ನಕಲಿ ವೈದ್ಯರಿಂದ ಕೋರೋನಾ ಸೋಂಕು ಉಲ್ಬಣ

ಹಗರಿಬೊಮ್ಮನಹಳ್ಳಿ:ಮೇ.13 ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಾದ್ಯಂತ ನಕಲಿ ವೈದ್ಯರ ಹಾವಳಿಯಿಂದ ಕೋರೋನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿದ್ದು ತಕ್ಷಣವೇ ನಕಲಿ ವೈದ್ಯರನ್ನು ಪತ್ತೆಹಚ್ಚಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಕಾಂಗ್ರೆಸ್ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಆಗ್ರಹಿಸಿದ್ದಾರೆ
ಪಟ್ಟಣದಲ್ಲಿ ಸುದ್ದಿಗೋಷ್ಠಿ ಮಾತನಾಡಿದ ಅವರು ನಕಲಿ ವೈದ್ಯರು ಜನರ ಜ್ವರ ಕೆಮ್ಮು ನೆಗಡಿ ಮತ್ತು ಇತರೆ ಕಾಯಿಲೆಗಳಿಗೆ ಸ್ಟಿರಾಯಿಡ್ ಮತ್ತು ಹೈಡೋಸ್ ಮಾತ್ರೆಗಳನ್ನು ನೀಡುತ್ತಿದ್ದು ತಕ್ಷಣವೇ ಹುಷಾರಾಗಿ ನಂತರ ಜನರು ಆಸ್ಪತ್ರೆಗೆ ಬರದೇ ಕೋರೋನಾ ಸೋಂಕು ಉಲ್ಬಣಗೊಂಡು ಪರಿಸ್ಥಿತಿ ಕೈ ಮೀರಿದಾಗ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದಾರೆ.ಹಿಂದಿನ ವರ್ಷ ಕೋರೋನಾ ಸೋಂಕು ಉಲ್ಬಣಗೊಂಡ ಸಮಯದಲ್ಲಿ ನಕಲಿ ವೈದ್ಯರ ಕ್ಲಿನಿಕ್ ಮೇಲೆ ದಾಳಿ ನಡೆಸಿ ಕ್ರಮ ಕೈಗೊಳ್ಳಲಾಗಿತ್ತು. ಇದರಿಂದ ರೋಗಿಗಳು ಆಸ್ಪತ್ರೆಗೆ ಬಂದು ಕೋರೋನಾ ಸೋಂಕಿತರನ್ನು ಪತ್ತೆ ಹಚ್ಚಿ ನಿಯಂತ್ರಣ ಮಾಡಲು ನೆರವಾಗಿತ್ತು. ಅದರಲ್ಲೂ ವಿಶೇಷವಾಗಿ ಆಂಧ್ರ ಮೂ¯ದ ನಕಲಿ ವೈದ್ಯರು ಹಳ್ಳಿಹಳ್ಳಿಗಳಲ್ಲಿ ಚಿಕಿತ್ಸೆ ನೀಡುತ್ತಿದ್ದು ವೈದ್ಯಕೀಯದ ಗಂಧಗಾಳಿ ಗೊತ್ತಿಲ್ಲದೇ ಯದ್ವಾತದ್ವಾ ಲಸಿಕೆ ಮಾತ್ರೆ ನೀಡುತ್ತಿದ್ದು ತಕ್ಷಣವೇ ಇವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾ ಉಸುವಾರಿ ಸಚಿವ ಆನಂದ್ ಸಿಂಗ್ ಮತ್ತು ಡಿಸಿ , ಎಸ್ ಪಿ , ಡಿಹೆಚ್‍ಒ ಯವರಿಗೆ ಪತ್ರ ಬರೆದಿರುವುದಾಗಿ ಎಂದರು.