ನಕಲಿ ಕಾರ್ಮಿಕರ ಕಾರ್ಡ್‌ಗಳ ಹಾವಳಿ: ಕಾರ್ಮಿಕರ ಸಂಘ ಒತ್ತಾಯ

ಸಿರವಾರ,ಏ.ಂ೪- ತಾಲೂಕಿನಲ್ಲಿ ನಕಲಿ ಕೂಲಿ ಕಾರ್ಮಿಕರ ಕಾರ್ಡ್‌ಗಳ ಹಾವಳಿ ಹೆಚ್ಚಾಗಿದ್ದು, ಮತ್ತು ಬೇರೆ ಇಲಾಖೆಗೆ ಸಂಬಂಧ ಪಡುವ ಕೆಲವರು ಅಕ್ರಮವಾಗಿ ಕಾರ್ಡ್‌ಗಳನ್ನು ಮಾಡಿಸಿದ್ದು, ಇದರಿಂದ ನಿಜವಾದ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ಹಾಗೂ ಸಂಬಂಧಪಟ್ಟ ಇಲಾಖೆಯ ಸೌಲಭ್ಯಗಳನ್ನು ಪಡೆಯಲು ಆಗುತ್ತಿಲ್ಲಾ ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸಂಘಟನೆಯು ಕಾರ್ಮಿಕ ಇಲಾಖೆಯ ಶರಣು ಕಡ್ಲೆ ಅವರಿಗೆ ಮನವಿ ಪತ್ರ ನೀಡುವ ಮೂಲಕ ಆಗ್ರಹಿಸಿದರು.
ದಿನನಿತ್ಯದ ಬದುಕಿನಲ್ಲಿ ಕೂಲಿ ಕಾರ್ಮಿಕರು ಶ್ರಮ ಪಡುತ್ತಿದ್ದು, ಜೀವದ ಹಂಗು ತೊರೆದು ಕೆಲಸ ಮಾಡುತ್ತಾರೆ. ಆದರೆ ಬೇರೆ ಬೇರೆ ಇಲಾಖೆಯ ಹಾಗೂ ಬೇರೆ ಬೇರೆ ಕೆಲಸ ಮಾಡುವವರು ಕಟ್ಟಡ ಕೂಲಿ ಕಾರ್ಮಿಕರ ಕಾರ್ಡ್‌ಗಳನ್ನು ಮಾಡಿಸಿಕೊಂಡು ಸರ್ಕಾರಿ ಸೌಲಭ್ಯ ದುರುಪಯೋಗ ಪಡೆದುಕೊಳ್ಳುತ್ತಿದ್ದಾರೆ.
ಆದ್ದರಿಂದ ಶ್ರಮ ವಹಿಸುವ ಕೂಲಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ. ಆದ್ದರಿಂದ ನಕಲಿ ಕೂಲಿ ಕಾರ್ಮಿಕರ ಕಾರ್ಡ್‌ಗಳನ್ನು ರದ್ದು ಪಡಿಸಿ ನ್ಯಾಯಯುತವಾದ ಕೂಲಿ ಕಾರ್ಮಿಕರಿಗೆ ನ್ಯಾಯ ಒದಗಿಸಿ ಕೊಡಬೇಕು. ನಕಲಿ ಕೂಲಿ ಕಾರ್ಮಿಕರ ಮೇಲೆ ಸೂಕ್ತ ಕಾನೂನಿನ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕೂಲಿ ಕಾರ್ಮಿಕರ ಸಂಘ ತಾಲೂಕು ಸಮಿತಿಯು ತಾಲೂಕು ಕಾರ್ಮಿಕಾಧಿಕಾರಿ ಮುಖಾಂತರ ಮಾನ್ಯ ಜಿಲ್ಲಾ ಕಾರ್ಮಿಕಾಧಿಕಾರಿ ರಾಯಚೂರು ಅವರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಗೌರವಧ್ಯಕ್ಷ ಮುದ್ದರಂಗಪ್ಪ ಮರಕಂದಿನ್ನಿ, ತಾಲೂಕು ಅಧ್ಯಕ್ಷ ತಾಯಪ್ಪ ಬುದ್ದಿನ್ನಿ, ಉಪಾಧ್ಯಕ್ಷ ವೀರೇಶ ನಾಯಕ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಹುಲ್ಲೇಶ ಬುದ್ದಿನ್ನಿ ಜಾಲಪೂರು ಕ್ಯಾಂಪ್, ಕಾರ್ಯದರ್ಶಿ ಹನುಮೇಶ ಸಿರವಾರ, ಸಂ.ಕಾ.ಹನುಮಂತ ಉಪ್ಪಿ, ಜಂಟ, ಕಾ. ಮೌಲಾಲಿ ಜಾಡಲದಿನ್ನಿ, ಸಂಚಾಲಕ ಅಂಜಿನಯ್ಯ, ಸದಸ್ಯರುಗಳಾದ ಕುತುಬುದ್ದಿನ್, ಚಂದ್ರು ಇಂದಿರಾನಗರ, ಯೇಸುಮಿತ್ರ, ಪಾಂಡುರಂಗ ಜಾಲಪೂರು, ಹನುಮಂತ ಬುದ್ದಿನ್ನಿ, ನಭಿಸಾಬ್, ಪ್ರಸಾದ್, ನಿಂಗಪ್ಪ ಬುದ್ದಿನ್ನಿ, ಅಂಬಣ್ಣ ಕರೆಗುಡ್ಡ, ಜಾಫರ್, ಅಜಯ್, ರಾಮಕೃಷ್ಣ, ಮಾಳಿಂಗರಾಯ, ಲಕ್ಷ್ಮಣ ಸಿರವಾರ ಉಪಸ್ಥಿತರಿದ್ದರು.