ನಂದಿಹಳ್ಳಿಯಲ್ಲಿ ಹಿರಿಯಕಲಾವಿದರಿಗೆ ಸನ್ಮಾನ- ಬಯಲಾಟ ಪ್ರದರ್ಶನ


ಸಂಜೆವಾಣಿ ವಾರ್ತೆ
ಸಂಡೂರು: ಫೆ: 12:  ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಅಧ್ಯಯನ ವಿಭಾಗ ಹಾಗೂ ಶ್ರೀ ಕಾರ್ತಿಕೇಶ್ವರ ಬಯಲಾಟ ಕಲಾ ಬಳಗ ಟ್ರಸ್ಟ್ ಲಕ್ಷ್ಮೀಪುರ-ಸಂಡೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಳ್ಳಾರಿ ಜಿಲ್ಲೆಯ ಬಯಲಾಟ(ದೊಡ್ಡಾಟ) ಕಾರ್ಯಾಗಾರ-2024ರ ವಿಚಾರ ಗೋಷ್ಠಿಯ 2ನೇ ದಿನದ ಕಾರ್ಯಕ್ರಮದಲ್ಲಿ ಬಸರಕೋಡು ಗಾಳಿ ಮಲ್ಲಯ್ಯ ಕೃತ ಭಾರ್ಗವ ಪರಶುರಾಮ ಬಯಲಾಟ ಪ್ರದರ್ಶನ ತಂಡ, ವಿನಾಯಕ ಜ್ಯೋತಿ ಕಲಾಟ್ರಸ್ಟ್ ಕೂಡ್ಲಿಗಿ ಬಯಲಾಟ ಮುಮ್ಮೇಳ ಹಿಮ್ಮೇಳನ ಕಮ್ಮಟ ಎ ಷಣ್ಮುಖಪ್ಪ ಕೊಂಚಿಗೇರಿ ಜಿ.ಸಣ್ಣ ಮುದುಕನಗೌಡ, ದಾಸಾಪುರ ಶ್ರೀ ಹೇಮರೆಡ್ಡಿ ಎಮ್ಮಿಗನೂರು ಈರಣ್ಣ ಕಂಪ್ಲಿ ಇವರಿಂದ ಬಯಲಾಟ ಪ್ರದರ್ಶನ ನಡೆಯಿತು.
ಮಾಜಿ ಬಯಲಾಟ ಆಕಾಡೆಮಿ ಸದಸ್ಯ ಹೆಚ್ ತಿಪ್ಪೇಸ್ವಾಮಿ ಮುದಟನೂರು, ದೇವಲಾಪುರ.ಡಿ. ವಿರೂಪಾಕ್ಷ ಮದ್ದಳೆ ವಾದಕ ಅದ್ಭುತವಾಗಿ ನೆರವೇರಿತು, ಹನುಮಯ್ಯ ಬಾದನಹಟ್ಟಿ ಸಾರಥಿಯಾಗಿ ತಮ್ಮ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ರಾಜಸಾಬ್ ಶ್ರೀಧರಗಡ್ಡೆ ವೇಷಭೂಷಣ ಮಾಜಿ ಬಯಲಾಟ ಅಕಾಡೆಮಿ ಸದಸ್ಯ ತಿಪ್ಪೇಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲಿನ ಉಪನ್ಯಾಸಕ ತಿಪ್ಪೇರುದ್ರ ಸಂಡೂರು ಸಂವಾದ ಕಾರ್ಯಕ್ರಮ ನೆರವೇರಿತು. 2ನೇ ದಿನದ ಕೃತ ಭಾರ್ಗವ ಪರಶುರಾಮ ಬಯಲಾಟದಲ್ಲಿ ಪರಶುರಾಮನಾಗಿ ಕೆ.ಮಲ್ಲಿಕಾಜುನಸ್ವಾಮಿ ಕಾರ್ತವೀರ ಉಪನ್ಯಾಸಕ ರಾಜೇಂದ್ರ ಜಮದಗ್ನಿ ಪೀರಣ್ಣ ಎಮ್ಮಿಗನೂರು ರೇಣುಕಾ ಪಾತ್ರದಲ್ಲಿ ಜ್ಯೋತಿ ಕೂಡ್ಲಿಗಿ ಉತ್ತಮ ಪಾತ್ರ ನಿರ್ವಹಿಸಿದರು. 1ನೇ ದಿನದ ಕುಡುತಿನಿ ನರಸಿಂಗರಾಯ ಕೃತ ನರಸಿಂಗ ರಾಯ ಕೃತ ಪಾಂಡು ವಿಜಯ ಅರ್ಥಾತ್ ದ್ರೌಪದಿ ವಸ್ತ್ರಾಪರಣ ಬಯಲಾಟದಲ್ಲಿ ಕಇಶನ್ ಕುಮಾರ್ ಮೂಡೇ ಬಾಲಕೃಷ್ಣ, ರಾಜ್ಯ ಪ್ರಶಸ್ತಿ ವಿಜೇತ ಯುವಜನ ಮೇಳದ ಪ್ರಕಾಶ್ ಮದ್ದಾನಿ ಗವಿಸಿದ್ದ ಕಾಳಿಂಗೇಋಇ ಕರ್ಣ, ಬಯಲಾಟ ಆಕಾಡಮಿ ಪುರಸ್ಕತ ಕೆ.ಮೌನಚಾರಿ ಧರ್ಮರಾಯ. ಉಮಾಪತಿ ಮೂಡೆ ಅರ್ಜುನನ ರಾಜ್ಯ ಪ್ರಶಸ್ತಿ ಯುವಜನ ಮೇಳ ವಿಜೇತ ಪರೀಕ್ಷಿತಾಚಾರ್ಯ ದುಶ್ಯಾಸನ ಜ್ಯೋತಿ ಕೂಡ್ಲಿಗಿ ಪದ್ಮ ಗಾಂಧಿ ಕೋಟೆ ಅಂಜಿನಮ್ಮ ಕೂಡ್ಲಿಗಿ ದ್ರೌಪದಿ ಪಾತ್ರಗಳು ಉತ್ತಮವಾಗಿ ಮೂಡಿ ಬಂದವು. ಡಾ. ತಿಮ್ಮಣ್ಣ ಭೀಮರಾಯ ಅಧ್ಯಾಪಕರು ಬಿ. ತಾಯಪ್ಪ ಸಂಗೀತ ಮಾಸ್ತರ ಭುಜಂಗನಗರ ಇವರು ಸಂಗೀತ ಸಂಪನ್ಮೂಲ ವ್ಯಕ್ತಿಗಳಾಗಿ ಉತ್ತಮ ಕಾರ್ಯ ನಿರ್ವಹಸಿಇದರು.
ಈ ಸಂದರ್ಭದಲ್ಲಿ ಡಾ. ಬಿ. ಅಂಬಣ್ಣ ಹಿರಿಯ ವೈದ್ಯ ಮರಿಯಮ್ಮನಹಳ್ಳಿ ಇವರ ಅರ್ಧಯಕ್ಷತೆಯಲ್ಲಿ 27 ಕಲವಿದರಿಗೆ ಸನ್ಮಾನಿಸಿ ಗೌರಿವಿಸಿದರು.