ನಕಲಿ ರಸಗೊಬ್ಬರದ ಮೇಲೆ ದಾಳಿ

ಮೈಸೂರು: ಮೇ.17:- ತಾಲ್ಲೂಕಿನ ಕಸಬಾ ಹೋಬಳಿಯ ಮೆಟಗಳ್ಳಿ ಗ್ರಾಮದಲ್ಲಿ ಕಳಪೆ ರಸಗೊಬ್ಬರ ಮಾರಾಟ ಮಾಡಿದ ಜಾಗದ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ಪೆÇಲೀಸ್ ಇಲಾಖೆ ಸಹಯೋಗದೊಂದಿಗೆ ದಾಳಿ ಮಾಡಿ, ಸ್ಥಳದಲ್ಲಿ ದೊರೆತಿರುವ ರಸಗೊಬ್ಬರವನ್ನು ವಶಪಡಿಸಿಕೊಳ್ಳಲಾಯಿತು.
ಈ ದಾಳಿಯ ಸಮಯದಲ್ಲಿ ಮೈಸೂರು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಚಂದ್ರಶೇಖರ್, ಉಪ ಕೃಷಿ ನಿರ್ದೇಶಕ ಡಾ.ಧನಂಜಯರವರು, ಸಹಾಯಕ ಕೃಷಿ ನಿರ್ದೇಶಕರುಗಳಾದ ಕೃಷ್ಣ ಮತ್ತು ಮಧುಲತಾರವರು ಹಾಗೂ ಕೃಷಿ ಅಧಿಕಾರಿಗಳಾದ ಜೀವನ್ ಪಿ.ಎನ್ ಮತ್ತು ಕಾರ್ತಿಕ್ ಸಿ.ಎಂ ಹಾಗೂ ಶ್ರೀನಿವಾಸ್ ರವರು ದಾಳಿ ಸಮಯದಲ್ಲಿ ಹಾಜರಿದ್ದರು. ಈ ದಾಳಿಗೆ ಸಂಬಂಧಪಟ್ಟ ಪ್ರಕರಣಗಳಿಗೆ ಮೇಟಗಳ್ಳಿ ಪೆÇಲೀಸ್ ಠಾಣೆಯಲ್ಲಿ ಸಹಾಯಕ ಕೃಷಿ ನಿರ್ದೇಶಕರಾದ ಶ್ರೀ ಕೃಷ್ಣ ರವರು ಕೇಸ್ ಅನ್ನು ದಾಖಲೆ ಮಾಡಿದರು.ಈ ರೀತಿಯಾಗಿ ಅನುಮಾನಾಸ್ಪದವಾಗಿ ಯಾರಾದರೂ ಇಂತಹ ಕೃತ್ಯಗಳನ್ನು ನಡೆಸುತ್ತಿದ್ದಲ್ಲಿ ಕೂಡಲೇ ಕೃಷಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತರಲು ಮೈಸೂರು ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕಿ ಡಾ.ಹೆಚ್.ಬಿ.ಮಧುಲತಾ ರವರು ರೈತರಲ್ಲಿ ಮನವಿ ಮಾಡಿದ್ದಾರೆ.