ನಕಲಿ ಮದ್ಯ ಸೇವನೆ ಮೃತರ ಸಂಖ್ಯೆ ೨೪

ಬೊಟಾಡ್, ಜು.೨೬ – ಗುಜರಾತ್‌ನ ಬೊಟಾಡ್ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವನೆಯಿಂದ ಮೃತರ ಸಂಖ್ಯೆ ೨೪ಕ್ಕೆ ಏರಿಕೆಯಾಗಿದೆ.
ಈ ಕುರಿತು ಮಾಹಿತಿ ನೀಡಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆಶಿಶ್ ಭಾಟಿಯಾ, ಭಾವನಗರ, ಬೋಟಾಡ, ಬರ್ವಾಲಾ ಮತ್ತು ಧಂಧೂಕಾ ಸೇರಿದಂತೆ ಹಲವೆಡೆ ಕಳೆದ ೩ ದಿನದಲ್ಲಿ ನಕಲಿ ಮದ್ಯ ಸೇವಿಸಿ ಮೃತಪಟ್ಟಿದ್ದಾರೆ. ವಿವಿಧ ಆಸ್ಪತ್ರೆಗಳಲ್ಲಿ ಸುಮಾರು ೩೦ ಜನರು ಇನ್ನೂ ಚಿಕಿತ್ಸೆ ಪಡೆಯುತ್ತಿದ್ದಾರೆ ತಿಳಿಸಿದ್ದಾರೆ.
ಬೊಟಾಡ್ ಜಿಲ್ಲಾಯೊಂದರಲ್ಲೇ ೧೬ ಮಂದಿ ಸಾವನ್ನಪ್ಪಿದ್ದಾರೆ ದೃಢಪಡಿಸಿದೆ. ಅಹಮದಾಬಾದ್ ಜಿಲ್ಲಾಯ ಧಂಧೂಕಾ ತಾಲೂಕಿನ ಐವರು ಚಿಕಿತ್ಸೆ ವೇಳೆ ಸಾವನ್ನಪ್ಪಿದ್ದಾರೆ. ದೇಶ ನಿರ್ಮಿತ ನಕಲಿ ಮದ್ಯವನ್ನು ತಯಾರಿಸಿ ಮಾರಾಟ ಮಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ನಿನ್ನೆ ಮುಂಜಾನೆ ಬರ್ವಾಲಾ ತಾಲೂಕಿನ ರೋಜಿದ್ ಗ್ರಾಮ ಮತ್ತು ಇತರ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಸಿಸುತ್ತಿದ್ದ ಕೆಲವರ ಸ್ಥಿತಿ ಹದಗೆಟ್ಟ ನಂತರ ಬರ್ವಾಲಾ ಮತ್ತು ಬೊಟಾಡ್ ಪಟ್ಟಣಗಳ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಲಾಯಿತುನಮತರ ಈ ವಿಷಯ ಬೆಳಕಿಗೆ ಬಂದಿದೆ.
ಘಟನೆ ಕುರಿತು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ಅಹಮದಾಬಾದ್ ಕ್ರೈಂ ಬ್ರಾಂಚ್ ಕೂಡ ತನಿಖೆಗೆ ನಡೆಸುತ್ತಿದೆ.
ಗುಜರಾತ್ ಪ್ರವಾಸದಲ್ಲಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಘಟನೆಯನ್ನು ದುರದೃಷ್ಟಕರ ಎಂದು ಹೇಳಿದ್ದು, ನಿಷೇಧಾಜ್ಞೆ ಜಾರಿಯಲ್ಲಿರುವ ಗುಜರಾತ್‌ನಲ್ಲಿ ಅಕ್ರಮ ಮದ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.