ಲಿಂಗಸುಗೂರ,ಮಾ.೩೧- ತಾಲೂಕಿನಲ್ಲಿ ಇಂದು ನಡೆಯುತ್ತಿರುವ ೨೩ಕೆಂದ್ರಗಳಲ್ಲಿ ಬರೆಯಲಿರುವ ೬೨೧೧ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಸಿದ್ದರಾಗಿದ್ದಾರೆ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಅಂಗವಾಗಿ ಮಾ. ೩೧ ರಿಂದ ಏ. ೧೫ ರವರೆಗೆ ಶಾಲಾ ಸುತ್ತ ಮುತ್ತ ನಿಷೇಧಿಸಲಾಗಿದೆ.
ಲಿಂಗಸುಗೂರ ಪಟ್ಟಣದ ನಡೆಯುತ್ತಿರುವ ನಾಲ್ಕು ಕೇಂದ್ರಗಳಾದ ಬಸವೇಶ್ವರ ಪ್ರೌಢ ಶಾಲೆ ೨೭೫.ವಿದ್ಯಾರ್ಥಿಗಳು ಹಾಗೂ ಅಮರೇಶ್ವರ ಪ್ರೌಢ ಶಾಲೆ ೨೯೧ ವಿದ್ಯಾರ್ಥಿಗಳು ಆದರ್ಶ ವಿದ್ಯಾಲಯ ಶಾಲೆಯ ೨೮೯ ಮತ್ತು ಲಿಟಲ್ ಫ್ಲವರ್ ಶಾಲೆಯ ೨೭೪ ವಿದ್ಯಾರ್ಥಿಗಳು ಇಂದು ಪರೀಕ್ಷೆ ಬರೆಯಲು ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಮುಂದಾಗಿದ್ದಾರೆ.
ತಾಲೂಕಿನಲ್ಲಿ ಒಟ್ಟು ೨೩ ಕೇಂದ್ರಗಳಲ್ಲಿ ಸ್ಕಾಡ ಮತ್ತು ೨೩ ಸಿಟ್ಟಿಂಗ್ ಸ್ಕಾಡ ಹಾಗೂ ಎರಡು ಹೆಚ್ಚುವರಿ ಉಪ ಮುಖ್ಯೆಅಧಿಕ್ಷಕರು ಗುರುಗುಂಟ ಈಚನಾಳ ಕೇಂದ್ರಗಳಲ್ಲಿ ಹೆಚ್ಚುವರಿ ಅಧಿಕಾರಿಗಳನ್ನು ನೇಮಿಸಲಾಗಿದೆ .
ಇಂದು ಪರೀಕ್ಷೆ ಕೇಂದ್ರದಲ್ಲಿ ೬೨೧೧ ರಲ್ಲಿ ೩೧೦೯ ಗಂಡು ಹಾಗೂ ೩೧೦೨ ಹೆಣ್ಣು ಮಕ್ಕಳು ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಮೂಲಕ ಭವಿಷ್ಯದ ಮುನ್ನುಡಿ ಬರೆಯಲು ಅವಕಾಶವ ಸಿಕ್ಕಿದೆ ಎಂದು ತಾಲೂಕು ಶಿಕ್ಷಣ ಇಲಾಖೆ ಇಸಿಓ ಮತ್ತು ತಾಲೂಕು ಪರೀಕ್ಷಾ ಕೇಂದ್ರಗಳ ನೋಡಲ್ ಅಧಿಕಾರಿ ಸಂತೋಷ ಇವರು ಸಂಜೆ ವಾಣಿ ಪತ್ರಿಕೆ ವರದಿಗಾರರಿಗೆ ಮಾಹಿತಿ ತಿಳಿಸಿದ್ದಾರೆ.