ಮಾನವಿ.ಅ.೨೪- ವಿಶ್ವ ಅಯೊಡಿನ್ ಕೊರತೆ ನಿವಾರಣಾ ಸಪ್ತಾಹವನ್ನು ಅ.೨೧ ರಿಂದ ೨೭ ರವರೆಗೆ ನಡೆಯುವ ಕಾರ್ಯಕ್ರಮವನ್ನು ತಾಲೂಕಿನ ನಕ್ಕುಂದಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಚಾಲನೆ ನೀಡಲಾಯಿತು.
ತಾಲೂಕ ಆರೋಗ್ಯ, ಮಕ್ಕಳ ಕಲ್ಯಾಣ, ಇಲಾಖೆಯ ಸಹಯೋಗದೊಂದಿಗೆ ವಿಶ್ವ ಅಯೋಡಿನ್ ಕೊರತೆ ನಿವಾರಣಾ ಸಪ್ತಾಹ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಿತು ಎಂದು ಅಧಿಕಾರಿ ಬಾಲಪ್ಪ ನಾಯಕ ತಿಳಿಸಿದರು.
ನಂತರ ಮಾತಾನಾಡಿದ ಅವರು ಪ್ರತಿದಿನ ನಾವು ಸೇವಿಸುವ ಆಹಾರದಲ್ಲಿ ವಯಸ್ಸಿನ ಆಧಾರಿತವಾಗಿ ಅಯೊಡಿನ್ ಅಗತ್ಯವಾಗಿದೆ೦ದಿಂದ ೦೧ ವರ್ಷದ ಮಕ್ಕಳಿಗೆ ೫೦ ಮೈಕ್ರೊ ಗ್ರಾಂ, ಶಾಲಾ ವಯಸ್ಸಿನ ಮಕ್ಕಳಿಗೆ ೧೨೦ ಮೈಕ್ರೊ ಗ್ರಾಂ, ಗರ್ಭಿಣಿಯರಿಗೆ ೨೦೦ ಮೈಕ್ರೋ ಗ್ರಾಂ. ಹಾಗೂ ವಯಸ್ಕರಿಗೆ ಅಗತ್ಯವಿದೆ ದಿನನಿತ್ಯ ಆಹಾರದಲ್ಲಿ ಅಯೋಡಿನ್ ಇರುವ ಉಪುನ್ನೆ ಬಳಸಿ ಅದರ ಕೊರತೆಯಿಂದಾಗುವ ನ್ಯೂನತೆಗಳನ್ನು ತಡೆಗಟ್ಟಬಹುದು ಎಂದರು.
ಈ ಸಂದರ್ಭದಲ್ಲಿ ಡಾ.ಶ್ರೀಧರ ಇಲ್ಲೂರು, ಅಂಗನವಾಡಿ ಕಾರ್ಯಕರ್ತೆ ಲಲಿತಾ, ಗಂಗಮ್ಮ ಸಹಾಯಕಿ ಹಾಗೂ ಗ್ರಾಮದ ಮಕ್ಕಳ ತಾಯಂದಿರು ಹಾಜರಿದ್ದರು.