ನಂದ ವಾಡಗಿ ಹರಿ ನೀರಾವರಿ ಯೋಜನೆಗೆ ಆದೇಶ ನೀಡಲು ಸರಕಾರಕ್ಕೆ ಗಡುವು

ಮಸ್ಕಿ,ಜ.೧೩- ನಂದ ವಾಡಿಗಿ ಏತ ನೀರಾವರಿ ಬದಲಿಗೆ ಹರಿ ನೀರಾವರಿ ಯೋಜನೆ ಅನುಷ್ಟಾನ ಗೊಳಿಸಲು ಕ್ರಮ ಕೈ ಗೊಳ್ಳುವೆ ಎಂದು ಜಲ ಸಂಪನ್ಮೂಲ ಇಲಾಖೆ ಸಚಿವ ರಮೇಶ ಜಾರಕಿ ಹೊಳಿ ಭರವಸೆ ನೀಡಿದ್ದರು ಇನ್ನು ಆದೇಶ ಹೊರಡಿಸಿಲ್ಲ ಎಂದು ರೈತ ಮುಖಂಡ ಬಾಬು ಗೌ ಡ ಹಿಲಾಲ್ ಪೂರ ಆರೋಪಿಸಿದರು. ಇಲ್ಲಿಯ ಭ್ರಮರಾಂಭ ಕಲ್ಯಾಣ ಮಂಟಪ ಬಳಿ ಕರೆದಿದ್ದ ಸುದ್ದಿಗೋಷ್ಟಿಯಲ್ಲಿ ಮಂಗಳವಾರ ಮಾತನಾಡಿದರು ನಂದ ವಾಡಗಿ ಹನಿ ಬದಲಿಗೆ ಹರಿ ನೀರಾವರಿ ಯೋಜನೆ ಅನುಷ್ಟಾನ ಗೊಳಿಸುವ ಆದೇಶ ನೀಡುವಂತೆ ಸರಕಾರಕ್ಕೆ ಗಡುವು ನೀಡಲಾಗಿದೆ ಎಂದರು. ನಂದ ವಾಡಗಿ ಏತ ನೀರಾವರಿ ಯೋಜನೆ ಮೂಲಕ ೨.೨೫ ಟಿಎಂಸಿ ನೀರು ಬಳಕೆ ಮಾಡಿ ಕೊಳ್ಳಲು ಅವಕಾಶ ವಿದೆ ನಮಗೆ ಲಭ್ಯ ವಿರುವ ನೀರು ಬಳಕೆ ಮಾಡಿ ಕೊಳ್ಳುವ ಜತೆಯಲ್ಲಿ ೫ಎ ನೀರಾವರಿ ಕಾಲುವೆ ಹೋರಾಟ ಮುಂದು ವರೆಸ ಬೇಕು ಈ ಬಗ್ಗೆ ರೈತರು ಚಿಂತನೆ ಮಾಡಬೇಕು ಎಂದರು. ಕೆಲ ರೈತರು ನಂದ ವಾಡಗಿ ಏತ ನೀರಾವರಿಗೆ ೫ಎ ಕಾಲುವೆ ತಳುಕು ಹಾಕುವುದು ಬೇಡ ಎನ್ನುತ್ತಿದ್ದಾರೆ ನೀವು ನಂದ ವಾಡಗಿ ನೀರಾವರಿ ಬಗ್ಗೆ ಹೇಳುತ್ತಿದ್ದಿರಿ ಎಂಬ ಪತ್ರಕರ್ತನ ಪ್ರಶ್ನೆಗೆ ಉತ್ತರಿಸಿದ ಬಾಬು ಗೌಡ ನಾವು ೫ಎ ಕಾಲುವೆಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ ನಂದ ವಾಡಗಿ ಏತ ನೀರಾವರಿಗೆ ೨.೨೫ ನೀರು ಬಳಕೆಗೆ ಅವಕಾಶ ವಿದೆ ನಂದ ವಾಡಗಿ ಹನಿ ನೀರಾವರಿ ಬದಲಿಗೆ ಹರಿ ನೀರಾವರಿ ಯೋಜನೆ ಮಾಡಲು ಸರಕಾರಕ್ಕೆ ಒತ್ತಾಯಿಸುವ ಜತೆ ೫ಎ ಕಾಲುವೆ ಬಗ್ಗೆ ಹೋರಾಟಕ್ಕೆ ಬೆಂಬಲ ವಿದೆ ಎಂದರು. ೫ಎ ನೀರಾವರಿ ಕಾಲುವೆ ಅನುಷ್ಟಾನದ ಸಾಧಕ- ಭಾದಕ ಗಳ ಬಗ್ಗೆ ತಾಂತ್ರಿಕ ಸಮಿತಿ ರಚಿಸಲಾಗಿದೆ ತಾಂತ್ರಿಕ ವರದಿ ಬಂದ ನಂತರ ೫ಎ ಕಾಲುವೆ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಮೊದಲಿಗೆ ನಂದ ವಾಡಗಿ ನೀರಾವರಿ ಯೋಜನೆ ಮೂಲಕ ನೀರು ಪಡೆಯಲು ರೈತರು ಚಿಂತನೆ ಮಾಡಬೇಕು ಎಂದು ಮನವಿ ಮಾಡಿದರು. ತಾಪಂ.ಸದಸ್ಯ ಸಂತೋಷ ರಾಜಗುರು, ಚಂದ್ರಶೇಖರ ವಂದ್ಲಿ, ಶರಣೇ ಗೌಡ ಬಸ್ಸಾಪೂರ, ರಮೇಶ ಶಾಸ್ತ್ರಿ ಇದ್ದರು. (೧೩,ಜ.ಎಂಎಸ್ಕೆ ಪೋಟೊ೦೨)