ನಕಲಿ ದಾಖಲೆ ಆರೋಪಿ ಪತ್ತೆ ಸತ್ಯಕ್ಕೆ ದೂರ

ಕೋಲಾರ, ಮೇ,೨೫:ಉಚ್ಚ ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಸಿದ್ದ ವ್ಯಕ್ತಿಯ ವಿರುದ್ದ ಬೆಮೆಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ ಎಂಬ ಮಾಹಿತಿಯು ಸತ್ಯಕ್ಕೆ ದೂರವಾದದ್ದು ಎಂದು ಅಂತರಾಷ್ಟ್ರೀಯ ಸೌತ್ ಏಶಿಯಾ ಮಾನವ ಹಕ್ಕುಗಳ ಅಧ್ಯಕ್ಷ ಎಲ್.ಬಾಬು ಸ್ವಷ್ಟ ಪಡೆಸಿದರು,
ನಗರದ ಪತ್ರಕರ್ತರ ಭವನದಲ್ಲಿನ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ ನನ್ನ ಮೇಲೆ ಬೆಮೆಲ್ ಆರ್.ಟಿ.ಓ. ಕಛೇರಿಯ ಪ್ರಥಮ ದರ್ಜೆಯ ನೌಕರನಾದ ಮುರಳಿಧರ್.ವಿ. ಎಂಬುವರು ೫೦ ಸಾವಿರಕ್ಕೆ ಬೇಡಿಕೆ ಇಟ್ಟಿದ್ದನೆಂದು ಸುಳ್ಳು ಪ್ರಕರಣವನ್ನು ನ್ಯಾಯಾಲಯದಲ್ಲಿ ದಾಖಲಿದ್ದರು. ಈ ಸಂಬಂಧವಾಗಿ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಕೀಲರು ನನಗೆ ಪಾರಂಡಹಳ್ಳಿಯ ನಿವಾಸಿ ವಾಣಿ ಎಂಬುವರಿಂದ ಜಾಮೀನು ಕೊಡಿಸಿದ್ದರು ಎಂದರು.
ಅದರೆ ಈ ಜಾಮೀನು ವಾರಸುದಾರರು ಕೆ.ಜಿ.ಎಫ್. ತಾಲೂಕಿನ ಪಾರಂಡಹಳ್ಳಿಯ ನಿವಾಸಿ ವಾಣಿಯಲ್ಲ ಮುಳಬಾಗಿಲು ತಾಲ್ಲೂಕಿನ ಅವಣಿ ಹೋಬಳಿಯ ಹೊನಕೆರೆಹಳ್ಳಿಯ ನಿವಾಸಿ ವಾಣಿ ಎಂಬುವರದ್ದಾಗಿದೆ ಎಂದು ದೂರಲಾಗಿದೆ ಎಂದು ಹೇಳಿದರು;
ಈ ಪ್ರಕರಣದಲ್ಲಿ ನನಗೂ ಜಾಮೀನುದಾರರಿಗೆ ಸಂಬಂಧವಿಲ್ಲ. ನನ್ನ ಪ್ರಕರಣವನ್ನು ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವ ವಕೀಲರಿಗೆ ಸಂಬಂಧಿಸಿದ್ದಾಗಿದೆ ಈ ಸಂಬಂಧವಾಗಿ ನನ್ನ ವಕೀಲರನ್ನು ಪ್ರಶ್ನಿಸ ಬೇಕಾಗಿರುವುದನ್ನು ನನ್ನನ್ನು ಪ್ರಶ್ನಿಸಿದರೆ ಹೇಗೆ, ಜಾಮೀನುದಾರರಿಗು ನನಗೂ ಸಂಬಂಧವಿಲ್ಲ ನಾನು ವಕೀಲರಿಗೆ ಫೀ ಕೊಟ್ಟಿದ್ದು ಅವರು ಜಾಮೀನುದಾರರನ್ನು ಕರೆಸಿ ಕೊಂಡು ನ್ಯಾಯಾಲಯಕ್ಕೆ ಜಾಮೀನುದಾರರ ಆಸ್ತಿಗೆ ( ಸರ್ವೆ ಸಂಖ್ಯೆ ೮೯/೨ ೨೦ ಗಂಟೆ ಜಾಮೀನು ) ಸಂಬಂಧಿಸಿದ ದಾಖಲೆ ನೀಡಿದ್ದಾರೆ ಹೊರತು ಇದಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ಪ್ರತಿಪಾದಿಸಿದರು,
ಈ ಸಂಬಂಧವಾಗಿ ಮುರಳೀಧರ್ ಅವರು ವರದಿಗಾರರೊಂದಿಗೆ ಸೇರಿ ಕೊಂಡು ನನ್ನ ಮಾರ್ಯಾದೆಯನ್ನು ಸಮಾಜದಲ್ಲಿ ಹಾಳು ಮಾಡಿ ಅಪಮಾನಿಸ ಬೇಕೆಂಬ ದುರುದ್ದೇಶದಿಂದ ಯಾವೂದೇ ದಾಖಲಾತಿ ಇಲ್ಲದೆ ಮಾದ್ಯಮದವರಿಗೆ ತಪ್ಪು ಮಾಹಿತಿ ನೀಡಿ ದಾರಿತಪ್ಪಿಸಿ ಪತ್ರಿಕೆಗಳಲ್ಲಿ ಪ್ರಕಟವಾಗುವಂತೆ ಮಾಡಲಾಗಿದೆ. ಈ ಸಂಬಂಧವಾಗಿ ಮುರಳೀಧರ್ ಮತ್ತು ಸಂಬಂಧಪಟ್ಟ ವರದಿಗಾರರ ಮೇಲೆ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸುವುದಾಗಿ ಎಚ್ಚರಿಸಿದರು.