ನಕಲಿ ಹಾಗೂ ಕಲ್ಕತ್ತಾ ನಕಲಿ ವೈದ್ಯರುಗಳನ್ನು ತೆರವುಗೊಳಿಸಿ: ವಳಖಿಂಡಿ

(ಸಂಜೆವಾಣಿ ವಾರ್ತೆ)
ಹುಮನಾಬಾದ:ಆ.22:ಹುಮನಾಬಾದ-ಚಿಟಗುಪ್ಪಾ ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ನಾಯಿ ಕೊಡೆಗಳಂತೆ ಅಕ್ರಮವಾಗಿ ಸ್ಥಳೀಯ ನಕಲಿ ವೈದ್ಯರು ಹಾಗೂ ಕಲ್ಕತ್ತಾ ಮೂಲದ ನಕಲಿ ವೈದ್ಯರು ಜನರ ಆರೋಗ್ಯದ ಜೊತೆಗೆ ಹಾಗೂ ಜೀವದ ಜೊತೆಗೆ ಚೆಲ್ಲಾಟವಾಡುತ್ತಿದ್ದಾರೆ.
ಮೆಡಿಕಲ್ ಅಂಗಡಿಗಳಲ್ಲಿ, ವೈದ್ಯರ ಹತ್ತಿರ ಔಷಧಿಗಳ ಬಗ್ಗೆ ಅಲ್ಪ ಸ್ವಲ್ಪ ಜ್ಞಾನ ಪಡೆದುಕೊಂಡು 300/-ರೂ ಸ್ಟೇತಸ್ಕೊಪ್ ತಕೊಂಡು 500/- ರೂ ಔಷಧಿ ಹಿಡ್ಕೊಂಡು ಹಳ್ಳಿಗೆ ಬಂದು ಆಸ್ಪತ್ರೆ ತೆರೆದು ಅಮಾಯಕ ಜನರಿಗೆ ಡಾಕ್ಟರ್ ಎಂದು ನಂಬಿಸಿ ಕುತ್ತಿಗೆ ಕೊಯುತ್ತಿದ್ದಾರೆ.ರೋಗ ಎಂದು ಆಸ್ಪತ್ರೆಗೆ ಬಂದ ಅಮಾಯಕರಿಗೆ ಸ್ಟೇರಾಯಿಡ್ ಔಷಧಿ ನೀಡುವುದು.
ಹೈಡೋಜ್ ಚಿಕಿತ್ಸೆ ನೀಡುವುದು ಹೀಗೆ ಅನೇಕ ರೀತಿಯ ಅವ್ಯವಹಾರ ಮಾಡಿ ಜನರ ಜೀವದ ಜೊತೆಗೆ ಚೆಲ್ಲಾಟ ಆಡುತ್ತಿದ್ದಾರೆ.
ಸದರಿ ವಿಷಯದ ಬಗ್ಗೆ ತಮಗೆ ಈಗಾಗಲೇ ಮಾಹಿತಿ ಇದ್ದಿರುತ್ತದೆ. ದಯವಿಟ್ಟು ಈ ಅರ್ಜಿ ಗಂಭೀರವಾಗಿ ಪರಿಗಣಿಸಿ ಸಾರ್ವಜನಿಕರ ಆರೋಗ್ಯದ ಹಿತಕ್ಕಾಗಿ ಈ ಸ್ಥಳೀಯ ನಕಲಿ ಹಾಗೂ ಕಲ್ಕತ್ತಾ ಮೂಲದ ನಕಲಿ ವೈದ್ಯರನ್ನು ಆದೇಶಿಸಬೇಕೆಂದು.
ಎಂ.ಜಿ.ಪ್ರಶಾಂತ ವಳಖಿಂಡಿ ಅಧ್ಯಕ್ಷರುಯುವಶಕ್ತಿ ಸಂಸ್ಥೆ (ರಿ )ಹುಮನಾಬಾದ ತಾಲೂಕಾ ವೈದ್ಯ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು,