ನಕಲಿ ಬೀಜಗಳ ಬಗ್ಗೆ ಜಾಗ್ರತೆ ವಹಿಸಿ: ಧುತ್ತರಗಿ

ಚಿಂಚೋಳಿ,ಜೂ.8- ಜಿಲ್ಲೆಯ ರೈತರು ಬಿತ್ತನೆ ಬೀಜ ಖರಿದಿಸುವಾಗ ಎಚ್ಚರಿಕೆ ವಹಿಸುವಂತೆ ಕಲಬುರ್ಗಿ ಬಿಜೆಪಿ ರೈತಮೋರ್ಚಾ ಜಿಲ್ಲಾಧ್ಯಕ್ಷರಾದ ರಮೇಶ ಆರ್ ಧುತ್ತರಗಿ ಅವರು ಮನವಿ ಮಾಡಿದ್ದಾರೆ.
ಬಿತ್ತನೆ ಬೀಜ ಖರೀದಿ ಮಾಡುವಾಗ ಚೀನಾದಿಂದ ಬಂದಿರುವ ಅಕ್ರಮ ಹಾಗೂ ನಕಲಿ ಬೀಜಗಳ ಜಾಗೃತೆ ವಹಿಸುವುದು ಅತ್ಯಗ್ಯವಾಗಿದೆ ಎಂದು ಅವರು ನೀಡಿರುವ ಹೇಳಿಕೆಯಲ್ಲಿ ರೈತರಿಗೆ ಎಚ್ಚರಿಸಿದ್ದಾರೆ.
ಭಾರತದ ಮಾರುಕಟ್ಟೆಗಳಲ್ಲಿ ಚಿನಾದಿಂದ ನಕಲಿ ಬಿತ್ತನೆ ಬೀಜಗಳು ಬಂದಿರುವ ಕುರಿತು ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿರುವ ಹಿನ್ನಲೆಯಲ್ಲಿ ರೈತರು ತಾವು ಖರೀದಿಸುವ ಬೀಜಗಳ ಬಗ್ಗೆ ಜಾಗೃತೆ ವಹಿಸುವಂತೆ ಅವರು ಕೋರಿದ್ದಾರೆ.
ಬೀಜ ರಸಗೊಬ್ಬರ ಕ್ರಿಮಿನಾಶಕ ಹಾಗೂ ಕಳೆನಾಶಕ ಗಳನ್ನು ಖರೀದಿಸುವಾಗ ತಾವು ತಪ್ಪದೇ ರಸೀದಿಯನ್ನು ಪಡೆದುಕೊಳ್ಳಬೇಕು, ನಕಲಿ ಪ್ಯಾಕೆಟ್ ಖರೀದಿಸದಂತೆ ರೈತರು ಜಾಗ್ರತೆ ವಹಿಸಬೇಕು ಮತ್ತು ಪ್ರತಿಯೊಬ್ಬರು ತಾವು ಬೀಜ-ಗೊಬ್ಬರ ಖರೀದಿಸುವಾಗ ರಸೀದಿಯನ್ನು ಕೂಡ ಪಡೆದುಕೊಂಡು ಭದ್ರವಾಗಿ ಇಟ್ಟುಕೊಳ್ಳುವಂತೆ ರಮೇಶ ಆರ್ ಧುತ್ತರಗಿ. ಮನವಿ ಮಾಡಿದ್ದಾರೆ