ನಂಬಿಕೆ ಬೇಕು ಆದರೆ ಮೂಢ ನಂಬಿಕೆ ಇರಬಾರದು

ವಿಜಯಪುರ, ನ.14-ಕಲಿಕೆ ನಿರಂತರವಾದುದು. ಆ ಕಲಿಕೆಯು ಸತ್ಯದ ಅವಿಷ್ಕಾರವಾಗಬೇಕು. ಸಾಮಾನ್ಯ ವಿಷಯವನ್ನೆ ಪ್ರಾತ್ಯಕ್ಷಿಕೆ ಯುಕ್ತ ಚಟುವಟಿಕೆ ಮೂಲಕ ಮಕ್ಕಳು ಭಾಗವಹಿಸುವದರಿಂದ ಕಲಿಕೆ ಗಟ್ಟಿಗೊಳ್ಳುವುದಲ್ಲದೆ ಯಾವತ್ತು ಸ್ಮರಣೆಯಲ್ಲಿ ಉಳಿಯುತ್ತದೆ ಎಂದು ‘ನಿತ್ಯಜೀವನದಲ್ಲಿ ವೈಜ್ಞಾನಿಕತೆ’ ಎಂಬ ವಿಷಯದ ಮೇಲೆ ರಾಜ್ಯ ಪ್ರಶಸ್ತಿ ಪುರಸ್ಕøತ ಶಿಕ್ಷಕ ಎಸ್.ವಿ.ಬುರ್ಲಿಯವರು ತಿಳಿಸಿದರು.
ಅವರೊಂದಿಗೆ ವಿಜ್ಞಾನ ಶಿಕ್ಷಣ ಆರ್.ಆರ್.ಮಿಸಾಳೆಯವರು ಸಹಕರಿಸಿದರು. ನಿರಂತರ ಪ್ರಯತ್ನದಿಂದ ಎಂಥ ಕಾರ್ಯಗಳನ್ನು ಯಶಸ್ವಿಗೊಳಿಸಲು ಸಾಧ್ಯ ಎಂದು ತಮ್ಮ ಬಗ್ಗೆ ಹೇಳಿದರು.
ಪ್ರಾ. ಎ.ಎಸ್.ಹಿಪ್ಪರಗಿ ಮತ್ತು ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಂಸ್ಥೆ ಸಹಯೋಗದಲ್ಲಿ ದಿ. ಬಿ.ಎಸ್.ಪಾಟೀಲ (ಸಾಸನೂರ) ಮತ್ತು ಸುರೇಶ ದೇಸಾಯಿಯವರ ದತ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಸಂಸ್ಥೆಯ ಗೌರವ ಅಧ್ಯಕ್ಷರಾದ ಎಚ್.ಆರ್.ಮಾಚಪ್ಪನವರ ಮತ್ತು ಡಾ. ಎಚ್.ವಿ.ಕರಿಗೌಡರ, ಶ್ರೀಮತಿ ವಿದ್ಯಾವತಿ ಅಂಕಲಗಿ, ಎಸ್.ವಿ.ಬುರ್ಲಿಯವರನ್ನು ಡಾ. ವಿ.ಡಿ.ಐಹೊಳ್ಳಿಯವರು ಪರಿಚಯಿಸಿದರು. ಪದಾಧಿಕಾರಿಗಳು ಅವರಿಗೆ ಗೌರವ ಸನ್ಮಾನ ಮಾಡಿದರು. ಪ್ರೊ. ಎಸ್.ಬಿ.ದೊಡಮನಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್.ಎಂ.ಹದಿಮೂರು ಕಾರ್ಯಕ್ರಮ ನಿರೂಪಿಸಿದರು. ಜಿ.ಎಂ.ಬಿರಾದಾರ ವಂದಿಸಿದರು. ಮುಖ್ಯಾಧ್ಯಾಪಕಿ ಶ್ರೀಮತಿ ಆರ್.ಎಸ್.ಬಿರಾದಾರ, ವಿ.ಸಿ.ನಾಗಠಾಣ, ಎಸ್.ಜಿ.ನಾಡಗೌಡ, ಕೆ.ಎಫ್.ಅಂಕಲಗಿ, ಕಲಗೊಂಡ ಶ್ರೀಮತಿ ಶಕುಂತಲಾ ದೊಡಮನಿ, ಬಿ.ಕೆ.ಗೋಟ್ಯಾಳ ಮತ್ತು ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.