ನಂದಿ ನಾಗೂರುದಲ್ಲಿ ನಾಗಪಂಚಮಿ ಸಂಭ್ರಮ

ಬೀದರ್:ಆ.21: ಇಂದು ಔರಾದ ತಾಲೂಕಿನ ನಂದಿ ನಾಗೂರ ಗ್ರಾಮದಲ್ಲಿ ನಾಡಿಗೆ ದೊಡ್ಡ ಹಬ್ಬ ಪಂಚಮಿಯನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಬೆಳಿಗ್ಗೆ ಹೆಂಗೆಳೆಯರಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ನಾಗದೇವತೆಗೆ ಹಾಲೆರೆದು ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.
ಗಂಡನ ಮನೆಯಿಂದ ತವರು ಮನೆಗೆ ಬಂದು ಪಂಚಮಿ ಹಬ್ಬ ಆಚರಿಸುವ ಪದ್ಧತಿ ಅನಾದಿ ಕಾಲದಿಂದಲೂ ನಡೆದುಕೊಂಡು ಬರುತ್ತಿದ್ದು, ತವರು ಮನೆ ಸದಾ ಬೆಳಗಲಿ ಎಂದು ಹಾರೈಸುವ ಮೂಲಕ ಸುಮಂಗಲೆಯರು ಪಂಚಮಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು. ಇದೇ ವೇಳೆ ಜಾನಪದ ಸೊಬಗಿನ ಬುಲಾಯಿ ಹಾಡು ಹಾಡಲಾಯಿತು. ಈ ಸಂದರ್ಭದಲ್ಲಿ ನಿಂಗಮ್ಮ ಕೋಡಗೆ, ಭಾರತಿ ಬಿರಾದಾರ, ರೇಣುಕಾ ಶಿಕ್ಷಕಿ, ಚನ್ನಮ್ಮಾ ಶೆಂಬಾಳೆ, ಬಸಮ್ಮ, ಶಾರದಾ, ಅಕ್ಕಮ್ಮ ಕೊಡಗೆ ಮತ್ತಿತರರು ಉಪಸ್ಥಿತರಿದ್ದರು.