ನಂದಿ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಲು ಆಗ್ರಹ

ಶಹಾಬಾದ:ನ.9:ತಾಲೂಕಿನ ಮುತ್ತಗಾ ಗ್ರಾಮದ ಕಂಠಿ ಬಸವೇಶ್ವರ ದೇವಸ್ಥಾನ ನಂದಿ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿ ಮಂಗಳವಾರ ವೀರಶೈವ ಲಿಂಗಾಯತ ಮುಖಂಡರು ಹಾಗೂ ಗ್ರಾಮಸ್ಥರು ಗ್ರೇಡ್-2 ತಹಸೀಲ್ದಾರ ಗುರುರಾಜ ಸಂಗಾವಿ ಅವರಿಗೆ ಮನವಿ ಸಲ್ಲಿಸಿದರು.
ಮುತ್ತಗಾ ಗ್ರಾಮದ ಕಂಠಿ ಬಸವೇಶ್ವರ ದೇವಸ್ಥಾನದ ನಂದಿ ಮೂರ್ತಿ ಸೋಮವಾರ ಸಂಜೆಯವರೆಗೆ ಏನು ಆಗಿರಲಿಲ್ಲ.ಆದರೆ ರಾತ್ರಿ ಯಾರೋ ಕಿಡಿಗೇಡಿಗಳು ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ.ಅಲ್ಲದೇ ಜನರ ಧಾರ್ಮಿಕ ಭಾವನೆಗೆ ದಕ್ಕೆ ತರುವಂತ ಕೆಲಸ ಮಾಡಿದ್ದಾರೆ.ಆದ್ದರಿಂದ ಕೂಡಲೇ ಮೂರ್ತಿಯನ್ನು ಭಗ್ನಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕು.ಇನ್ನೊಮ್ಮೆ ಈ ರೀತಿಯ ಘಟನೆಗಳು ನಡೆದಂತೆ ಕ್ರಮಕೈಗೊಳ್ಳಬೇಕು.ಬೀಟ್ ಪೊಲೀಸರು ಸರಿಯಾಗಿ ಕಾರ್ಯನಿರ್ವಹಿಸಬೇಕೆಂದು ಹೇಳಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ದಯಾನಂದ ಪಾಟೀಲ, ಗ್ರಾಮಸ್ಥರಾದ ಬಸಯ್ಯಸ್ವಾಮಿ ಹಿರೇಮಠ, ಬಸವರಾಜ ಮಾಲಿ ಪಾಟೀಲ,ಚಂದ್ರಕಾಂತ ಕೋರಿ, ಶರಣು ಪಾಟೀಲ ಪಾಳಾ, ಬಸವರಾಜ ಕೋರಿ, ಗುರಲಿಂಗಯ್ಯಸ್ವಾಮಿ, ಶರಬಣ್ಣ ಮಾವೂರ,ಮಂಜುನಾಥ ವಾರದ, ಶಾಂತು ವಾರದ,ಅಶೋಕ ಶಿರಸಗಿ, ಮಲ್ಲಿನಾಥ ಹೊನಗುಂಟಿ,ಬಸವರಾಜ ಮಾವೂರ,ಕೆಂಚಪ್ಪ ಪೂಜಾರಿ,ರುದ್ರು ಪಂಚಾಳ,ಖಾಜಾ ಪಟೇಲ್, ವೀರಶೈವ ಸಮಾಜದ ನಗರಾಧ್ಯಕ್ಷ ಮಲ್ಲು ಗೊಳೇದ್,ಶಿವಕುಮಾರ ನಾಯ್ಕಲ್, ಶಿವು ಕಾಂತಾ,ಮಹೇಶ ಬಾಳಿ, ಮಹಾರುದ್ರ ಇಂಗಿನಶೆಟ್ಟಿ ಇತರರು ಇದ್ದರು.