ನಕಲಿ ಯಾರು? ಎಂಬುದು ಆತ್ಮಾವಲೋಕನ ಮಾಡಿಕೊಳ್ಳಿ

ಕೈಗಾರಿಕಾ ಪ್ರದೇಶ ಅಭಿವೃದ್ಧಿ ಹೋರಾಟ
ದೇವದುರ್ಗ:ತಾಲೂಕಿನ ಅಭಿವೃದ್ಧಿ ಒಳಗಡೆ ಕೈಗಾರಿಕೆ ಅಭಿವೃದ್ಧಿಯೂ ಆಗಬೇಕೆಂಬ ಉದ್ದೇಶದಿಂದ ನಡೆಸಿರುವ ಹೋರಾಟ ಮತ್ತು ಹೋರಾಟಗಾರರಿಗೆ ನಕಲಿ ಎನ್ನುವವರು,ತಾವೇ ನಕಲಿ ಫಲಾನುಭವಿಗಳಾಗಿದ್ದು, ಅಳ್ಳುಂಡಿ ಬ್ರದರ್ಸ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಕೈಗಾರಿಕಾ ಅಭಿವೃದ್ಧಿ ಹೋರಾಟ ಸಮಿತಿ ಪ್ರಧಾನ ಸಂಚಾಲಕ ಮಲ್ಲಯ್ಯ ಕಟ್ಟೀಮನಿ,ಪದಾಧಿಕಾರಿಗಳಾದ ಜಿ.ಬಸವರಾಜ ನಾಯಕ,ಶಿವಪ್ಪ ಬಲ್ಲಿದವ ಆರೋಪಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಜಂಟಿ ಸುದ್ದಿಗೋಷ್ಠಿ ಉದ್ದೇಶಿಸಿ ಸೋಮವಾರ ಮಾತನಾಡಿ,ಕೈಗಾರಿಕಾ ಅಭಿವೃದ್ಧಿಗಾಗಿ ಸುಮಾರು ೨೦ವರ್ಷಗಳಿಂದ ನಿರಂತರ ಹೋರಾಟ ಮಾಡಲಾಗಿದೆ.
ಕೆಆರ್‌ಎಸ್ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ ಹಾಗು ಜನಸಂಗ್ರಾಮ ಪರಿಷತ್ತಿನ ಹಿರಿಯರಾದ ರಾಘವೇಂದ್ರ ಕುಷ್ಠಗಿ ನೇತೃತ್ವದಲ್ಲಿ ಕೈಗಾರಿಕಾ ಅಭಿವೃದ್ಧಿಗಾಗಿ ಹೋರಾಟ ಮಾಡಿರುವ ಇತಿಹಾಸವಿದೆ.
೨೦೦೯ರಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿಸಿಕೊಂಡು ಅಳ್ಳುಂಡಿ ಬ್ರದರ್ಸ,ಕೈಗಾರಿಕಾ ಪ್ಲಾಟ್‌ಗಳನ್ನು ಪಡೆಯಲು ಯತ್ನಿಸಿದ್ದರು.ಆದರೆ ತಮ್ಮ ಜೊತೆಗೆ ಕೈಗಾರಿಕಾ ಇಲಾಖೆಗೆ ಜಮೀನು ನೀಡಿರುವ ಎಸ್ಟಿ ಫಲಾನುಭವಿಗಳು ಹಾಗೂ ಓರ್ವ ಹಿಂದುಳಿದ ವರ್ಗದ ಜಮೀನು ಮಾಲೀಕರನ್ನು ಕಡೆಗಣಿಸಿ,ಸ್ವಾರ್ಥದಿಂದ ತಾವೇ ಪ್ಲಾಟ್‌ಗಳನ್ನು ಪಡೆಯಲು ಯತ್ನಿಸಿರುವದು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ.ಇಲ್ಲಿ ತಾರತಮ್ಮ ಯಾರು?ಮಾಡಿದವರು ಎಂಬುದು ಎಲ್ಲರಿಗೂ ಸತ್ಯ ಗೊತ್ತಾಗಬೇಕಾಗಿದೆ.
ಹೋರಾಟದ ಫಲವಾಗಿ ಕೈಗಾರಿಕಾ ಜಮೀನಿನ ಪ್ಲಾಟ್‌ಗಳನ್ನು ಮಾನ್ಯ ಜಿಲ್ಲಾಧಿಕಾರಿಗಳು ೨೫-೧೦-೨೦೧೩ರಂದು ರದ್ದು ಪಡಿಸಿರುವ ದಾಖಲೆಗಳು ಲಭ್ಯವಿದೆ.
ಈ ಹಿಂದೆ ಮಾಜಿ ಸಚಿವ ಹನುಮಂತಪ್ಪ ಆಲ್ಕೋಡ್ ಅಧಿಕಾರವಧಿಯಲ್ಲಿಯೂ ಕೂಡ ಕೈಗಾರಿಕಾ ಜಮೀನು ಮರಳಿ ರೈತರಿಗೆ ನೀಡಬೇಕೆಂದು ಪ್ರಯತ್ನಿಸಿರುವದು ಕೂಡ ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ.
ಆದರೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಅಧೀನ ಕಾರ್ಯದರ್ಶಿಗಳು,ಸ.ನಂ೧೯೫//೧ರ ೯.೯ಗುಂಟೆ,೧೯೫//೫ರ ೨.೩೪ಗುಂಟೆ ಜಮೀನುಗಳನ್ನು ವಾಪಾಸು ನೀಡಲು ಕಾನೂನಿನಲ್ಲಿ ಅವಕಾಶವಿಲ್ಲವೆಂದು ಆಲ್ಕೋಡರಿಗೆ ೧೪-೦೬-೨೦೦೭ರಂದು ಹಿಂಬರಹ ನೀಡಿರುವ ದಾಖಲೆಯೂ ಕೂಡ ನಮ್ಮಲ್ಲಿದೆ.
ಆದರೆ ನೈಜ ಕಳಕಳಿ ಇರುವ ಹೋರಾಟಗಾರರನ್ನು ನಕಲಿ ಎನ್ನುವದು,ಅವಕಾಶಕ್ಕಾಗಿ ಸಮಿತಿ ರಚನೆಯಾಗಿದೆ ಎಂಬ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ.
ಕೈಗಾರಿಕಾ ಅಭಿವೃದ್ಧಿಯಾದಲ್ಲಿ ಇಲ್ಲಿಯ ಯುವಕರಿಗೆ ಉದ್ಯೋಗ,ವ್ಯಾಪಾರ ವೃದ್ಧಿಯಾಗುತ್ತದೆ ಎಂಬುದು ನಮ್ಮ ಕಳಕಳಿಯಾಗಿದೆ.ಸರಕಾರ(ಕೈಗಾರಿಕಾ ಇಲಾಖೆ) ಜಮೀನು ಮರಳಿ ರೈತರಿಗೆ ನೀಡಿದರೆ ನೀಡಲಿ.ಪಟ್ಟಣದ ಹೈದಯ ಭಾಗದಲ್ಲಿರುವ ಜಮೀನಿನಲ್ಲಿ ಕೈಗಾರಿಕಾ ಚಟುವಟಿಕೆಗಳು ನಡೆಯಬೇಕೆನ್ನುವದು ನಮ್ಮ ಅಭಿಪ್ರಾಯ.ಶಾಸಕ ಕೆ.ಶಿವನಗೌಡ ನಾಯಕ ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದಾರೆ.ಇವರಿಗೆ ಈ ಕೈಗಾರಿಕಾ ಅಭಿವೃದ್ಧಿ ಬೇಕಿಲ್ಲವೇ?ಉಳೀದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಕೂಡ ಮೌನ ವಹಿಸಿರುವದು ಸೋಜಿಗದ ಸಂಗತಿಯಾಗಿದೆ.ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಅನೇಕ ಸಮಸ್ಯೆಗಳು,ಅನ್ಯಾಯಗಳು ಜರುಗಿದಾಗ ಪ್ರತಿಭಟನೆ ಮಾಡುವದು ಸಹಜ.ಆದರೆ ಇದನ್ನೇ ಬಂಡವಾಳ ಮಾಡಿಕೊಂಡು ಬೆದರಿಸುವದು,ಸಲ್ಲದ ಅರೋಪಗಳನ್ನು ಮಾಡುವದದು ಅಳ್ಳುಂಡಿ ಬ್ರದರ್ಸ ಬಿಡಬೇಕಾಗಿದೆ.
ಈಗಾಗಲೇ ಜಿಲ್ಲಾಧಿಕಾರಿಗಳು ಕೈಗಾರಿಕಾ ಪ್ರದೇಶದ ಹದ್ದುಬಸ್ತಿಗೆ ಮಾ.೯ರಂದು ಸಮಯ ನಿಗದಿಗೊಳಿಸಿದ್ದಾರೆ.ಬೆಳವಣಿಗೆಗಳನ್ನು ಗಮನಿಸಿ ಹೋರಾಟ ನಿರಂತರವಾಗಿ ಮಾಡಲಾಗುವದು ಎಂದು ಹೋರಾಟ ಸಮಿತಿ ಪದಾಧಿಕಾರಿಗಳಾದ ಮಲ್ಲಯ್ಯ ಕಟ್ಟೀಮನಿ,ಜಿ.ಬಸವರಾಜ ನಾಯಕ,ಶಿವಪ್ಪ ಬಲ್ಲಿದವ ತಿಳಿಸಿದರು.