ನಂದಿಪುರದಲ್ಲಿ ಜು. 24ರಂದು ಯೋಗ ವಿಜ್ಞಾನ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

ಕಲಬುರಗಿ,ಜು.20:ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ನಂದಿಪುರದ ಪೂಜ್ಯ ಮಹೇಶ್ವರ್ ಸ್ವಾಮಿಗಳ ಮಠದಲ್ಲಿ ಜುಲೈ 24ರಂದು ಯೋಗ ವಿಜ್ಞಾನದ ಕುರಿತು ಒಂದು ದಿನದ ರಾಷ್ಟ್ರ ಮಟ್ಟದ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ ಎಂದು ಸಂಘಟನಾ ಕಾರ್ಯದರ್ಶಿ ಹಾಗೂ ಯೋಗ ತರಬೇತಿದಾರ ಡಾ. ಚಂದ್ರಕಾಂತ್ ಬಿ. ಬಿರಾದಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೌಶಲ್ಯಾಭಿವೃದ್ಧಿ ಆಧಾರಿತ ಕಾರ್ಯಕ್ರಮದಡಿ ಪ್ರಮಾಣಪತ್ರಗಳನ್ನು ಸಹ ವಿತರಿಸಲಾಗುವುದು ಎಂದರು.
ಅಧ್ಯಕ್ಷತೆಯನ್ನು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲಗಳು, ಕೃಷಿ ಮತ್ತು ಸಾಂಸ್ಕøತಿಕ ಸಂಸ್ಥೆಯ ಅಧ್ಯಕ್ಷ ಡಾ. ಬಸವರಾಜ್ ಪಾಟೀಲ್ ಸೇಡಂ ಅವರು ವಹಿಸುವರು. ಮಹೇಶ್ವರ್ ಸ್ವಾಮೀಜಿ, ಗವಿಮಠದ ಡಾ. ಹರಿಶಂತವೀರ ಮಹಾಸ್ವಾಮೀಜಿ, ಬಿ.ಕೆ. ವಿಜಯಾ ಬೆಹನ್ ಅವರು ಘನ ಉಪಸ್ಥಿತಿ ಇರುವರು ಎಂದು ಅವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಪತಂಜಲಿ ಯೋಗ ವಿದ್ಯಾಪೀಠದ ರಾಜ್ಯಾಧ್ಯಕ್ಷ ಭವರಿಲಾಲ್ ಆರ್ಯ, ಗೌರವ ಅತಿಥಿಗಳಾಗಿ ಬಾಬುಲಾಲ್ ಜಿ. ಜೈನ್, ಮಂಜುಳಾ ಡೊಳ್ಳಿ ಅವರು ಆಗಮಿಸುವರು ಎಂದು ಅವರು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಿವಾನಂದ್ ಸಾಲಿಮಠ್, ಮಚೇಂದ್ರನಾಥ್ ಮೂಲಗೆ, ಡಾ. ಮಾಧುರಿ ಸಿ. ಬಿರಾದಾರ್, ಡಾ. ನಿರ್ಮಲಾ ಸಿ. ಕೆಳಮನಿ, ಎಂ.ಬಿ. ಬಸಣ್ಣಾ ಮುಂತಾದವರು ಉಪಸ್ಥಿತರಿದ್ದರು.