ನಂ.ಗೂಡಿನಲ್ಲಿ ಇಂದಿನಿಂದ ಹೊಸ ಬಸ್ಟ್ಯಾಂಡ್ ಆರಂಭ

ನಂಜನಗೂಡು:ಜ:11: ನಗರದ ಪಟ್ಟಣದಲ್ಲಿ ಹಳೆ ಬಸ್ಟ್ಯಾಂಡ್ ನಿಲ್ದಾಣ ಮುಖ್ಯ ಕಟ್ಟಡವು ಶೀತಲ ವಾಗಿರುವುದರಿಂದ ಹಳೆ ಬಸ್ ನಿಲ್ದಾಣ ಕಾರ್ಯಾಚರಣೆ ಯಾಗುವ ಎಲ್ಲಾ ವಾಹನಗಳು ಇಂದಿನಿಂದ ಹಳೆಯ ಬಸ್ ನಿಲ್ದಾಣದಿಂದ ಕಾರ್ಯಾಚರಣೆ ನಿಲ್ಲಿಸಲಾಗಿದೆ
ಚಾಮರಾಜನಗರದ ಬೈಪಾಸ್ ರಸ್ತೆಯಲ್ಲಿ ಕಟ್ಟಿರುವ ನೂತನ ಬಸ್ ಸ್ಟ್ಯಾಂಡ್ ಅಲ್ಲಿಗೆ ಸ್ಥಳಾಂತರ ಮಾಡಲಾಗಿದೆ ಇಂದಿನಿಂದ ಹೊಸ ಬಸ್ಟ್ಯಾಂಡ್ನಲ್ಲಿ ಕಾರ್ಯಾಚರಣೆ ಪ್ರಾರಂಭವಾಗಿದೆ
ಇದರಿಂದ ಹಳೆಯ ಬಸ್ ಸ್ಟಾಂಡ್ ನಲ್ಲಿ ನಂಬಿಕೊಂಡಿರುವ ಅಂಗಡಿಗಳ ಮಾಲೀಕರ ನಿದ್ದೆಗೆಡಿಸಿದೆ ಹಳೆ ಬಸ್ ಸ್ಟಾಂಡಿನಲ್ಲಿ ಗ್ರಾಮಾಂತರ ಬಸ್ಸುಗಳು ಓಡಾಡುವುದರಿಂದ ಮೈಸೂರಿಂದ ಚಾಮರಾಜನಗರ ಮತ್ತು ನರಸೀಪುರ-ಕೊಳ್ಳೆಗಾಲ ಮಾರ್ಗ ಕಲಿಸುವ ಬಸ್ಸುಗಳು ಎಲ್ಲಾ ಒಂದೇ ಕಡೆ ಬರುತ್ತಿದ್ದರಿಂದ ಅಂಗಡಿಗಳಿಗೆ ವ್ಯಾಪಾರ ಆಗುತ್ತಿತ್ತು ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದ ಅಂಗಡಿ ಮಾಲೀಕರು ತಬ್ಬಿಬ್ಬಾಗಿದ್ದಾರೆ ಮುಂದೇನು ಎಂಬುದೇ ಅವರ ಪ್ರಶ್ನೆ ಇದನ್ನೇ ನಂಬಿಕೊಂಡು ಸಾಲಸೋಲ ಮಾಡಿದ್ದಾರೆ ಈ ಬಸ್ಟಾಂಡ್ ಮುಚ್ಚುವುದರಿಂದ ನಮಗೆ ವ್ಯಾಪಾರಕ್ಕೂ ತೊಂದರೆಯಾಗುತ್ತದೆ ಎಂದರು
ಸಾರ್ವಜನಿಕರು ಮತ್ತು ಅಂಗಡಿಯವರು ಹೇಳುವುದೇನೆಂದರೆ ಮೈಸೂರಿಂದ ಬರುವ ಬಸ್ಸುಗಳು ಬೈಪಾಸ್ ರಸ್ತೆಯಲ್ಲಿ ತಿರುಗದೆ ಹುಲ್ಲಳ್ಳಿ ಸರ್ಕಲ್ ಬಳಸಿಕೊಂಡು ಹಳೆಯ ಬಸ್ಟ್ಯಾಂಡ್ ಹೊರಗಡೆ ನಿಲ್ಲಿಸಿದಲ್ಲಿ ಸ್ವಲ್ಪ ಮಟ್ಟದಲ್ಲಿ ಅನುಕೂಲವಾಗುತ್ತದೆ ಎನ್ನುತ್ತಾರೆ ಇದರ ಜೊತೆಗೆ ಹೊಸ ಬಸ್ ಸ್ಟ್ಯಾಂಡ್ ನಿಂದ ಹಳೆಯ ಬಸ್ಟ್ಯಾಂಡ್ ಮಾರ್ಗವಾಗಿ ಹುಲ್ಲಳ್ಳಿ ಸರ್ಕಲ್ ಬಳಸಿಕೊಂಡು ಮೈಸೂರಿಗೆ ಹೋದರೆ ಎಂದಿನಂತೆ ನಾವು ಜೀವನ ನಡೆಸಬಹುದು ಎಂದರು ಇಲ್ಲದಿದ್ದರೆ ಹೆಚ್ಚಿನ ಹಣ ಖರ್ಚಾಗುತ್ತದೆ ಕಾರಣ ಬಸ್ ಸ್ಟ್ಯಾಂಡಿನಿಂದ ಹುಲ್ಲಳ್ಳಿ ಸರ್ಕಲ್ಲಿಗೆ 40 ಪಡೆಯುತ್ತಾರೆ ಹುಲ್ಲಹಳ್ಳಿ ಸರ್ಕಲ್ ಇಂದ ಹೌಸಿಂಗ್ ಬೋರ್ಡ್ ಮಾದೇಶ್ವರ ಲೇಔಟ್ ಅನೇಕಕಡೆ ಹೋಗಬೇಕಾದರೆ 80 ಖರ್ಚಾಗುತ್ತದೆ.
ಆದ್ದರಿಂದ ಇದರಿಂದ ಗ್ರಾಹಕರಿಗೆ ಬಹಳ ತೊಂದರೆ ಆಗುತ್ತದೆ ರಾತ್ರಿಯಾದರೆ ಹೊಸ ಬಸ್ಟಾಂಡ್ ಮಾರ್ಗವಾಗಿ ಜನಸಂಖ್ಯೆ ಕಡಿಮೆ ಇರುವುದರಿಂದ ಮೈಸೂರಿನಿಂದ ನಂಜನಗೂಡಿಗೆ ಬಂದು ನಡೆದುಕೊಂಡು ಮನೆಗಳಿಗೆ ಹೋಗಬೇಕಾದರೆ ರಾತ್ರಿ ಸಮಯದಲ್ಲಿ ತೊಂದರೆಯಾಗುತ್ತದೆ.
ಅದರಿಂದ ಹಳೆ ಬಸ್ಟ್ಯಾಂಡ್ ಒಳಗಡೆ ಹೋಗದೆ ಹೊರಗಡೆಯಿಂದಲೇ ಓಡಾಡಲು ಬಸ್ಸಿನ ವ್ಯವಸ್ಥೆ ಮೊದಲಿನಂತೆ ಇರಬೇಕೆಂದು ಒತ್ತಾಯ ಮಾಡುತ್ತಾರೆ.
ಈ ರಸ್ತೆಗಳಲ್ಲಿ ಜನಸಂಖ್ಯೆ ಕಡಿಮೆ ಇರುವುದರಿಂದ ಅಂಗಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲದೆ ಇರುವುದರಿಂದ ಕಳ್ಳರ ಕಾಟ ಹೆಚ್ಚಾಗಬಹುದು ಇದರಿಂದ ಮಹಿಳೆಯರಿಗೆ ತೊಂದರೆಯಾಗುವುದು ಮುನ್ನೆಚ್ಚರಿಕೆ ಕ್ರಮವಾಗಿ ನಗರಸಭೆಯವರು ಲೈಟಿನ ವ್ಯವಸ್ಥೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಬಸ್ಸುಗಳು ಓಡಾಡುತ್ತವೆ?ಎಂಬುದೇ ಯಕ್ಷ ಪ್ರಶ್ನೆಯಾಗಿದೆ.