ನಕಲಿ ಬೀಜ ಮಾರಾಟ ಮಾಡಿದರೆ ಕ್ರಮ – ಮಲ್ಲಿಕಾರ್ಜುನ

ರಸಗೊಬ್ಬರ-ಬೀಜ ಮಾರಾಟ ಮಳಿಗೆ ಮೇಲೆ ದಾಳಿ
ಸಿರವಾರ.ಜೂ.೦೯-ಮುಂಗಾರು ಪ್ರಾರಂಭವಾಗಿದ್ದು ಬೀಜ- ರಸಗೊಬ್ಬರ ಖರೀದಿಗೆ ರೈತರು ಅಂಗಡಿಗಳಿಗೆ ಆಗಮಿಸುತ್ತಾರೆ. ಅವರಿಗೆ ನಿಮ್ಮ ಅಂಗಡಿಯಲ್ಲಿರುವ ಬೀಜ ರಸಗೊಬ್ಬರ ದಾಸ್ತಾನು ಹಾಗೂ ಧರ ಪಟ್ಟಿಯನ್ನು ಕಾಣುವಂತೆ ಹಾಕಬೇಕು. ನಕಲಿ ಬೀಜ, ಕಳಪೆ ಗೊಬ್ಬರ ಮಾರಾಟ ಮಾಡಿದ್ದು ಕಂಡು ಬಂದರೆ ಸೂಕ್ತ ಕ್ರಮಕೈಗೊಳಲಾಗುವುದು ಎಂದು ರಾಯಚೂರು ಜಂಟಿ ಕೃಷಿ ನಿರ್ದೇಶಕ, ಜಾರಿ ದಳದ ಸ.ಕೃ.ನಿರ್ದೇಶಕ ಮಲ್ಲಿಕಾರ್ಜುನ ಹೇಳಿದರು.
ಪಟ್ಟಣದಲ್ಲಿ ಪರ್ಟಿಲೈಜರ್ಸ್, ಬೀಜ, ರಸಗೊಬ್ಬರ ಮಾರಾಟ ಮಳಿಗೆ(ಅಂಗಡಿ)ಗಳಿಗೆ ತೆರಳಿ ತಪಸಾಣೆ ಮಾಡಿ ಮಾತನಾಡಿದ ಅವರು ಈ ವರ್ಷ ಮುಂಗಾರು ಹರ್ಷದಾಯಕವಾಗುತ್ತದೆ. ರೈತರು ಅಂಗಡಿಗಳಿಗೆ ಆಗಮಿಸಿ ಬೀಜ, ರಸಗೊಬ್ಬರ ಖರೀದಿ ಮಾಡುತ್ತಿದ್ದಾರೆ. ಇಂತಹ ಸಂಧರ್ಭದಲ್ಲಿ ರೈತರಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಬೇಕಾಗಿದೆ. ಆದರಿಂದ ಅಂಗಡಿಯ ಮಾಲೀಕರಿಗೆ ಬೀಜ, ರಸಗೊಬ್ಬರ, ಕ್ರೀಮಿನಾಶಕ ದಾಸ್ತಾನು ಎಷ್ಟಿದೆ, ದರ ಎಷ್ಟು ಎಂದು ರೈತರಿಗೆ ಗ್ರಾಹಕರಿಗೆ ಕಾಣುವಂತೆ ಹಾಕಬೇಕು ಮತ್ತು ಅದೇ ದರಕ್ಕೆ ಮಾರಾಟ ಮಾಡಿ ರೈತರಿಂದ ರಸೀದಿ ಪುಸ್ತಕದಲ್ಲಿ ಅವರಿಂದ ಸಹಿ ಪಡೆದಕೊಳ್ಳಿ. ಅಂಗಡಿಯವರು ಪರವಾನಿಗೆ ನವಿಕರಿಸಿಕೋಳ್ಳಬೆಕು ಇಲ್ಲದಿದ್ದರೆ, ನಕಲಿ ಬೀಜ, ರಸಗೊಬ್ಬರ ಕ್ರೀಮಿ ನಾಶಕ ಮಾರಾಟ ಮಾಡಿದರೆ ಅಂಗಡಿಯನ್ನು ಸೀಲ್ ಮಾಡಲಾಗುವುದು ಎಂದರು. ಜಾರಿ ದಳದಲ್ಲಿ ಸಹಾಯಕ ಕೃಷಿ ನಿರ್ದೇಶಕ ಬಿ.ಕೆ.ಮಂಜುನಾಥ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಅಯ್ಯನಗೌಡ ಏರೆಡ್ಡಿ ಸೇರಿದಂತೆ ಇನ್ನಿತರರು ಇದ್ದರು.