ನಕಲಿ ಎನ್ಕೌಂಟರ್ ಬರ್ಬರ ಹತ್ಯೆ ಪ್ರಕರಣ: ನ್ಯಾಯಾಲಯಕ್ಕೆ ರೌಡಿಶೀಟರ್ ಮಹಾದೇವ ಸಾಹುಕಾರ ಭೈರಗೊಂಡ, ಸಹಚರರು ಹಾಜರು

ವಿಜಯಪುರ:ಡಿ.30: ಭೀಮಾತೀರದಲ್ಲಿ ನಕಲಿ ಎನ್ಕೌಂಟರ್, ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯಕ್ಕೆ ರೌಡಿಶೀಟರ್ ಮಹಾದೇವ ಸಾಹುಕಾರ ಭೈರಗೊಂಡ ಹಾಗೂ ಆತನ ಸಹಚರರು ಶುಕ್ರವಾರ ಹಾಜರಾದರು.
ಜಿಲ್ಲೆಯ ಭೀಮಾತೀರದ ಚಡಚಣ ತಾಲೂಕಿನ ಕೊಂಕಣಗಾಂವನಲ್ಲಿ ನಡೆದಿದ್ದ ಹಂತಕ ಧರ್ಮರಾಜ್ ಚಡಚಣ ನಕಲಿ ಎನ್ಕೌಂಟರ್ ಹಾಗೂ ಸಹೋದರ ಗಂಗಾಧರ ಚಡಚಡ ಬರ್ಬರ ಹತ್ಯೆ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯಕ್ಕೆ ಮಹಾದೇವ ಸಾಹುಕಾರ ಭೈರಗೊಂಡ ಹಾಗೂ ಆರೋಪಿಗಳು ಹಾಜರಾಗಿದ್ದು, ಈ ಪ್ರಕರಣದಲ್ಲಿ ಒಟ್ಟು 18 ಆರೋಪಿಗಳಿದ್ದಾರೆ. ಓರ್ವ ಆರೋಪಿ ಮಹಾದೇವ ಭೈರಗೊಂಡನ ಮೇಲೆ ನಡೆದಿದ್ದ ದಾಳಿಯಲ್ಲಿ ಸಾವಿಗೀಡಾಗಿದ್ದ. ಸದ್ಯ 15 ಆರೋಪಿಗಳು ಕೋರ್ಟ್‍ಗೆ ಹಾಜರಾಗಿದ್ದು, ಇಬ್ಬರು ಆರೋಪಿಗಳು ಕೋರ್ಟ್ ಗೆ ಗೈರಾಗಿದ್ದಾರೆ. ಅಂದಿನ ಚಡಚಣ ಸಿಪಿಐ ಆಗಿದ್ದ ಮಲ್ಲಿಕಾರ್ಜುನ ಅಸೋಡೆ ಸೇರಿದಂತೆ ಆರೋಪಿಗಳು ಹಾಜರಾದರು.
ಇನ್ನು ನಕಲಿ ಎನ್ಕೌಂಟರ್ ನಡೆಸಿದ್ದ ಅಂದಿನ ಚಡಚಣ ಪಿಎಸ್’ಐ ಗೋಪಾಲ ಹಳ್ಳೂರ ವಿಚಾರಣೆಗೆ ಗೈರಾಗಿದ್ದಾನೆ.