
ದಾವಣಗೆರೆ. ಮೇ.೨೫; ನಕಲಿ ದಾಖಲೆಗಳನ್ನು ಸೃಷ್ಠಿಮಾಡಿ ಆಸ್ತಿ ಕ್ರಯದ ಕರಾರು ಪತ್ರ ನೋಂದಣಿ ಮಾಡಿಸಲಾಗಿದೆ ಈ ಬಗ್ಗೆ ಐದು ಮಂದಿ ಮೇಲೆ ದೂರು ನೀಡಲಾಗಿದೆ ಎಂದು ಆಸ್ತಿ ಮಾಲೀಕರಾದ ಕೆ.ಬಾಬುರಾವ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಆವರಗೆರೆ ಗ್ರಾಮದ ಸ.ನಂ 240/ 2ಬಿ ರಲ್ಲಿ ಅಲಿನೇಷನ್ ಆಗಿ ಡೋರ್ ನಂಬರ್ ಆಗಿರುವ 3 ನಿವೇಶನಗಳ ಕ್ರಯ ಕರಾರು ಪತ್ರ ನೊಂದಣಿಯನ್ನು 2005 ಮಾರ್ಚ್ 7 ರಲ್ಲಿ ನನ್ನ ಪತ್ನಿ ಜಯಶ್ರೀ ಅವರ ಹೆಸರಿಗೆ ಕ್ರಯಖಾತೆ ಪಡೆದಿದ್ದೇವೆ.ಆದರೆ ಇತ್ತೀಚೆಗೆ ಹೆಚ್.ಆರ್ ಹರೀಶ್ ಎಂಬುವವರು ನಕಲಿ ದಾಖಲೆಗಳನ್ನು ಸೃಷ್ಠಿಸಿದ್ದಾರೆ ಅಲ್ಲದೇ ಯಾವುದೋ ಮಹಿಳೆಯೊಬ್ಬರಿಂದ ನಕಲಿ ಕ್ರಯದ ಕರಾರು ಪತ್ರ ನೋಂದಣಿ ಮಾಡಿಸಿದ್ದಾರೆ ಎಂದು ಆರೋಪಿಸಿದರು.ಇದಲ್ಲದೇ ಹಿರಿಯ ಉಪನೋಂದಣಾಧಿಕಾರಿಗಳು ಕೂಡ ಕೂಲಂಕುಷವಾಗಿ ದಾಖಲೆಗಳನ್ನು ಪರಿಶೀಲಿಸದೇ ಹರೀಶ್ ಎಂಬಾತನ ಜೊತೆ ಶಾಮೀಲಾಗಿ ಅಕ್ರಮ ಕ್ರಯದ ಕರಾರು ಪತ್ರ ನೊಂದಣಿ ಮಾಡಿದ್ದಾರೆ.ಕಾನೂನು ಬಾಹಿರವಾಗಿ ಅಧಿಕಾರ ದುರುಪಯೋಗ ಮಾಡಿದ್ದಾರೆ ಈ ಬಗ್ಗೆ ಹರೀಶ್ ಸೇರಿದಂತೆ ಐದು ಮಂದಿ ಮೇಲೆ ಗಾಂಧಿನಗರ ಪೋಲೀಸ್ ಠಾಣೆಯಲ್ಲಿ ದೂರು ನೀಡಿದ್ದೇವೆ ನಮಗೆ ಆದ ಅನ್ಯಾಯ ಮತ್ತೊಬ್ಬರಿಗೆ ಆಗಬಾರದು ಎಂದು ನ್ಯಾಯ ಕೇಳಿ ಬಂದಿದ್ದೇವೆ ಎಂದರು.ಈ ಕೂಡಲೇ ತಪ್ಪಿತಸ್ಥರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ನನ್ನ ಕುಟುಂಬಕ್ಕೆ ರಕ್ಷಣೆ ನೀಡಬೇಕು ಎಂದರು.ಸುದ್ದಿಗೋಷ್ಠಿಯಲ್ಲಿ ಬಣಜಾರ ಕೆಂಪರಾಜ್,ಕೆ.ಮುರಳಿ,ಕೆ.ಎಂ ಕೃಷ್ಣಮೂರ್ತಿ ಉಪಸ್ಥಿತರಿದ್ದರು.