ನಂದಿ ಗ್ರಾಮದಲ್ಲಿ 1957 ಮತಗಳಿಂದ ದೀದಿಗೆ ಸೋಲು, ಗೆಲುವಿನ ನಗೆ‌ ಬೀರಿದ ಅಧಿಕಾರಿ

ಕೊಲ್ಕತ್ತ, ,ಮೇ 2- ಇಡೀ ದೇಶದ ಗಮನ ಸೆಳೆದಿದ್ದ ನಂದಿಗ್ರಾಮ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ‌ ಮಮತಾ ಬ್ಯಾನರ್ಜಿ‌1957 ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ.
ಪಕ್ಷವನ್ನು ಅಧಿಕಾರಕ್ಜೆ ತರುವಲ್ಲಿ ಸಫಲವಾಗಿರುವ ಮಮತಾ ಜಿದ್ದಾಜಿದ್ದಿನ ಅಖಾಡವಾಗಿದ್ದ ನಂದಿಗ್ರಾಮದಲ್ಲಿ ಸೋಲು ಕಂಡಿದ್ದಾರೆ.
ಜನರ ತೀರ್ಪಿಗೆ ತಲೆಬಾಗುವುದಾಗಿ ಪ್ರತಿಕ್ರಿಯಿಸಿರುವ ಮಮತಾ, ಈ ಸೋಲಿನಿಂದ ತಮಗೆ ಹಿನ್ನಡೆಯಾಗಿಲ್ಲ.ಚುನಾವಣಾ ಆಯೋಗದ ವಿರುದ್ದ ತೀವ್ರವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ವಿರುದ್ಧ ವೂ ಕಿಡಿಕಾರಿರುವ‌ ಮಮತಾ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದಾರೆ.
ಇಂದು ಬೆಳಗ್ಗೆಯಿಂದ ಆರಂಭವಾದ ಮತ ಎಣಿಕೆಯಲ್ಲಿ ಟಿಎಂಸಿ ನಾಗಾಲೋಟದಲ್ಲಿ ಮುನ್ನಡೆಯುತ್ತಿದ್ದರೆ, ಮಮತಾ ಬ್ಯಾನರ್ಜಿ ಅವರು ಮಾತ್ರ ತೀವ್ರ ಹಿನ್ನಡೆ ಅನುಭವಿಸಿದ್ದರು. ಒಂದು ಕಾಲದ ತಮ್ಮ ಆಪ್ತ ಸಹಾಯಕ ಸುವೇಂದು ಅಧಿಕಾರಿ ಟಿಎಂಸಿಗೆ ಗುಡ್​ಬೈ ಹೇಳಿ, ಬಿಜೆಪಿಯಿಂದ ನಂದಿಗ್ರಾಮ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದರು. ಅಧಿಕಾರಿಗೆ ಪಾಠ ಕಲಿಸುವ ಸಲುವಾಗಿ ಮಮತಾ ಬ್ಯಾನರ್ಜಿ ಅವರು ತಾವು ಸ್ಪರ್ಧೆ ಮಾಡುತ್ತಿದ್ದ ಕ್ಷೇತ್ರವನ್ನು ಬಿಟ್ಟು ನಂದಿಗ್ರಾಮದಲ್ಲಿ ಸ್ಪರ್ಧೆ ಮಾಡಿದ್ದರು. ಆದರೆ, ಅವರು ಅಂದುಕೊಂಡಂತೆ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಮೊದಲ ಸುತ್ತಿನ ಮತ ಎಣಿಕೆ ಆರಂಭದಿಂದಲೂ ಮಧ್ಯಾಹ್ನದವರೆಗೂ ಸುವೇಂದು ಅಧಿಕಾರಿ ಮುನ್ನಡೆ ಕಾಯ್ದುಕೊಂಡಿದ್ದರು. ಒಂದು ಹಂತದಲ್ಲಿ 30 ಸಾವಿರಕ್ಕೂ ಅಧಿಕ ಮತಗಳಿಂದ ಅಧಿಕಾರಿ ಮುಂದಿದ್ದರು. ಆದರೆ, ಮಧ್ಯಾಹ್ನದ ನಂತರ ಫಲಿತಾಂಶದ
ಫಲಿತಾಂಶದ ಚಿತ್ರಣ ಬದಲಾಗಿ ಅಂತಿಮವಾಗಿ ಸುವೆಂದು ಮುಖರ್ಜಿ 1957 ಅಲ್ಪಮತಗಳ‌ ಅಂತರದಿಂದ ಗೆಲುವು ಸಾಧಿಸಿದರು.
290 ಕ್ಷೇತ್ರಗಳಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) 200 ಸ್ಥಾನಗಳನ್ನು ಗೆಲ್ಲುವಲ್ಲಿ ಸಫಲವಾಗಿದೆ. ಆದರೆ, ಪಕ್ಷವನ್ನು ಯಶಸ್ವಿಯಾಗಿ ಮುನ್ನಡೆಸಿದ ಮಮತಾ ತಾವು ಸ್ಪರ್ಧಿಸಿದ್ದ ನಂದಿಗ್ರಾಮ ಕ್ಷೇತ್ರದಲ್ಲಿ ಮಮತಾ ಗೆಲುವು ಸಾಧಿಸುವಲ್ಲಿ ವಿಫಲರಾಗಿ ಮುಖಭಂಗ ಅನುಭವಿಸಬೇಕಾಯಿತು.