ನಂಬಿದವರನ್ನು ಕೈಬಿಟ್ಟಿಲ್ಲ ಶರಣಬಸವರು

ಕಲಬುರಗಿ:ಆ.2:ಯಾರೂ ಭಕ್ತಿ, ಶ್ರದ್ಧೆ, ನಂಬಿಕೆಯಿಂದ ಶರಣಬಸವರನ್ನು ಆರಾಧಿಸುತ್ತಾರೋ ಅವರನ್ನೂ ಎಂದಿಗೂ ಶರಣಬಸವೇಶ್ವರರು ಕೈಬಿಟ್ಟಿಲ್ಲ, ಬಿಡುವುದಿಲ್ಲ ಎಂದು ಕೊಪ್ಪಳದ ಖ್ಯಾತ ಹಿರಿಯ ಉದ್ಯಮಿಗಳಾದ ಶಾಂತಣ್ಣ ಮುದಗಲ್ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಹಮ್ಮಿಕೊಂಡಿರುವ 40 ದಿನಗಳ ಶರಣಬಸವೇಶ್ವರ ಲೀಲೆಗಳು ಎಂಬ ಉಪನ್ಯಾಸ ಮಾಲಿಕೆಯಲ್ಲಿ ಸೋಮವಾರ ಉಪನ್ಯಾಸ ನೀಡಿದರು.
ಶರಣಬಸವರು ತಮ್ಮಲ್ಲಿ ಯಾರೂ ಕಷ್ಟ ಅಂತ ಬಂದವರಿಗೆ ಕಷ್ಟಗಳನ್ನು ದೂರ ಮಾಡಿದ್ದಾರೆ. ಸ್ವತಂ ನಾನೇ ಅನೇಕ ಶರಣರ ಪವಾಡಗಳನ್ನು ಕಂಡಿದ್ದೇನೆ. ಅದೇ ರೀತಿಯಾಗಿ ಪೂಜ್ಯ ದೊಡ್ಡಪ್ಪ ಅಪ್ಪ ಮತ್ತು ಪೂಜ್ಯ ಡಾ.ಶರಣಬಸವಪ್ಪ ಅಪ್ಪ ಅವರಿಂದಲೂ ಪವಾಡಗಳು ನಡೆದಿವೆ. ಅವರ ಮಾತಿನಲ್ಲಿ ಬಂದರೆ ಮುಗಿಯಿತು ಅವೆಲ್ಲ ನಿಜವಾಗಿವೆ. ತಮ್ಮ ಮಗ ಅಮೇರಿಕಾಕ್ಕೆ ಹೋಗುವ ಸಂದರ್ಭದಲ್ಲಿ ಪೂಜ್ಯ ಡಾ.ಅಪ್ಪಾ ಅವರ ಆಶೀರ್ವಾದ ತೆಗೆದುಕೊಂಡು ಹೋಗುವಾಗ, ಅಪ್ಪ ಅವರು ಅವರಿಗೆ ಶರಣಬಸವರ ಭಾವಚಿತ್ರ ಹತ್ತಿರ ಇಟ್ಟುಕೊಂಡಿರುವ ಎಲ್ಲವೂ ಒಳ್ಳೆಯದಾಗುತ್ತದೆ ಎಂದರಂತೆ , ಅವರು ಹೋದ ದಿನವೆ ಅಮೇರಿಕಾದ ಮೇಲೆ ಉಗ್ರರು ದಾಳಿ ಮಾಡಿದಾಗ, ಮಗನ ಹೇಗಿದ್ದಾನೆ ಎಂದು ಚಿಂತಿಸುತ್ತಿದ್ದಾಗ ಇಲ್ಲ ನಾನು ಅರಾಮವಾಗಿದ್ದೇನೆ ಎಂದು ಮಗನಿಂದ ಕರೆ ಬಂತು. ಹೀಗೆ ಅನೇಕ ಪವಾಡಗಳು ನಡೆದಿವೆ ಎಂದರು.
ಇನ್ನೋರ್ವ ಉಪನ್ಯಾಸ ನೀಡಿದ ಬೀದರನ ಖ್ಯಾತ ವೈದ್ಯರಾದ ಡಾ.ಉಮಾದೇವಿ ಬಿ.ದೇಶಮುಖ ಅವರು ಮಾತನಾಡಿ, ಜಗತಕಲ್ಯಾಣಕ್ಕಾಗಿ ಶರಣಬಸವರು ಜನಿಸಿಬಂದಿದ್ದಾರೆ. ಅದರಂತೆ ತಮ್ಮ ಜೀವನದಲ್ಲಿ ಶರಣರ ಪವಾಡಗಳು ಅನೇಕ ಆಗಿವೆ. ತಾವು ಬೇಡಿದ್ದನ್ನು ಶರಣಬಸವರು ನೀಡಿದ್ದಾರೆ. ಅದರಂತೆ ಪೂಜ್ಯ ಅಪ್ಪ ಅವರಲ್ಲಿ ನಾನು ಶರಣಬಸವೇಶ್ವರರನ್ನು ಕಾಣುತ್ತೇನೆ. ಏಕೆಂದರೆ ಅವರ ಮಾತುಗಳು ತಮ್ಮ ಜೀವನದಲ್ಲಿ ಸತ್ಯವಾಗಿವೆ. ಪೂಜ್ಯ ಅಪ್ಪ ಮತ್ತು ಪೂಜ್ಯ ಅವ್ವ ಅವರು ಶಿವಪಾರ್ವತಿಯಂತೆ, ಪಾಂಡುರಂಗ ರುಕ್ಮೀಣಿಯಂತೆ ಕಂಗೋಳಿಸುತ್ತಾರೆ ಎಂದು ಹೇಳಿದರು.