ನಕಲಿ ಕೊರೋನಾ ವ್ಯಾಕ್ಸಿನೇಷನ್ ಮಾರಾಟ

ಮೈಸೂರು. ಏ.19: ಖಾಲಿ ಬಾಟಲ್‍ಗಳಿಗೆ ಬೇರೆ ಬೇರೆ ದ್ರವಪದಾರ್ಥಗಳನ್ನು ತುಂಬಿ ಕೊರೋನಾ ವ್ಯಾಕ್ಸಿನೇಷನ್ ಎಂದು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಬೇಧಿಸಿದ್ದು, ಮೂವರನ್ನು ಬಂಧಿಸುವಲ್ಲಿ ಪೆÇಲೀಸರು ಯಶಸ್ವೀಯಾಗಿದ್ದಾರೆ.
ಈ ಘಟನೆ ನಜರ್ ಬಾದ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಜರ್ ಬಾದ್ ಪೆÇಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ವಿದ್ಯಾನಗರದಲ್ಲಿ ಕಾಲಿ ಬಾಟಲುಗಳಲ್ಲಿ ದ್ರವ ಪದಾರ್ಥವನ್ನು ತುಂಬಿ ಕೊರೋನಾ ವ್ಯಾಕ್ಸಿನೇಷನ್ ಎಂದು ಸಾರ್ವಜನಿಕರನ್ನು ಯಾಮಾರಿಸಿ ನೀಡುತ್ತಿದ್ದ ನಗರದ ಪ್ರತಿಷ್ಠಿತ ಆಸ್ಪತ್ರೆಯೊಂದರಲ್ಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶುಶ್ರೂಷಕ ಸೇರಿದಂತೆ ಮತ್ತೆ ಮೂರು ಮಂದಿಯನ್ನು ಪೆÇಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೆÇಲೀಸರು ಶುಶ್ರೂಷಕನನ್ನು ಬಂಧಿಸಿದ್ದು, ಆತನಿಗೆ ಸಹಕರಿಸಿದ್ದ ಇತರ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಸಿಬಿ ಪೆÇಲೀಸರು, ಪೆÇಲೀಸ್ ಉನ್ನತಾಧಿಕಾರಿಗಳು ಕೂಡ ದಾಳಿಯಲ್ಲಿ ಪಾಲ್ಗೊಂಡಿದ್ದರು ಎನ್ನಲಾಗಿದೆ. ಈ ಕುರಿತ ಹೆಚ್ಚಿನ ಮಾಹಿತಿಯನ್ನು ಸಂಜೆ 4ರವೇಳೆಗೆ ನಗರ ಪೆÇಲೀಸ್ ಆಯುಕ್ತ ಡಾ.ಚಂದ್ರಗುಪ್ತ ಅವರು ಸುದ್ದಿಗೋಷ್ಠಿಯಲ್ಲಿ ನಡೆಸಿ ವಿವರ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.
ಇದೀಗ ಇವರಿಂದ ಎಷ್ಟು ಜನ ಮೋಸ ಹೋಗಿದ್ದಾರೆನ್ನುವ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.