ನಕ್ಕುಂದಿಯಲ್ಲಿ ಪ್ರತಿಭಾಕಾರಂಜಿ,ಕಲೋತ್ಸವ ಕಾರ್ಯಕ್ರಮ

ಮಾನ್ವಿ,ಆ.೧೯-
ಬಾಗಲವಾಡ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಲೋತ್ಸವವನ್ನು ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದು ತುಂಬಾ ಸಂತೋಷ ಹಾಗೂ ನಮ್ಮೂರಿನ ಶಾಲೆಗೆ ನೂತನ ಕಟ್ಟಡ ನವೀಕರಣಕ್ಕೆ ಸಹಾಯಧನ ನೀಡಿದ್ದು ತುಂಬಾ ಸಂತಸ ತಂದಿದೆ ಇದನ್ನು ನಮ್ಮೂರಿನ ವಿದ್ಯಾರ್ಥಿ ಸದ್ಬಳಿಕೆ ಮಾಡಿಕೊಳ್ಳುವಂತೆ ಕರೆಗುಡ್ಡ ಮಹಾತೇಶ್ವರ ಮಠದ ಮಹಾಂತಲಿಂಗ ಮಹಾಸ್ವಾಮಿಗಳು ಹೇಳಿದರು.
ತಾಲೂಕಿನ ನಕ್ಕುಂದಿ ಗ್ರಾಮದಲ್ಲಿ ಜಿಲ್ಲಾ ಶಿಕ್ಷಣ ಸಾಕ್ಷರತ ಕ್ಷೇತ್ರ ಶಿಕ್ಷಣಾಧಿಕಾರಿ ಸಮನ್ವಯಧಿಕಾರಿ ಸಮೂಹ ಸಂಪನ್ಮೂಲ ಬಾಗಲವಾಡ ಇವರ ಸಂಯುಕ್ತ ಆಶ್ರಯದಲ್ಲಿ ನಕ್ಕುಂದಿ ಉನ್ನತಿಕರಿಸಿದ ಸ,ಹಿ,ಪ್ರಾ,ಶಾಲೆಯಲ್ಲಿ ಬಾಗಲವಾಡ ವಲಯಮಟ್ಟದ ಪ್ರತಿಭಾ ಕಾರಂಜಿ ಹಾಗೂ ವಿದ್ಯಾರ್ಥಿಗಳಿಂದ ಕಲೋತ್ಸವ ಕಾರ್ಯಕ್ರಮವನ್ನು ಕರೆಗುಡ್ಡ ಮಹಾತೇಶ್ವರ ಮಠದ ಮಹಾಂತಲಿಂಗ ಮಹಾಸ್ವಾಮಿಗಳು ಹಾಗೂ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಮನಿ ಇವರು ದೀಪಾ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿ ಮಾತಾನಾಡಿದ ಅವರು ಇಂದಿನ ವಿದ್ಯಾರ್ಥಿಗಳಿಗೆ ಶಿಕ್ಷಣದ ಜೊತೆಗೆ ಪ್ರತಿಭಾ ಕಾರಂಜಿ ಕಲೋತ್ಸವದಂತಹ ಕಾರ್ಯಕ್ರಮದಿಂದ ಮಕ್ಕಳ ಬೌದ್ಧಿಕ ಮಟ್ಟ ಬೆಳವಣಿಗೆ ತುಂಬಾ ಸಹಕಾರಿಯಾಗುತ್ತದೆ ಎಂದರು..
ಪ್ರಾಸ್ತಾವಿಕವಾಗಿ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಮನಿ ಮಾತಾನಾಡಿ ಕಳೆದ ವರ್ಷ ಕೊವಿಡ್ ಮಹಾಮಾರಿಯಿಂದಾಗಿ ಮಕ್ಕಳ ಶಿಕ್ಷಣ ಬಹಳ ಹಿಂದುಳಿದಿತ್ತು ನಕ್ಕುಂದಿ ಗ್ರಾಮದಲ್ಲಿ ನಡೆದಿರುವ ಈ ಪ್ರತಿಭಾ ಕಾರಂಜಿಯಲ್ಲಿ ಒಟ್ಟು ೨೭ ಶಾಲೆಗಳು ಹಾಗೂ ೬೫೦ ಹೆಚ್ಚಿನ ವಿದ್ಯಾರ್ಥಿಗಳು ಭಾಗಿಯಾಗಿದ್ದು ಇಂತಹ ಕಾರ್ಯಕ್ರಮದಿಂದ ಮಕ್ಕಳ ಪ್ರತಿಭೆಯನ್ನು ಗುರುತಿಸಲಾಗುತ್ತದೆ ಮುಂದಿನ ದಿನಗಳಲ್ಲಿ ನಾಲ್ಕು ಕಟ್ಟಡ ಹಾಗೂ ೨೦ ಲಕ್ಷ ನವೀಕರಣಕ್ಕೆ ಮೀಸಲು ಇರಿಸಲಾಗಿದೆ ಎಂದರು.
ನಂತರ ಗ್ರಾಮದ ಮುಖಂಡರಾದ ಮಲ್ಲಿನಗೌಡ ಪೋಲಿಸ್ ಪಾಟೀಲ ವಕೀಲರು , ಶರಣಪ್ಪಗೌಡ ನಕ್ಕುಂದಿ ಇವರು ಮಾತಾನಾಡಿ ನಮ್ಮ ಗ್ರಾಮದಲ್ಲಿ ಪ್ರತಿಭಾ ಕಾರಂಜಿಯನ್ನು ಆಯೋಜನೆ ಮಾಡಿದ ಕ್ಷೇತ್ರ ಶಿಕ್ಷಣ ಇಲಾಖೆಗೆ ಧನ್ಯವಾದಗಳು ಮುಂದಿನ ದಿನಗಳಲ್ಲಿ ನಮ್ಮ ಗ್ರಾಮಕ್ಕೆ ಪ್ರೌಢ ಶಾಲೆಯನ್ನು ನೀಡುವಂತೆ ಮನವಿ ಮಾಡಿದರು. ನಂತರ ಸುರೇಶ ಕುರ್ಡಿ, ಮುಖ್ಯ ಶಿಕ್ಷಕ ಶ್ರೀಶೈಲ ಗೌಡ, ಮಾತನಾಡಿದರು ನಂತರ ವೇದಿಕೆಯ ಮೇಲಿದ್ದ ಮುಖಂಡರಿಗೆ ಸನ್ಮಾನಿಸಿ ಗೌರವಿಸಿದರು.
ನಂತರ ವಲಯ ಮಟ್ಟದ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು ವಿಜೇತರು ಬಹುಮಾನವನ್ನು ನೀಡಿ ತಾಲೂಕ ಮಟ್ಟಕ್ಕೆ ಆಯ್ಕೆ ಮಾಡಿದರು. ಶಿಕ್ಷಕ ಹನುಮಂತ ನಿರೂಪಣೆ ಮಾಡಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರ ಶಾರದಮ್ಮ ಬಸವರಾಜ, ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಮನಿ, ಮುಖಂಡರಾದ ಮಲ್ಲಿಕಾರ್ಜುನ ಪೋ ಪಾಟೀಲ, ಶರಣಪ್ಪ ಗೌಡ ನಕ್ಕುಂದಿ, ಎಂ ಪ್ರವೀಣ್ ಕುಮಾರ್, ಮುಖ್ಯ ಶಿಕ್ಷಕ ಶ್ರೀಶೈಲ ಗೌಡ, ಸುರೇಶ ಕುರ್ಡಿ, ಶಾಲಾ ಅಧ್ಯಕ್ಷ
ಶಶಿಕಲಾ, ಕುಬೇರಪ್ಪ ಸಿ ಆರ್ ಪಿ, ಅಕ್ಷರ ದಾಸೋಹ ಅಧಿಕಾರಿ ಸುರೇಶ ನಾಯಕ, ಹಂಪಣ್ಣ ಸಂಡೂರು, ಮಹೇಶ ಇಸಿಓ, ಶಿಕ್ಷಕರ ಸಂಘದ ಅಧ್ಯಕ್ಷ
ಸಂಗಮೇಶ ಮುಧೋಳ, ರಾಹುಲ್ ಗಾಂಧಿ ಬ್ರಿಗೇಡ್ ಜಿಲ್ಲಾಧ್ಯಕ್ಷ ಆದಂ ಬೇಗಂ,ಪಿ ತಿಮ್ಮಣ್ಣ, ಶಂಕರ್ ಕುರ್ಡಿ, ಸುರೇಶ ಕಂದಕಲ್, ಮಲ್ಲೇಶಪ್ಪ
ಸುಪ್ರೀತ್, ಗೋಪಾಲ ಜೂಕೂರು, ಪ್ರಶಾಂತ್ ಕಲ್ಲೂರು, ಸಾಬಮ್ಮ ಯಂಕಪ್ಪ, ಆರೀಫ್ ಮೀಯಾ,ಆನಂದ ಸ್ವಾಮಿ ನಕ್ಕುಂದಿ, ಸೇರಿದಂತೆ ಬಾಗಲವಾಡ ಸುತ್ತಮುತ್ತಲಿನ ೨೭ ಶಾಲೆಯ ವಿದ್ಯಾರ್ಥಿಗಳನ್ನು ಶಿಕ್ಷಕರು ಪಾಲಕರು ಗ್ರಾಮಸ್ಥರು ವಿದ್ಯಾರ್ಥಿಗಳು ಇದ್ದರು.