
ಬಸವನಬಾಗೇವಾಡಿ: ಸೆ.4:ಸೋಮವಾರದಿಂದ ಐದು ದಿನಗಳ ಕಾಲ ನಡೆಲಿರುವ ಪಟ್ಟಣದ ಆರಾಧ್ಯ ದೈವ ಮೂಲ ನಂದೀಶ್ವರ ಜಾತ್ರಾಮಹೋತ್ಸವದ ದಾಸೋಹಕ್ಕೆ ಮಹಿಳೆಯರು ರೊಟ್ಟಿ ಬುತ್ತಿಯನ್ನ ದೇವಸ್ಥಾನಕ್ಕೆ ನೀಡಿದರು.
ಪಟ್ಟಣದ ವಿರಕ್ತ ಮಠಕ್ಕೆ ಮಹಿಳೆಯರು ತಂದಿದ್ದ ರೊಟ್ಟಿ ಬುತ್ತಿಯನ್ನ ವಿರಕ್ತಮಠದ ಸಿದ್ದಲಿಂಗ ಶ್ರೀಗಳ ಸಾನಿಧ್ಯದಲ್ಲಿ ಬುತ್ತಿಗೆ ಪೂಜೆ ಸಲ್ಲಿಸಿ ನಂತರ ಮಹಿಳೆಯರು ರೊಟ್ಟಿ ಬುಟ್ಟಿಯನ್ನ ತಲೆ ಮೇಲೆ ಹೊತ್ತು ಪಟ್ಟನದ ಪರಮುಖ ಬೀದಿಗಳ ಮೂಲಕ ಸಕಲ ವಾದ್ಯ ಮೇಳಗಳೊಂದಿಗೆ ಸಂಚರಿಸಿ ದೇವಸ್ಥಾನದ ವರೆಗೆ ಮೆರವಣಿಗೆ ನಡಿಸಿದರು, ಮೆರವಣಿಗೆಯುದ್ದಕ್ಕೂ ಬಸವ ನಾಮ ಕೇಳುವ ಜೊತೆಗೆ ಬಸವಧ್ವಜ ರಾರಾಜಿಸಿದವು.
ಮೆರವಣಿಗೆಯಲ್ಲಿ ಜಾತ್ರಾ ಉತ್ಸವ ಸಮಿತಿಯ ಅಧ್ಯಕ್ಷ ಎಂ,ಜೆ, ಆದಿಗೊಂಡ, ಮುಖಂಡರಾದ ಬಸವರಾಜ ಹಾರಿವಾಳ, ಶಂಕರಗೌಡ ಬಿರಾದಾರ, ಮುರಿಗೆಪ್ಪ ಚಿಂಚೊಳಿ, ಮೀಆಸಾಬ ಕೋರಬು, ಸಂಜು ಬಿರಾದಾರ, ಶ್ರೀಕಾಂತ ಪಟ್ಟಣಶೆಟ್ಟಿ, ವಿಶ್ವನಾಥ ಹಿರೇಮಠ, ಬಸವರಾಜ ಅಳ್ಳಗಿ, ಶ್ರೀಕಾಂತ ಕೊಟ್ರಶೆಟ್ಟಿ, ಮುತ್ತು ಡಂಬಳ, ಮನ್ನಾನ ಶಾಬಾದಿ, ಮುತ್ತು ಪತ್ತಾರ, ಚನ್ನು ಶಿವಗೊಂಡ, ಸೇರಿದಂತೆ ಮುಂತಾದವರು ಇದ್ದರು.