ನಕಲಿ ಬಿತ್ತನೆ ವಿರುದ್ದ ಕ್ರಮಕ್ಕೆ ಕೃಷಿ ಶೋಭಾ ಸೂಚನೆ

ಕೋಲಾರ,ಜ,೨೧-ಕುಲಾಂತರಿ ಮೆಕ್ಕೆಜೋಳ, ಸಾಸಿವೆ, ಬದನೆ, ಹತ್ತಿ ಕ್ಷೇತ್ರ ಪ್ರಯೋಗಗಳನ್ನು ನಡೆಸಲು ಯಾವುದೇ ಕಾರಣಕ್ಕೂ ನೀಡಬಾರದು ಜೊತೆಗೆ ನಕಲಿ ಬಿತ್ತನೆ ಬೀಜ ರಸಗೊಬ್ಬರ ಕೀಟ ನಾಶಕ ನಿಯಂತ್ರಣಕ್ಕೆ ಪ್ರಬಲ ಕಾನೂನು ಕಾಯ್ದೆ ಜಾರಿಗೆ ಒತ್ತಾಯಿಸಿ ರೈತ ಸಂಘದಿಂದ ಕೃಷಿ ಸಚಿವೆ ಶೋಭಕರಂದ್ಲಾಜೆರಿಗೆ ಮನವಿ ಪತ್ರ ಸಲ್ಲಿಸಿದರು.
ಜೊತೆಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗೆ ಹೆಚ್ಚಿನ ಅಧಿಕಾರ ನೀಡುವ ಜೊತೆಗೆ ಕಳಪೆ ಕಲ್ಲಂಗಡಿ ಬಿತ್ತನೆಬೀಜ ವಿತರಣೆ ಮಾಡಿರುವ ಯುನಿಜೆನ್ ಸೀಡ್ಸ್ ಕಂಪನಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಿ ನಷ್ಟವಾಗಿರುವ ರೈತನಿಗೆ ನ್ಯಾಯ ಕೊಡಿಸಿ ಕಂಪನಿಯ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಬೇಕೆಂದು ಮನವಿ ಮಾಡಿದರು
ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ೫ ವರ್ಷದಿಂದ ಜಿಲ್ಲೆಯಲ್ಲಿ ಟೊಮೋಟೋ, ಕ್ಯಾಪ್ಸಿಕಾಂ, ಆಲೂಗಡ್ಡೆ ಬೆಳೆಗಳಿಗೆ ಬಾಧಿಸುತ್ತಿರುವ ಊಜಿ, ನುಸಿ, ಅಂಗಮಾರಿ, ಚುಕ್ಕೆ ರೋಗ ನಿಯಂತ್ರಣಕ್ಕೆ ಬಾರದೆ ರೈತರು ಕಂಗಾಲಾಗಿದ್ದು, ಸಮಸ್ಯೆ ತಿಳಿಯದೆ ಪರದಾಡುತ್ತಿದ್ದಾರೆ. ಇದಕ್ಕಾಗಿ ವಿಶೇಷ ತೋಟಗಾರಿಕಾ ಮತ್ತು ಕೃಷಿ ಅಧಿಕಾರಿಗಳ ತಂಡ ರಚನೆ ಮಾಡಬೇಕು.
ಪ್ರತಿ ವರ್ಷ ಜಿಲ್ಲೆಯಲ್ಲಿ ನಕಲಿ ಬಿತ್ತನೆ ಬೀಜ, ರಸಗೊಬ್ಬರ ಕೀಟನಾಶಕಗಳ ಹಾವಳಿಯಿಂದ ರೈತರು ಕಷ್ಟಪಟ್ಟು ಬೆಳೆದ ಬೆಳೆ ನಾಶವಾಗುತ್ತಿದ್ದರೂ ಸಮಸ್ಯೆ ಗಂಭೀರವಾಗಿ ಪರಿಗಣಿಸುವಲ್ಲಿ ತೋಟಗಾರಿಕೆ ಅಧಿಕಾರಿಗಳು ವಿಪಲವಾಗಿ ನಷ್ಟವಾದಾಗ ದಾರಾವಾಡ, ಬಾಗಲಕೋಟೆ ವಿಜ್ಞಾನಿಗಳಿಂದ ಪರೀಶೀಲನೆ ಮಾಡಿ ವರದಿ ಬಂದ ನಂತರ ನ್ಯಾಯ ಕೊಡಿಸುತ್ತೇವೆಂದು ಹೇಳುತ್ತಾ ಕಡೆಗೆ ಕಂಪನಿ ಗುಣಮಟ್ಟದ ಪ್ರಮಾಣ ಪತ್ರ ನೀಡಿ ರೈತರದೇ ತಪ್ಪು ಎಂದು ವರದಿ ನೀಡುತ್ತಿರುವುದರಿಂದ ರೈತರಿಗೆ ನ್ಯಾಯ ಸಿಗದಂತಾಗಿದೆ ಎಂದು ಆರೋಪಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಕೃಷಿ ಸಚಿವೆ ಶೋಭ ಕರಂದ್ಲಾಜೆ ನಕಲಿ ಬೀಜ, ರಸಗೊಬ್ಬರಮೇಲೆ ಕ್ರಮ ಕೈಗೊಳ್ಳಲು ರಾಜ್ಯಗಳಿಗೆ ಅಧಿಕಾರ ಕೊಟ್ಟಿದ್ದೇವೆ. ಜೊತೆಗೆ ಈ ಕಂಪನಿಯ ವಿರುದ್ದ ಕ್ರಮ ಕೈಗೊಂಡು ನಮಗೆ ವರದಿ ಮಾಡಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಮಂಗಸಂದ್ರ ತಿಮ್ಮಣ್ಣ, ವರಮಹಾಲಕ್ಷ್ಮೀ, ಮಂಜುಳಾ, ಶ್ರೀನಿವಾಸ್, ಸುಪ್ರೀಂ ಚಲ, ಪುತ್ತೇರಿ ರಾಜು, ಗಿರೀಶ್ ಇದ್ದರು.