ನಕಲಿ ಡಿಎಪಿ ರಸಗೊಬ್ಬರ ಘಟಕದ ಮೇಲೆ ದಾಳಿ

ಹುಮನಾಬಾದ್:ಜು.4:ಪಟ್ಟಣದ ರಾಷ್ಟ್ರೀಯ ಹೆದ್ದಾರಿ ಬದಿಯ ಕೈಗಾರಿಕಾ ಪ್ರದೇಶದ ಗೋದಾಮಿನಲ್ಲಿ 1.88 ಲಕ್ಷ ಮೌಲ್ಯದ ನಕಲಿ ರಸಗೊಬ್ಬರ ಸೋಮವಾರ ಪತ್ತೆಯಾಗಿದೆ.

ಕಳೆದ ಎರಡು ತಿಂಗಳಿಂದ ನಡೆಯುತ್ತಿರುವ ನಕಲಿ ರಸಗೊಬ್ಬರ ತಯಾರಿಕೆ ಖಚಿತ ಮಾಹಿತಿ ಮೇರೆಗೆ ಗೋದಾಮಿನ ಮೇಲೆ ಪಿಎಸ್ ಐ ಮಂಜನಗೌಡ ಹಾಗೂ ಸಹಾಯಕ ಕೃಷಿ ನಿರ್ದೇಶಕ ಗೌತಮ್ ದಾಳಿ ನಡೆಸಿ 1.88 ಲಕ್ಷ ರೂ.ಅಧಿಕ ಮೌಲ್ಯದ ನಕಲಿ
ಡಿಎಪಿ ವಶಪಡಿಸಿಕೊಂಡಿದ್ದಾರೆ.

ಬಿಳಿ ಬಣ್ಣದ ಹಾಗೂ ಕಪ್ಪು ಬಣ್ಣದ ರಸಗೊಬ್ಬರ ಪತ್ತೆಯಾಗಿದ್ದು, ಬಿಳಿ ಬಣ್ಣದ ರಸಗೊಬ್ಬರ 236 ಬ್ಯಾಗ್ ಅಂದಾಜು ಮೊತ್ತ 87,500 ಹಾಗೂ 126 ಕಪ್ಪುಬಣ್ಣದ ರಸಗೊಬ್ಬರ ಬ್ಯಾಗ್ ಪತ್ತೆಯಾಗಿದೆ.ಇದರ ಅಂದಾಜು
ಮೊತ್ತ 1.88 ಲಕ್ಷಕ್ಕೂ ಅಧಿಕ ಮೌಲ್ಯದ ರಸ ಗೊಬ್ಬರ ಆಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಗೌತಮ್ ಮಾಹಿತಿ ನೀಡಿದ್ದಾರೆ. ಮಹಾರಾಷ್ಟ್ರದ ಸಾಂಗಲಿ ಹಾಗೂ ಕಲಬುರಗಿಯಿಂದ ಕಚ್ಚಾ ವಸ್ತು ತಂದು ಕಲಬೆರೆಕೆ ಮಾಡಲಾಗುತ್ತಿತ್ತು.

ರಾಯಚೂರಿನಿಂದ ಎಂಎಫ್ ಸಿ ಕಂಪನಿಯ ಹೆಸರಿನ ಮುದ್ರಿಸಿದ ಬ್ಯಾಗ್‍ಗಳಲ್ಲಿ ನಕಲಿ ರಸಗೊಬ್ಬರ ಮಾರಾಟ ನಡೆಸಲಾಗುತ್ತಿದೆ. ನಕಲಿ ಬ್ಯಾಗ್ ನಲ್ಲಿ ಯಾವುದೇ ಬ್ಯಾಚ್ ಹಾಗೂ ಲಾಟ್ ನಂಬರ್ ಮುದ್ರಿಸಿರಲಿಲ್ಲ. ದಾಳಿ ನಡೆಸಿದ ವೇಳೆ ಪತ್ತೆಯಾಗಿರುವ ನಕಲಿ ರಸಗೊಬ್ಬರವನ್ನು ಧಾರವಾಡದ ಲ್ಯಾಬಿಗೆ ಪರೀಕ್ಷೆಗೆಗಾಗಿ ರವಾನಿಸಲಾಗಿದೆ. ಈ ಕುರಿತು ಪಟ್ಟಣದ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡುವುದಾಗಿ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಗೌತಮ್ ತಿಳಿಸಿದ್ದಾರೆ.