುಂದಿನ, ನಾಗರಾಜ ,ಬಸವರಾಜ, ರಾಜಶೇಖರ ದಾನವಿ, ದೇವಪ್ಪ, ರಾಜಭಕ್ಷಿ, ಯಂಕಪ್ಪ ಜಡೆ, ಸಣ್ಣ ಹನುಮಯ್ಯ, ಬಾಲಯ್ಯ, ಬಸವರಾಜ ಕರೆಗುಡ್ಡ ಸೇರಿದಂತೆ ಇನ್ನಿತರರು ಇದ್ದರು.