ನಕಲಿ ಬಯೋ ಡಿಸೈಲ್ ಮಾರಾಟ ಘಟಕದ ಮೇಲೆ ದಾಳಿ

ವಿಜಯಪುರ,ಅ.12- ನಕಲಿ ಬಯೋ ಡಿಸೈಲ್ ಮಾರಾಟ ಅಡ್ಡೆಯ ಮೇಲೆ ದಾಳಿಮಾಡಿದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಆಧಿಕಾರಿಗಳು ನಕಲಿ ಬಯೋ ಡೀಸೈಲ್‍ಗಾಗಿ ಬಳಸುತ್ತಿದ್ದ ವಸ್ತುಗಳನ್ನು ಜಪ್ತಿಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಝಳಕಿ ಗ್ರಾಮದ ಹತ್ತಿರದ ಎನ್.ಎಚ್- 52 ರಲ್ಲಿರುವ ಶೆಡ್ ನಲ್ಲಿ ನಕಲಿ ಬಯೋ ಡಿಸೈಲ್ ಮಾರಾಟ ಮಾಡುತ್ತಿದ್ದ ತಂಡ
ದಾಳಿ ನಡೆಯುತ್ತಲೇ ಸ್ಥಳದಿಂದ ಪರಾರಿಯಾಗಿದೆ.
ಇಲ್ಲಿನ ನಕಲಿ ಬಯೋ ಡಿಸೈಲ್ ಮಾರಾಟಗಾರರ ಕುರಿತು
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪ ನಿರ್ದೇಶಕ ಎಸ್ ವೈ ಮಾರಿಹಾಳ ಮತ್ತು ಆಧಿಕಾರಿ ಅಂಬರೀಷ್ ತಾಂಡೂರ್ ನೇತೃತ್ವದಲ್ಲಿ ತಂಡದಲ್ಲಿ ಐಓಸಿ, ಹೆಚ್ ಪಿ ಸಿ, ಬಿಪಿಎಲ್ ಆಧಿಕಾರಿಗಳು ಭಾಗವಹಿಸಿದ್ದರು.
ನಕಲಿ ಬಯೋ ಡೀಸೈಲ್ ಮಾರಾಟ ಮಾಡಲು ಉಯೋಗಿಸುತ್ತಿದ್ದ ಕಚ್ಚವಸ್ತುಗಳು ಸೇರಿದಂತೆ ಇತರ ದಾಖಳೆಗಳನ್ನು ವಶಕ್ಕೆ ಪಡೆದಿರುವ ತಂಡ ಝಳಕಿ ಪೆÇಲೀಸ್ ಠಾಣೆಗೆ ಮಾಹಿತಿ ನೀಡಿದೆ.