
ನವದೆಹಲಿ ಮಾ.೨೯- ದೇಶದ ೨೦ ರಾಜ್ಯಗಳಲ್ಲಿ ೭೬ ಔಷಧ ಕಂಪನಿಗಳ ಮೇಲೆ ಭಾರತೀಯ ಔಷಧ ನಿಯಂತ್ರಕ ಮಂಡಳಿ ದಾಳಿ ಮಾಡಿ ೧೯ ಕಂಪನಿಗಳ ಪರವಾನಗಿ ರದ್ದುಪಡಿಸಿದೆ.
ಕಳೆದ ಎರಡು ವಾರಗಳ ಅವಧಿಯಲ್ಲಿ ನಕಲಿ ಮತ್ತು ಕಳಪೆ ಔಷಧಗಳನ್ನು ಉತ್ಪಾದಿಸುವ ಕಂಪನಿಗಳನ್ನು ಗುರಿಯಾಗಿರಿಸಿಕೊಂಡು ಡಿಸಿಜಿಐ ದಾಳಿ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ನಿಯಮಾವಳಿಗಳನ್ನು ಗಾಳಿಗೆ ತೂರಿರುವ ೨೬ ಸಂಸ್ಥೆಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದೆ. ಈಗ ಮೊದಲ ಹಂತದ ದಾಳಿ ನಡೆದಿದ್ದು, ದೇಶಾದ್ಯಂತ ಒಟ್ಟು ೨೦೩ ಔಷಧ ಕಂಪನಿಗಳ ಮೇಲೆ ದಾಳಿ ನಡೆಸಲು ಡಿಜಿಸಿಐ ಮುಂದಾಗಿದೆ. ಮೂರು ಸಂಸ್ಥೆಗಳ ಉತ್ಪನ್ನ ಅನುಮತಿಯನ್ನ ರದ್ದುಗೊಳಿಸಿದ್ದು. ಮುಂಬರುವ ದಿನಗಳಲ್ಲಿ ದಾಳಿ ಇನ್ನಷ್ಟು ದಾಳಿ ತೀವ್ರಗೊಳಿಸಲಾಗುವುದು ಎಂದು ಮೂಲಗಳು ಹೇಳಿವೆ.
ಕರ್ನಾಟಕ, ಆಂಧ್ರಪ್ರದೇಶ, ಬಿಹಾರ, ದೆಹಲಿ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಧ್ಯಪ್ರದೇಶ, ಮಹಾರಾಷ್ಟ್ರ, ಪುದುಚೇರಿ, ಪಂಜಾಬ್, ರಾಜಸ್ಥಾನ, ಸಿಕ್ಕಿಂ, ತಮಿಳುನಾಡು, ತೆಲಂಗಾಣ, ಉತ್ತರ ಪ್ರದೇಶ, ಉತ್ತರಾಖಂಡ, ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ದಾಳಿ ನಡೆಸಲಾಗಿದೆ.
ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಗುಜರಾತ್‌ಗಳಲ್ಲಿ ನಕಲಿ ಮತ್ತು ಕಳಪೆ ಔಷಧಗಳನ್ನು ಹೆಚ್ಚಿನ ಸಂಸ್ಥೆಗಳು ಉತ್ಪಾದಿಸುತ್ತಿವೆ ಎಂದು ಮೂಲಗಳು ತಿಳಿಸಿವೆ. ಹಿಮಾಚಲ ಪ್ರದೇಶದ ೭೦, ಉತ್ತರಾಖಂಡದ ೪೫, ಮಧ್ಯಪ್ರದೇಶದ ೨೩ ಮತ್ತು ಗುಜರಾತ್‌ನ ೧೬ ಫಾರ್ಮಾ ಕಂಪನಿಗಳ ಮೇಲೆ ಶೋಧ ಕಾರ್ಯ ನಡೆಸಿ ಮಾಹಿತಿ ಸಂಗ್ರಹಿಸಲಾಗಿದೆ.