ಕೋಲಾರ,ಜೂ,೧೦:ನಕಲಿ ಬೋನಫೈಡ್ ಹಗರಣವನ್ನು ಸಿಬಿಐಗೆ ಒಪ್ಪಿಸಿ ಆರ್.ಟಿ.ಒ ಕಚೇರಿಯಲ್ಲಿನ ಭ್ರಷ್ಟಚಾರತೆಗೆ ಕಡಿವಾಣ ಹಾಕಬೇಕೆಂದು ರೈತ ಸಂಘದಿಂದ ಟ್ರಾಕ್ಟರ್‌ಗಳ ಸಮೇತ ಆರ್.ಟಿ.ಒ ಕಚೇರಿಯ ಮುಂದೆ ಹೋರಾಟ ಮಾಡಿ ಆರ್.ಟಿ.ಒ ಮುಖಾಂತರ ಕಂದಾಯ ಸಚಿವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಸರ್ಕಾರಿ ಕೆರೆ ಜಮೀನಿಗೆ ಜಿಲ್ಲಾಧಿಕಾರಿಗಳ ಸಹಿಯನ್ನೇ ನಕಲು ಮಾಡಿರುವ ಪ್ರಕರಣ ಇನ್ನೂ ಜೀವಂತವಾಗಿರುವಾಗಲೇ ಯಾರದೋ ಜಮೀನಿಗೆ ಇನ್ಯಾರೋ ಮಾಲೀಕನ ಟ್ರಾಕ್ಟರ್‌ಗೆ ನಕಲಿ ಬೋನಫೈಡ್ ದಾಖಲೆಗಳನ್ನು ಸೃಷ್ಠಿ ಮಾಡಿ ಕೋಟ್ಯಾಂತರ ರೂಪಾಯಿ ತೆರಿಗೆ ಹಣವನ್ನು ಸರ್ಕಾರಕ್ಕೆ ವಂಚನೆ ಮಾಡಿ ಅಕ್ರಮ ಆರ್‌ಡಿ ನಂಬರ್‌ಗಳನ್ನು ಸೃಷ್ಠಿ ಮಾಡುವ ಮುಖಾಂತರ ಸಾವಿರಾರು ಟ್ರಾಕ್ಟರ್ ಹಾಗೂ ಟ್ರಾಲಿಗಳನ್ನು ನೋಂದಣಿ ಮಾಡಿರುವ ಹಗರಣ ತೇಲಗಿ ಛಾಪಾ ಕಾಗದ ಹಗರಣವನ್ನು ಮೀರಿಸುವಂತಿದೆ ಎಂದು ಹದಗೆಟ್ಟಿರುವ ವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಕಂದಾಯ ಇಲಾಖೆ ಅಧಿಕಾರಿಗಳು ಸರ್ಕಾರಿ ಕೆರೆ ಗೋಮಾಳ, ರಾಜಕಾಲುವೆಗೆ ನಕಲಿ ದಾಖಲಿಗೆ ಸೃಷ್ಠಿ ಮಾಡಿದರೆ ಆರ್.ಟಿ.ಒ ಕಚೇರಿಯಲ್ಲಿನ ಅಧಿಕಾರಿಗಳು ದಲ್ಲಾಳಿಗಳ ಮುಖಾಂತರ ಹೆಜ್ಜೆ ಹೆಜ್ಜೆಗೂ ಹಣವನ್ನು ಸುಲಿಗೆ ಮಾಡಿ ಜನ ಸಾಮಾನ್ಯರ ರಕ್ತ ಹೀರುವ ಇಲಾಖೆಗಳಾಗಿ ಮಾರ್ಪಟ್ಟಿದ್ದರೂ ಹಿರಿಯ ಅಧಿಕಾರಿಗಳು ಕಿರಿಯ ಅಧಿಕಾರಿಗಳ ನೀಡುವ ಲಂಚದ ಹಣಕ್ಕೆ ಬಾಯಿಯಿದ್ದು ಮಾತನಾಡದ ಮೂಖರಾಗಿದ್ದಾರೆಂದು ಆರೋಪ ಮಾಡಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ ಶ್ರೀನಿವಾಸಪುರ ತಾಲ್ಲೂಕು ಯಲ್ದೂರು ಹೋಬಳಿ ನಾಡಕಚೇರಿಯ ಉಪ ತಹಸೀಲ್ದಾರ್ ಚಂದ್ರಶೇಖರ್ ಅವದಿಯಲ್ಲಿ ನಡೆದಿರುವ ಬೋನೋಪೈಡ್ ಆಕ್ರಮ ಮರೆಮಾಚಲು ಜಿಲ್ಲಾದಿಕಾರಿಗಳ ಕಚೇರಿಗೆ ವರ್ಗಾವಣೆ ಮಾಡಿಸಿಕೊಂಡಿರುವ ಜೊತೆಗೆ ಎಲ್ಲಾ ನಾಡಕಚೇರಿಗಳ ಉಪ ತಹಶೀಲ್ದಾರ್‌ಗಳ ಕೈಯಲ್ಲಿ ಥಂಬ್ ಕೊಡುವ ಪೆನ್‌ಡ್ರೈವ್ ಇರುತ್ತದೆ. ಆದರೆ ಅಲ್ಲಿ ಹೊಟ್ಟೆಪಾಡಿಗಾಗಿ ಹೊರಗುತ್ತಿಗೆ ಮೇಲೆ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ಸಂಪೂರ್ಣ ಜವಾಬ್ದಾರಿ ಉಪತಹಸೀಲ್ದಾರ್ ನೀಡುತ್ತಾರೆಯೇ ? ಇದು ಸಾರ್ವಜನಿಕ ಬುದ್ಧಿವಂತರ ಪ್ರಶ್ನೆಯಾಗಿದೆ ಎಂದರು.
ಹೋರಾಟದಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾಕಾರ್ಯಾದ್ಯಕ್ಷ ವಕ್ಕಲೇರಿ ಹನುಮಯ್ಯ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವಣ್ಣ, ಗೋವಿಂದಪ್ಪ, ನರಸಿಂಹಯ್ಯ, ಕೋಟೆ ಶ್ರೀನಿವಾಸ್, ಮಂಜುಳಾ, ಚಂದ್ರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿ ಫಾರೂಖ್‌ಪಾಷ, ಜಿಲ್ಲಾ ಕಾರ್ಯಾಧ್ಯಕ್ಷ ಹೆಬ್ಬಣಿ ಆನಂದರೆಡ್ಡಿ, ಬಂಗಾರಿ ಮಂಜು, ಸುನೀಲ್‌ಕುಮಾರ್, ಭಾಸ್ಕರ್, ರಾಜೇಶ್, ದೇವರಾಜ್, ಗುರುಮೂರ್ತಿ, ವಿಶ್ವ, ವಿಜಯ್‌ಪಾಲ್ ಯಲ್ಲಪ್ಪ, ಹರೀಶ್, ಮಾಸ್ತಿ ವೆಂಕಟೇಶ್, ರಾಮಸಾಗರ ವೇಣು, ಶೈಲಜ, ರಾಧ, ರತ್ನಮ್ಮ, ನಾಗಮಣಿ, ಚೌಡಮ್ಮ, ಮುಂತಾದವರಿದ್ದರು.